Bizarre news: ಯುವಕನಂತೆ ಕಾಣಲು ವರ್ಷಕ್ಕೆ 16 ಕೋಟಿ ಖರ್ಚು ಮಾಡುವ 45 ವರ್ಷದ ವ್ಯಕ್ತಿ, ಮಗನ ಪ್ಲಾಸ್ಮವೂ ಬಳಕೆ!

ಅಮೆರಿಕದ 45 ವರ್ಷದ ವ್ಯಕ್ತಿ ತನ್ನ ಯೌವನವನ್ನು ಮರಳಿ ಪಡೆಯಲು ಪ್ರತಿವರ್ಷ 16 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಇದರೊಂದಿಗೆ, ಅವರು ತಮ್ಮ ಮಗನ ರಕ್ತವನ್ನು ಸಹ ಬಳಸುತ್ತಿದ್ದಾರೆ.

Bizarre news: ಯುವಕನಂತೆ ಕಾಣಲು ವರ್ಷಕ್ಕೆ 16 ಕೋಟಿ ಖರ್ಚು ಮಾಡುವ 45 ವರ್ಷದ ವ್ಯಕ್ತಿ, ಮಗನ ಪ್ಲಾಸ್ಮವೂ ಬಳಕೆ!
ಯುವಕನಂತೆ ಕಾಣಲು ವರ್ಷಕ್ಕೆ 16 ಕೋಟಿ ಖರ್ಚು ಮಾಡುವ 45 ವರ್ಷದ ವ್ಯಕ್ತಿ, ಮಗನ ಪ್ಲಾಸ್ಮವೂ ಬಳಕೆ
Follow us
Rakesh Nayak Manchi
|

Updated on: May 24, 2023 | 7:08 AM

Bizarre News: ಒಂದಷ್ಟು ತಮ್ಮ ವರ್ಷಗಳು ಹೆಚ್ಚಾಗುತ್ತಿದ್ದಂತೆ ಯಂಗ್ ಆಗಿ ಕಾಣಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಅದೇ ರೀತಿ ಅಮೆರಿಕದ 45 ವರ್ಷ ವ್ಯಕ್ತಿ ತನ್ನ ಯೌವನವನ್ನು ಮರಳಿ ಪಡೆಯಲು ಪ್ರತಿವರ್ಷ 16 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಇದರೊಂದಿಗೆ, ಅವರು ತಮ್ಮ ಮಗನ ಪ್ಲಾಸ್ಮಾ (Plasma) ಸಹ ಬಳಸುತ್ತಿದ್ದಾರೆ. ತನ್ನ ಈ ಕಾರ್ಯಸಾಧನೆಗೆ ವೈದ್ಯರ ತಂಡವನ್ನೇ ಇಟ್ಟುಕೊಂಡಿದ್ದಾರಂತೆ. ಈ ಬಗೆಗಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ.

45 ವರ್ಷದ ಸಾಫ್ಟ್ವೇರ್ ಡೆವಲಪರ್ ಬ್ರಿಯಾನ್ ಜಾನ್ಸನ್ 18 ವರ್ಷದ ಯುವಕನಂತೆ ಕಾಣಲು ಬಯಸುತ್ತಿದ್ದಾರೆ. ಇದಕ್ಕಾಗಿ ಪ್ಲಾಸ್ಮ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ತನ್ನ ಮಗನ ಪ್ಲಾಸ್ ಪಡೆಯುವ ಮೂಲಕ ಸುದ್ದಿಯಲ್ಲಿದ್ದಾರೆ. ಮಾಧ್ಯಮ ವರದಿಯ ಪ್ರಕಾರ, 45 ವರ್ಷದ ಬ್ರಿಯಾನ್ ಜಾನ್ಸನ್ ತನ್ನ 17 ವರ್ಷದ ಮಗ ಟಾಲ್ಮೆಜ್​ನ ರಕ್ತವನ್ನು ಯೌವನವನ್ನು ಮರಳಿ ಪಡೆಯಲು ಬಳಸಿದ್ದಾರೆ.

ವರದಿ ಪ್ರಕಾರ, ಜಾನ್ಸನ್ ಕಳೆದ ತಿಂಗಳು ತನ್ನ 70 ವರ್ಷದ ತಂದೆ ರಿಚರ್ಡ್ ಮತ್ತು ಮಗ ತಾಲ್ಮೇಜ್ ಅವರೊಂದಿಗೆ ಕ್ಲಿನಿಕ್​ಗೆ ಹೋಗಿದ್ದರು. ಸಾಮಾನ್ಯವಾಗಿ ಜಾನ್ಸನ್ ಯಾವಾಗಲೂ ಅಪರಿಚಿತ ದಾನಿಯಿಂದ ಪ್ಲಾಸ್ಮಾ ಪಡೆಯುತ್ತಿದ್ದರು. ಆದರೆ ಈ ಬಾರಿ ಅವರ ಮಗ ತಲ್ಮೆಜ್ ಅವನಿಂದ ಒಂದು ಲೀಟರ್ ರಕ್ತವನ್ನು ದಾನ ಮಾಡಿದ್ದಾರೆ. ಇದರಿಂದ ಪ್ಲಾಸ್ಮಾ ಮತ್ತು ಪ್ಲೇಟ್ಲೆಟ್​ಗಳ ಬ್ಯಾಚ್ ಅನ್ನು ತಯಾರಿಸಲಾಗಿದೆ. ಪ್ರತಿ ಬಾರಿಯಂತೆ, ಬ್ರಿಯಾನ್ ಆ ರಕ್ತವನ್ನು ತನ್ನ ದೇಹಕ್ಕೆ ಹರಿಸುತ್ತಾರೆ.

ಇದನ್ನೂ ಓದಿ: Bizarre: ಅಂಡಮಾನ್​ನ ಜರಾವಾ ಬುಡಕಟ್ಟಿನಲ್ಲಿ ಬಿಳಿ ಮಗು ಜನಿಸಿದರೆ ಕೊಲ್ಲಲಾಗುತ್ತದೆ! ಯಾಕೆ ಗೊತ್ತಾ?

ಮಾಧ್ಯಮ ವರದಿಗಳ ಪ್ರಕಾರ, ತಲ್ಮಾಜ್​ನ ಪ್ಲಾಸ್ಮಾವನ್ನು ಜಾನ್ಸನ್ ಅವರ ರಕ್ತನಾಳಗಳಿಗೆ ಹರಿಸುವುದರ ಜೊತೆಗೆ, ಅವರ ತಂದೆ ರಿಚರ್ಡ್ ಅವರಿಗೂ ಪ್ಲಾಸ್ಮಾವನ್ನು ಹರಿಸಲಾಗಿದೆ. ಜಾನ್ಸನ್ ಅವರು ಉತ್ತಮ ದೇಹದಾಢ್ರ್ಯತೆ ಇರುವ ವ್ಯಕ್ತಿಯಿಂದ ಪ್ಲಾಸ್ಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತದೆ. ವೃದ್ಧಾಪ್ಯ ನಿಗ್ರಹಕ್ಕಾಗಿ ಪ್ಲಾಸ್ಮಾ ಬಳಕೆಯು ಅನೇಕ ವಿಜ್ಞಾನಿಗಳನ್ನು ಅಚ್ಚರಿಗೊಳಿಸಿದೆ. ಬ್ರಿಯಾನ್ ಜಾನ್ಸನ್ ಅವರ ಈ ಪ್ಲಾಸ್ಮ ವಿನಿಮಯ ಪ್ರಕ್ರಿಯೆಯು ಏಪ್ರಿಲ್ 3 ರಂದು ನಡೆದಿದೆ. ತಲ್ಮೆಜ್ ತನ್ನ ರಕ್ತವನ್ನು ತನ್ನ ತಂದೆ ಮತ್ತು ಅಜ್ಜನಿಗೆ ನೀಡಿದ್ದಾರೆ.

45 ವರ್ಷದ ಸಾಫ್ಟ್ವೇರ್ ಡೆವಲಪರ್ ಬ್ರಿಯಾನ್ ಜಾನ್ಸನ್ ಅಮೆರಿಕದವರಾಗಿದ್ದು, ಬಯೋಟೆಕ್ ಕಂಪನಿಯ ಸಿಇಒ ಕೂಡ ಆಗಿದ್ದಾರೆ. ಬ್ರಿಯಾನ್ ತಾನು 18 ವರ್ಷದ ಯುವಕನಂತೆ ಇರಲು ಬಯಸುತ್ತಾರೆ. ಇದಕ್ಕಾಗಿ ಪ್ರತಿವರ್ಷ 16 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡುತ್ತಾರೆ. ವರದಿಯ ಪ್ರಕಾರ, 30 ವೈದ್ಯರು ಮತ್ತು ವೈದ್ಯಕೀಯ ತಜ್ಞರ ತಂಡವು ಜಾನ್ಸನ್ ಕಾರ್ಯಸಾಧನೆಗಾಗಿ ಕೆಲಸ ಮಾಡುತ್ತಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ