Bizarre News: ವಧುವಿನ ತಲೆ ಬೋಳಿಸಿ ತಂದೆ ಉಗುಳಿ ಆಶೀರ್ವಾದಿಸುವ ವಿಚಿತ್ರ ಪದ್ಧತಿ! ಎಲ್ಲಿದೆ ಗೊತ್ತಾ?

Rakesh Nayak Manchi

|

Updated on: May 26, 2023 | 7:04 AM

Maasai tribe: ಮಸಾಯಿ ಬುಡಕಟ್ಟು ಸಮುದಾಯದಲ್ಲಿ ವಧುವಿನ ತಲೆ ಬೋಳಿಸಿ ತಂದೆ ಸೇರಿದಂತೆ ಹಿರಿಯರು ಉಗುಳಿ ಆಶೀರ್ವಾದಿಸುವ ವಿಚಿತ್ರ ಪದ್ಧತಿ ಆಚರಣೆಯಲ್ಲಿದೆ ಎಂದು ನಿಮಗೆ ಗೊತ್ತಿದೆಯೇ?

Bizarre News: ವಧುವಿನ ತಲೆ ಬೋಳಿಸಿ ತಂದೆ ಉಗುಳಿ ಆಶೀರ್ವಾದಿಸುವ ವಿಚಿತ್ರ ಪದ್ಧತಿ! ಎಲ್ಲಿದೆ ಗೊತ್ತಾ?
ಮಸಾಯಿ ಬುಟಕಟ್ಟಿನಲ್ಲಿ ವಧುವಿನ ತಲೆ ಬೋಳಿಸಿ ತಂದೆ ಸೇರಿದಂತೆ ಹಿರಿಯರು ಉಗುಳಿ ಆಶೀರ್ವಾದಿಸುವ ವಿಚಿತ್ರ ಪದ್ಧತಿ ಆಚರಣೆಯಲ್ಲಿದೆ
Follow us

ಪ್ರಪಂಚದ ವಿವಿಧ ದೇಶಗಳಲ್ಲಿ ವಿಭಿನ್ನ ಸಂಪ್ರದಾಯಗಳು ಆಚರಣೆಯಲ್ಲಿವೆ. ಈ ಆಧುನಿಕ ಯುಗದಲ್ಲೂ ಅನೇಕ ಸಮುದಾಯಗಳು ತಮ್ಮ ಹಳೆಯ ಸಂಪ್ರದಾಯಗಳನ್ನು ಅನುಸರಿಸುತ್ತಾ ಬಂದಿದ್ದಾರೆ. ಬುಡಕಟ್ಟು ಜನಾಂಗದವರು ಇಂದಿಗೂ ಸಾವಿರಾರು ವರ್ಷಗಳ ಹಿಂದಿನ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಾರೆ. ಈ ಬುಡಕಟ್ಟು ಸಮುದಾಯದಲ್ಲಿ ಕೀನ್ಯಾ ಮತ್ತು ತಾಂಜಾನಿಯಾದಲ್ಲಿ ಕಂಡುಬರುವ ಮಸಾಯಿ ಬುಡಕಟ್ಟು (Maasai tribe) ಕೂಡ ಒಂದಾಗಿದೆ. ಈ ಸಮಯದಾದಲ್ಲಿ ಸ್ವತಃ ತಂದೆಯೇ ಮದುವೆಯಾಗಿ ಹೋಗುತ್ತಿರುವ ಮಗಳ ತಲೆಗೆ ಉಗುಳಿ ಆಶೀರ್ವಾದ ಮಾಡುವ ವಿಚಿತ್ರ ಪದ್ಧತಿ ಆಚರಣೆಯಲ್ಲಿದೆ.

ಈ ಬುಡಕಟ್ಟು ಜನಾಂಗದಲ್ಲಿ ಹೆಣ್ಣು ಮಕ್ಕಳು ಮದುವೆಯ ನಂತರ ಬೀಳ್ಕೊಡುವ ಸಂದರ್ಭದಲ್ಲಿ ತಂದೆ ವಧುವಿನ ತಲೆ ಮತ್ತು ಎದೆಯ ಮೇಲೆ ಉಗುಳುತ್ತಾರೆ. ಆ ಮೂಲಕ ತಂದೆ ತನ್ನ ಮಗಳಿಗೆ ಆಶೀರ್ವಾದ ಮಾಡುತ್ತಾನೆ. ಈ ಸಂಪ್ರದಾಯವು ಈ ಬುಡಕಟ್ಟಿನಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಸಂಪ್ರದಾಯದ ಪ್ರಕಾರ, ಇದು ಮಗಳ ಮೇಲಿನ ಪ್ರೀತಿಯನ್ನು ತೋರಿಸುವ ತಂದೆಯ ವಿಧಾನವಾಗಿದೆ. ಮಗಳು ಕೂಡ ತಂದೆಯ ಉಗುಳುವಿಕೆಯನ್ನು ಆಶೀರ್ವಾದವೆಂದು ಪರಿಗಣಿಸುತ್ತಾಳೆ.

ಇದನ್ನೂ ಓದಿ: Bizarre news: ಪ್ರಪಂಚದ ವಿಚಿತ್ರ ಧಾರ್ಮಿಕ ಪದ್ಧತಿಗಳು, ನೀವು ಎಂದೂ ಕೇಳಿರದ ನೋಡಿರದ ವಿಚಿತ್ರ ಆಚರಣೆಗಳು ಇಲ್ಲಿವೆ ನೋಡಿ

ಆಶ್ಚರ್ಯಕರ ವಿಷಯವೆಂದರೆ ಮದುವೆಯ ನಂತರ ವಧುವಿನ ತಲೆಯನ್ನು ಬೋಳಿಸಲಾಗುತ್ತದೆ. ಇದಾದ ನಂತರ ವಧು ತನ್ನ ತಂದೆಯ ಮುಂದೆ ಮಂಡಿಯೂರಿ ತನ್ನ ಕುಟುಂಬ ಸದಸ್ಯರ ಆಶೀರ್ವಾದವನ್ನು ತೆಗೆದುಕೊಳ್ಳುತ್ತಾಳೆ. ಈ ವೇಳೆ ಎಲ್ಲರೂ ಆಕೆಯ ತಲೆ ಮೇಲೆ ಉಗುಳಿ ಆಶೀರ್ವಾದ ಮಾಡುತ್ತಾರೆ. ಇದನ್ನು ವಧುವಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Bizarre news: ಯುವಕನಂತೆ ಕಾಣಲು ವರ್ಷಕ್ಕೆ 16 ಕೋಟಿ ಖರ್ಚು ಮಾಡುವ 45 ವರ್ಷದ ವ್ಯಕ್ತಿ, ಮಗನ ಪ್ಲಾಸ್ಮವೂ ಬಳಕೆ!

ಮದುವೆಯಾಗಿ ಹೋಗುವಾ ವಧು ಹಿಂದಿರುಗಿ ನೋಡಿದರೆ ಕಲ್ಲು ಆಗುತ್ತಾಳೆ!

ಮಸಾಯಿ ಸಮುದಾಯದಲ್ಲಿ ಉಗುಳುವುದು ಒಂದು ಗೌರವದ ಸಂಕೇತವಾಗಿದೆ. ಈ ಬುಡಕಟ್ಟಿನಲ್ಲಿ ಅತಿಥಿಗಳು ಬಂದಾಗಲೆಲ್ಲಾ ಅವರ ಅಂಗೈ ಮೇಲೆ ಉಗುಳುವ ಮೂಲಕ ಸ್ವಾಗತಿಸಲಾಗುತ್ತದೆ. ಇದಲ್ಲದೆ, ಮದುವೆಯ ನಂತರ, ಹುಡುಗಿ ಹಿಂತಿರುಗಿ ನೋಡುವುದಿಲ್ಲ. ಒಂದು ವೇಳೆ ಹಿಂದಿರುಗಿ ನೋಡಿದರೆ ವಧು ಕಲ್ಲಾಗುತ್ತಾಳೆ ಎಂದು ಈ ಜನಾಂಗದ ಜನರು ನಂಬುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Related Stories

Click on your DTH Provider to Add TV9 Kannada