AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bizarre news: ವಿಶ್ವದ ಅಪಾಯಕಾರಿ ಬುಡಕಟ್ಟು ಮುರ್ಸಿ, ಅನುಮತಿ ಇಲ್ಲದೆ ಇಲ್ಲಿಗೆ ಹೋದರೆ ಕೊಂದೇ ಬಿಡುತ್ತಾರೆ

Mursi Tribe: ಮುರ್ಸಿ ಬುಡಕಟ್ಟು ಜನಾಂಗವನ್ನು ವಿಶ್ವದ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಒಂದೊಮ್ಮೆ ಅನುಮತಿ ಇಲ್ಲದೆ ಈ ಪ್ರದೇಶಕ್ಕೆ ಹೋದವರನ್ನು ಅವರು ಕೊಂದೇ ಬಿಡುತ್ತಾರೆ.

Bizarre news: ವಿಶ್ವದ ಅಪಾಯಕಾರಿ ಬುಡಕಟ್ಟು ಮುರ್ಸಿ, ಅನುಮತಿ ಇಲ್ಲದೆ ಇಲ್ಲಿಗೆ ಹೋದರೆ ಕೊಂದೇ ಬಿಡುತ್ತಾರೆ
ಮುರ್ಸಿ ಬುಡಕಟ್ಟು ಜನಾಂಗದವರು ವಾಸಿಸುವ ಪ್ರದೇಶಕ್ಕೆ ಹೋದ ಇತರ ಜನಾಂಗದ ಜನರಿಗೆ ಸಾವು ಕಟ್ಟಿಟ್ಟ ಬುತ್ತಿ
Rakesh Nayak Manchi
|

Updated on: May 27, 2023 | 7:00 AM

Share

ಅನೇಕ ಬುಡಕಟ್ಟುಗಳು ಪ್ರಪಂಚದ ವಿವಿಧ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅವರ ಜೀವನಶೈಲಿ (Lifestyle), ಆಹಾರ ಪದ್ಧತಿ ಮತ್ತು ಅವರ ಸಂಪ್ರದಾಯಗಳು ಸಂಪೂರ್ಣವಾಗಿ ಭಿನ್ನ ವಿಭಿನ್ನವಾಗಿವೆ. ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜಾತಿಗಳು ಇನ್ನೂ ಸಾವಿರಾರು ವರ್ಷಗಳ ಹಿಂದಿನ ಸಂಪ್ರದಾಯಗಳನ್ನು ಅನುಸರಿಸುತ್ತವೆ. ಈ ಬುಡಕಟ್ಟುಗಳು ವಾಸಿಸುವ ಕಾಡುಗಳ ಮೇಲೆ ಅವರಿಗೆ ಸಂಪೂರ್ಣ ಹಕ್ಕುಗಳಿವೆ. ದೇಶದ ಸರ್ಕಾರವೂ ಈ ಜನಾಂಗದ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಪ್ರಪಂಚದ ವಿವಿಧ ಭಾಗಗಳಲ್ಲಿ ಕಂಡುಬರುವ ಕೆಲವು ಬುಡಕಟ್ಟುಗಳು ಅತ್ಯಂತ ಅಪಾಯಕಾರಿಯೂ ಆಗಿವೆ. ಅವುಗಳಲ್ಲಿ ಮುರ್ಸಿ ಬುಡಕಟ್ಟು ಒಂದು.

ಮುರ್ಸಿ ಬುಡಕಟ್ಟು ಜನಾಂಗದವರು ದಕ್ಷಿಣ ಇಥಿಯೋಪಿಯಾ ಮತ್ತು ಸುಡಾನ್ ಗಡಿಯಲ್ಲಿರುವ ಓಮನ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಈ ಬುಡಕಟ್ಟಿನ ಜನರು ತಮ್ಮ ಹವ್ಯಾಸಕ್ಕಾಗಿ ಯಾರನ್ನಾದರೂ ಕೊಲ್ಲುತ್ತಾರೆ. ಮಾತ್ರವಲ್ಲದೆ, ಯಾರನ್ನಾದರೂ ಕೊಲ್ಲುವುದು ಪುರುಷತ್ವದ ಸಂಕೇತವಾಗಿದ್ದು, ಯಾರನ್ನೂ ಕೊಲ್ಲದೆ ಬದುಕುವುದಕ್ಕಿಂತ ಸಾಯುವುದು ಉತ್ತಮ ಎಂದು ನಂಬುತ್ತಾರೆ.

ಇದನ್ನೂ ಓದಿ: Bizarre News: ನೋಡಿದಾಕ್ಷಣ ಕಣ್ಮರೆಯಾಗುವ ನೀರು; ವಿಜ್ಞಾನಿಗಳಿಗೂ ಆಶ್ಚರ್ಯ, ಭಾರತದಲ್ಲೇ ಇದೆ ಈ ನಿಗೂಢ ಸಮುದ್ರ

ಈ ಭಯಂಕರ ಮುರ್ಸಿ ಬುಡಕಟ್ಟಿನ ಜನರು ಯಾರನ್ನಾದರೂ ಕೊಲ್ಲುವಂತಹ ಆಯುಧಗಳನ್ನು ಇಟ್ಟುಕೊಳ್ಳುತ್ತಾರೆ. ಈ ಕಾರಣದಿಂದಾಗಿ ಈ ಬುಡಕಟ್ಟು ಜನಾಂಗವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಈ ಬುಡಕಟ್ಟಿನ ವಿಚಿತ್ರ ಸಂಪ್ರದಾಯಗಳ ಬಗ್ಗೆ ಪ್ರಪಂಚದಾದ್ಯಂತ ಈಗಲೂ ಚರ್ಚೆಯಲ್ಲಿದೆ.

ಮಹಿಳೆಯರ ಮೇಲೆ ಇತರರ ಕಣ್ಣು ಬೀಳದಂತೆ ಮಾಡಲು ವಿಚಿತ್ರ ಪ್ಲಾನ್

ಈ ಬುಡಕಟ್ಟಿನ ಮಹಿಳೆಯರನ್ನು ಇತರರ ಕಣ್ಣಿನಿಂದ ರಕ್ಷಿಸಲೂ ಒಂದು ವಿಚಿತ್ರ ಪ್ಲಾನ್ ಮಾಡಿಕೊಂಡಿದ್ದಾರೆ. ಮರದ ಅಥವಾ ಮಣ್ಣಿನ ಡಿಸ್ಕ್ ಅನ್ನು ಅವರ ಕೆಳಗಿನ ತುಟಿಯಲ್ಲಿ ಇಡಲಾಗುತ್ತದೆ. ಇದರಿಂದ ಹೆಣ್ಣಿನ ಸೌಂದರ್ಯ ಕುಂಠಿತವಾಗುತ್ತದೆ ಮತ್ತು ಆಕರ್ಷಕವಾಗಿ ಕಾಣುವುದಿಲ್ಲ ಎಂಬುದು ಈ ಬುಡಕಟ್ಟು ಜನರ ನಂಬಿಕೆಯಾಗಿದೆ.

ಇದನ್ನೂ ಓದಿ: Bizarre News: ವಧುವಿನ ತಲೆ ಬೋಳಿಸಿ ತಂದೆ ಉಗುಳಿ ಆಶೀರ್ವಾದಿಸುವ ವಿಚಿತ್ರ ಪದ್ಧತಿ! ಎಲ್ಲಿದೆ ಗೊತ್ತಾ?

ಪ್ರಪಂಚದಲ್ಲಿ ಮುರ್ಸಿ ಬುಡಕಟ್ಟಿನ ಜನಸಂಖ್ಯೆ ಸುಮಾರು 10 ಸಾವಿರದಷ್ಟಿದೆ. ಆದರೆ ಈ ಬುಡಕಟ್ಟಿನ ಜನರು ಕೊಂದಿರುವವರ ಸಂಖ್ಯೆ ನೂರಾರಿದೆ. ಅವರ ಅನುಮತಿಯಿಲ್ಲದೆ ಯಾರಾದರೂ ಅವರ ಪ್ರದೇಶ ಮತ್ತು ಸಮುದಾಯಕ್ಕೆ ಹೋದರೆ ಈ ಜನರು ಅವರನ್ನು ಕೊಂದೇ ಬಿಡುವುದಿಲ್ಲ.

ಈ ಬುಡಕಟ್ಟಿನ ಹಿಂಸಾತ್ಮಕ ನಡವಳಿಕೆ ಹಿನ್ನೆಲೆ ಇತರೆ ಸಮುದಾಯದ ಜನರು ಅವರೊಂದಿಗಿನ ಸಂಪರ್ಕ ಸಾಧಿಸುವುದನ್ನು ಇಥಿಯೋಪಿಯಾ ಸರ್ಕಾರವು ನಿಷೇಧಿಸಿದೆ. ವಿದೇಶಿಗರು ಅಥವಾ ರಾಷ್ಟ್ರದ ಮುಖ್ಯಸ್ಥರು ಇಥಿಯೋಪಿಯಾಕ್ಕೆ ಸರ್ಕಾರಿ ಅತಿಥಿಯಾಗಿ ಬಂದು ಮುರ್ಸಿ ಬುಡಕಟ್ಟಿನವರನ್ನು ನೋಡಲು ಬಯಸಿದರೆ, ಸರ್ಕಾರವು ಅವರಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಶಸ್ತ್ರಧಾರಿ ಭದ್ರತಾ ಸಿಬ್ಬಂದಿಯ ರಕ್ಷಣೆಯೊಂದಿಗೆ ಬುಡಕಟ್ಟು ಪ್ರದೇಶದ ಪ್ರವಾಸಕ್ಕೆ ಅನುಮತಿ ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ