AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bizarre news: ಪ್ರಪಂಚದ ವಿಚಿತ್ರ ಧಾರ್ಮಿಕ ಪದ್ಧತಿಗಳು, ನೀವು ಎಂದೂ ಕೇಳಿರದ ನೋಡಿರದ ವಿಚಿತ್ರ ಆಚರಣೆಗಳು ಇಲ್ಲಿವೆ ನೋಡಿ

ಜಗತ್ತಿನಲ್ಲಿ ವಾಸಿಸುವ ವಿವಿಧ ಜಾತಿ ಮತ್ತು ಸಮುದಾಯದ ಜನರು ತಮ್ಮದೇ ಆದ ಧಾರ್ಮಿಕ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ಕೆಲವೊಂದು ವಿಚಿತ್ರ ಆಚರಣೆಗಳಿವೆ. ನೀವು ಎಂದೂ ತಿಳಿದಿರದ ಮಾಹಿತಿ ಇಲ್ಲಿದೆ.

Rakesh Nayak Manchi
| Edited By: |

Updated on:May 24, 2023 | 9:51 AM

Share
Bizarre news The strangest religious practices of the world

ಜಗತ್ತಿನಲ್ಲಿ ವಿವಿಧ ಜಾತಿಗಳು ಮತ್ತು ಸಮುದಾಯಗಳ ಜನರು ವಾಸಿಸುತ್ತಿದ್ದಾರೆ. ಇವರು ಅನೇಕ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಹೊಂದಿರುತ್ತಾರೆ. ಅಂತಹ ಧಾರ್ಮಿಕ ಸಂಪ್ರದಾಯಗಳಲ್ಲಿ ಕೆಲವೊಂದು ನಮಗೆ ವಿಚಿತ್ರ ಎನಿಸಬಹುದು. ಈ ಸುದ್ದಿಯಲ್ಲಿ ವಿಶ್ವದ ಕೆಲವು ಧಾರ್ಮಿಕ ಆಚರಣೆಗಳು ಒಳಗೊಂಡಿವೆ.

1 / 7
Bizarre news The strangest religious practices of the world

ಇಂಡೋನೇಷ್ಯಾದ ಡ್ಯಾನಿ ಬುಡಕಟ್ಟು ಜನಾಂಗದಲ್ಲಿ ಒಂದು ವಿಚಿತ್ರ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಇಲ್ಲಿ ಕುಟುಂಬದಲ್ಲಿ ಯಾರಾದರೂ ಸತ್ತಾಗ ಮಹಿಳೆಯರು ತಮ್ಮ ಬೆರಳುಗಳನ್ನು ಕತ್ತರಿಸಬೇಕಾಗುತ್ತದೆ. ಈ ಸಂಪ್ರದಾಯವನ್ನು ನಿಷೇಧಿಸಲಾಗಿದೆ. ಅದಾಗ್ಯೂ, ಕೆಲವು ಹಿರಿಯರು ಈ ಸಂಪ್ರದಾಯವನ್ನು ಈಗಲೂ ಅನುಸರಿಸುತ್ತಿದ್ದಾರೆ. (ಫೋಟೋ: iStock)

2 / 7
Bizarre news The strangest religious practices of the world

ಮಡಗಾಸ್ಕರ್‌ನಲ್ಲಿ ವಾಸಿಸುವ ಮಲಗಾಸಿ ಬುಡಕಟ್ಟು ಜನಾಂಗದಲ್ಲಿ ಫಮದಿಹಾನಾ ಎಂಬ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಈ ಆಚರಣೆಯನ್ನು ಪ್ರತಿ ಏಳು ವರ್ಷಗಳಿಗೊಮ್ಮೆ ಅನುಸರಿಸಲಾಗುತ್ತದೆ. ಈ ಪದ್ಧತಿಯಲ್ಲಿ, ಬುಡಕಟ್ಟು ಜನರು ತಮ್ಮ ಪೂರ್ವಜರ ಮೃತ ದೇಹಗಳನ್ನು ಹೊರತೆಗೆದು ನಂತರ ಹೊಸ ಬಟ್ಟೆಗಳನ್ನು ಸುತ್ತುತ್ತಾರೆ. ಇದರ ನಂತರ ಅವರು ಹಾಡುಗಳನ್ನು ಹಾಡಿ ಸಮಾಧಿಯ ಸುತ್ತಲೂ ನೃತ್ಯ ಮಾಡುತ್ತಾರೆ. ಹೀಗೆ ಮಾಡುವುದರಿಂದ ಅವರ ಪೂರ್ವಜರು ಸಂತೋಷ ಮತ್ತು ಸಮೃದ್ಧಿಯನ್ನು ಹೊಂದಿ ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ. (ಫೋಟೋ: iStock)

3 / 7
Bizarre news The strangest religious practices of the world

ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಪ್ರತಿ ವರ್ಷ ಸಸ್ಯಾಹಾರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ 9 ದಿನಗಳ ಮೊದಲು ಜನರು ಮಾಂಸ ತಿನ್ನುವುದನ್ನು ನಿಲ್ಲಿಸುತ್ತಾರೆ, ಆದರೆ ಈ ಹಬ್ಬದಲ್ಲಿ ಬಹಳ ವಿಚಿತ್ರವಾದ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಇಲ್ಲಿ ಜನರು ತಮ್ಮ ಕೆನ್ನೆ ಮತ್ತು ತುಟಿಗಳನ್ನು ಹರಿತವಾದ ಚಾಕುಗಳು ಅಥವಾ ಕತ್ತಿಗಳಿಂದ ಕತ್ತರಿಸುತ್ತಾರೆ. ಹೀಗೆ ಮಾಡುವುದರಿಂದ ದೇವರು ಕಾಪಾಡುತ್ತಾನೆ ಎಂಬುದು ಜನರ ನಂಬಿಕೆ. (ಫೋಟೋ: iStock)

4 / 7
Bizarre news The strangest religious practices of the world

ಈಜಿಪ್ಟ್‌ನಲ್ಲಿ ಉಪ್ಪನ್ನು ಕೇಳುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಯಾರದೋ ಮನೆಗೆ ಅತಿಥಿಯಾಗಿ ಹೋದಾಗ ಅಪ್ಪಿತಪ್ಪಿಯೂ ಊಟದಲ್ಲಿ ಉಪ್ಪು ಕೇಳಬೇಡಿ. ಈಜಿಪ್ಟ್‌ನಲ್ಲಿ ಉಪ್ಪನ್ನು ಕೇಳುವುದನ್ನು ಆತಿಥೇಯರಿಗೆ ಅವಮಾನವೆಂದು ಪರಿಗಣಿಸಲಾಗುತ್ತದೆ. (ಫೋಟೋ: iStock)

5 / 7
Bizarre news The strangest religious practices of the world

ಮಸಾಯ್ ಎಂಬ ಬುಡಕಟ್ಟು ಉತ್ತರ ಟಾಂಜಾನಿಯಾ, ದಕ್ಷಿಣ ಕೀನ್ಯಾದಲ್ಲಿ ವಾಸಿಸುತ್ತಿದೆ. ಇಲ್ಲಿನ ಜನರು ವಿವಿಧ ಶುಭ ಸಂದರ್ಭಗಳಲ್ಲಿ ಗೋವಿನ ರಕ್ತವನ್ನು ಕುಡಿಯುತ್ತಾರೆ. ಜನನ ಮತ್ತು ಮದುವೆ ಸಂದರ್ಭದಲ್ಲಿ ಜನರು ಇದನ್ನು ರಕ್ತ ಕುಡಿಯುತ್ತಾರೆ. ಮೊದಲು ಬಾಣಗಳಿಂದ ಹಸುವನ್ನು ಗಾಯಗೊಳಿಸುತ್ತಾರೆ ಮತ್ತು ನಂತರ ರಕ್ತವನ್ನು ಹೀರುತ್ತಾರೆ. ಈ ಸಮಯದಲ್ಲಿ ಹಸು ಸಾಯದಂತೆ ವಿಶೇಷ ಕಾಳಜಿ ವಹಿಸಲಾಗುತ್ತದೆ. (ಫೋಟೋ: iStock)

6 / 7
Bizarre news The strangest religious practices of the world

ವಿಚಿತ್ರ ಪದ್ಧತಿಯನ್ನು ಚೀನಾದ ಜನರು ಸಹ ಅನುಸರಿಸುತ್ತಾರೆ. ಇಲ್ಲಿ ಪತಿ ಗರ್ಭಿಣಿ ಪತ್ನಿಯೊಂದಿಗೆ ಉರಿಯುವ ಬೆಂಕಿಯ ಮೇಲೆ ಬರಿಗಾಲಿನಲ್ಲಿ ನಡೆಯಬೇಕು. ಹೀಗೆ ಮಾಡುವುದರಿಂದ ಹೆರಿಗೆ ಸುಲಭವಾಗುತ್ತದೆ ಎಂದು ನಂಬಲಾಗಿದೆ. (ಫೋಟೋ: iStock)

7 / 7

Published On - 7:30 am, Wed, 24 May 23

ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ
New Year 2026: ಹೊಸ ವರ್ಷ ಸ್ವಾಗತಿಸಿದ ಮೊದಲ ದೇಶ ನ್ಯೂಜಿಲೆಂಡ್‌
New Year 2026: ಹೊಸ ವರ್ಷ ಸ್ವಾಗತಿಸಿದ ಮೊದಲ ದೇಶ ನ್ಯೂಜಿಲೆಂಡ್‌
ಹೊಸ ವರ್ಷಾಚರಣೆಗೆ ಬ್ರಿಗೇಡ್, ಎಂಜಿ ರೋಡ್ ಸಜ್ಜು: ಜಮಾಯಿಸುತ್ತಿರುವ ಜನರು
ಹೊಸ ವರ್ಷಾಚರಣೆಗೆ ಬ್ರಿಗೇಡ್, ಎಂಜಿ ರೋಡ್ ಸಜ್ಜು: ಜಮಾಯಿಸುತ್ತಿರುವ ಜನರು