ಜಗತ್ತಿನಲ್ಲಿ ವಿವಿಧ ಜಾತಿಗಳು ಮತ್ತು ಸಮುದಾಯಗಳ ಜನರು ವಾಸಿಸುತ್ತಿದ್ದಾರೆ. ಇವರು ಅನೇಕ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಹೊಂದಿರುತ್ತಾರೆ. ಅಂತಹ ಧಾರ್ಮಿಕ ಸಂಪ್ರದಾಯಗಳಲ್ಲಿ ಕೆಲವೊಂದು ನಮಗೆ ವಿಚಿತ್ರ ಎನಿಸಬಹುದು. ಈ ಸುದ್ದಿಯಲ್ಲಿ ವಿಶ್ವದ ಕೆಲವು ಧಾರ್ಮಿಕ ಆಚರಣೆಗಳು ಒಳಗೊಂಡಿವೆ.
ಇಂಡೋನೇಷ್ಯಾದ ಡ್ಯಾನಿ ಬುಡಕಟ್ಟು ಜನಾಂಗದಲ್ಲಿ ಒಂದು ವಿಚಿತ್ರ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಇಲ್ಲಿ ಕುಟುಂಬದಲ್ಲಿ ಯಾರಾದರೂ ಸತ್ತಾಗ ಮಹಿಳೆಯರು ತಮ್ಮ ಬೆರಳುಗಳನ್ನು ಕತ್ತರಿಸಬೇಕಾಗುತ್ತದೆ. ಈ ಸಂಪ್ರದಾಯವನ್ನು ನಿಷೇಧಿಸಲಾಗಿದೆ. ಅದಾಗ್ಯೂ, ಕೆಲವು ಹಿರಿಯರು ಈ ಸಂಪ್ರದಾಯವನ್ನು ಈಗಲೂ ಅನುಸರಿಸುತ್ತಿದ್ದಾರೆ. (ಫೋಟೋ: iStock)
ಮಡಗಾಸ್ಕರ್‌ನಲ್ಲಿ ವಾಸಿಸುವ ಮಲಗಾಸಿ ಬುಡಕಟ್ಟು ಜನಾಂಗದಲ್ಲಿ ಫಮದಿಹಾನಾ ಎಂಬ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಈ ಆಚರಣೆಯನ್ನು ಪ್ರತಿ ಏಳು ವರ್ಷಗಳಿಗೊಮ್ಮೆ ಅನುಸರಿಸಲಾಗುತ್ತದೆ. ಈ ಪದ್ಧತಿಯಲ್ಲಿ, ಬುಡಕಟ್ಟು ಜನರು ತಮ್ಮ ಪೂರ್ವಜರ ಮೃತ ದೇಹಗಳನ್ನು ಹೊರತೆಗೆದು ನಂತರ ಹೊಸ ಬಟ್ಟೆಗಳನ್ನು ಸುತ್ತುತ್ತಾರೆ. ಇದರ ನಂತರ ಅವರು ಹಾಡುಗಳನ್ನು ಹಾಡಿ ಸಮಾಧಿಯ ಸುತ್ತಲೂ ನೃತ್ಯ ಮಾಡುತ್ತಾರೆ. ಹೀಗೆ ಮಾಡುವುದರಿಂದ ಅವರ ಪೂರ್ವಜರು ಸಂತೋಷ ಮತ್ತು ಸಮೃದ್ಧಿಯನ್ನು ಹೊಂದಿ ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ. (ಫೋಟೋ: iStock)
ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಪ್ರತಿ ವರ್ಷ ಸಸ್ಯಾಹಾರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ 9 ದಿನಗಳ ಮೊದಲು ಜನರು ಮಾಂಸ ತಿನ್ನುವುದನ್ನು ನಿಲ್ಲಿಸುತ್ತಾರೆ, ಆದರೆ ಈ ಹಬ್ಬದಲ್ಲಿ ಬಹಳ ವಿಚಿತ್ರವಾದ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಇಲ್ಲಿ ಜನರು ತಮ್ಮ ಕೆನ್ನೆ ಮತ್ತು ತುಟಿಗಳನ್ನು ಹರಿತವಾದ ಚಾಕುಗಳು ಅಥವಾ ಕತ್ತಿಗಳಿಂದ ಕತ್ತರಿಸುತ್ತಾರೆ. ಹೀಗೆ ಮಾಡುವುದರಿಂದ ದೇವರು ಕಾಪಾಡುತ್ತಾನೆ ಎಂಬುದು ಜನರ ನಂಬಿಕೆ. (ಫೋಟೋ: iStock)
ಈಜಿಪ್ಟ್‌ನಲ್ಲಿ ಉಪ್ಪನ್ನು ಕೇಳುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಯಾರದೋ ಮನೆಗೆ ಅತಿಥಿಯಾಗಿ ಹೋದಾಗ ಅಪ್ಪಿತಪ್ಪಿಯೂ ಊಟದಲ್ಲಿ ಉಪ್ಪು ಕೇಳಬೇಡಿ. ಈಜಿಪ್ಟ್‌ನಲ್ಲಿ ಉಪ್ಪನ್ನು ಕೇಳುವುದನ್ನು ಆತಿಥೇಯರಿಗೆ ಅವಮಾನವೆಂದು ಪರಿಗಣಿಸಲಾಗುತ್ತದೆ. (ಫೋಟೋ: iStock)
ಮಸಾಯ್ ಎಂಬ ಬುಡಕಟ್ಟು ಉತ್ತರ ಟಾಂಜಾನಿಯಾ, ದಕ್ಷಿಣ ಕೀನ್ಯಾದಲ್ಲಿ ವಾಸಿಸುತ್ತಿದೆ. ಇಲ್ಲಿನ ಜನರು ವಿವಿಧ ಶುಭ ಸಂದರ್ಭಗಳಲ್ಲಿ ಗೋವಿನ ರಕ್ತವನ್ನು ಕುಡಿಯುತ್ತಾರೆ. ಜನನ ಮತ್ತು ಮದುವೆ ಸಂದರ್ಭದಲ್ಲಿ ಜನರು ಇದನ್ನು ರಕ್ತ ಕುಡಿಯುತ್ತಾರೆ. ಮೊದಲು ಬಾಣಗಳಿಂದ ಹಸುವನ್ನು ಗಾಯಗೊಳಿಸುತ್ತಾರೆ ಮತ್ತು ನಂತರ ರಕ್ತವನ್ನು ಹೀರುತ್ತಾರೆ. ಈ ಸಮಯದಲ್ಲಿ ಹಸು ಸಾಯದಂತೆ ವಿಶೇಷ ಕಾಳಜಿ ವಹಿಸಲಾಗುತ್ತದೆ. (ಫೋಟೋ: iStock)
ವಿಚಿತ್ರ ಪದ್ಧತಿಯನ್ನು ಚೀನಾದ ಜನರು ಸಹ ಅನುಸರಿಸುತ್ತಾರೆ. ಇಲ್ಲಿ ಪತಿ ಗರ್ಭಿಣಿ ಪತ್ನಿಯೊಂದಿಗೆ ಉರಿಯುವ ಬೆಂಕಿಯ ಮೇಲೆ ಬರಿಗಾಲಿನಲ್ಲಿ ನಡೆಯಬೇಕು. ಹೀಗೆ ಮಾಡುವುದರಿಂದ ಹೆರಿಗೆ ಸುಲಭವಾಗುತ್ತದೆ ಎಂದು ನಂಬಲಾಗಿದೆ. (ಫೋಟೋ: iStock)
Published On - 7:30 am, Wed, 24 May 23