Kitchen Hacks: ಬೇಸಿಗೆಯಲ್ಲಿ ಶುಂಠಿ-ಬೆಳ್ಳುಳ್ಳಿ ಹೆಚ್ಚು ದಿನಗಳವರೆಗೆ ಸಂಗ್ರಹಿಸಿಡಲು ಈ ಸಲಹೆಗಳನ್ನು ಅನುಸರಿಸಿ ಸಾಕು!

ಶುಂಠಿಯನ್ನು ಕತ್ತರಿಸಿ ಅಥವಾ ಸಿಪ್ಪೆ ಸುಲಿದು ಬಳಸುವುದು ಬೇಡಾ, ಹಾಗೆಯೇ ಇಡಿಯಾಗಿರಲಿ ಎಂದುಕೊಳ್ಳುವುದಿದ್ದರೆ, ಶುಂಠಿ ವ್ಯರ್ಥವಾಗುವುದನ್ನು ತಡೆಯಲು ಶುಂಠಿಯನ್ನು ಪ್ಲಾಸ್ಟಿಕ್ ಕವರ್​​ನಲ್ಲಿ ಸುತ್ತಿ ಫ್ರಿಡ್ಜ್ ನಲ್ಲಿಡಿ.

Kitchen Hacks: ಬೇಸಿಗೆಯಲ್ಲಿ ಶುಂಠಿ-ಬೆಳ್ಳುಳ್ಳಿ ಹೆಚ್ಚು ದಿನಗಳವರೆಗೆ ಸಂಗ್ರಹಿಸಿಡಲು ಈ ಸಲಹೆಗಳನ್ನು ಅನುಸರಿಸಿ ಸಾಕು!
ಬೇಸಿಗೆಯಲ್ಲಿ ಶುಂಠಿ-ಬೆಳ್ಳುಳ್ಳಿ ಹೆಚ್ಚು ದಿನಗಳವರೆಗೆ ಸಂಗ್ರಹಿಸಿಡಲು ಸಲಹೆ
Follow us
ಸಾಧು ಶ್ರೀನಾಥ್​
|

Updated on: May 24, 2023 | 11:23 AM

ಭಾರತೀಯ ಅಡುಗೆ ಮನೆಯಲ್ಲಿ ಶುಂಠಿ-ಬೆಳ್ಳುಳ್ಳಿಗೆ ವಿಶೇಷ ಸ್ಥಾನವಿದೆ. ಹಾಗೆಯೇ, ಶುಂಠಿ-ಬೆಳ್ಳುಳ್ಳಿ ಇಲ್ಲದ ಭಾರತೀಯ ತಿನಿಸು ಇಲ್ಲ. ಇದನ್ನು ಬಹುತೇಕ ಅಡುಗೆಗಳಲ್ಲಿ ಬಳಸಲಾಗುತ್ತದೆ. ಮಾಂಸದಲ್ಲಿ ಶುಂಠಿ (ginger) ಮತ್ತು ಬೆಳ್ಳುಳ್ಳಿ (garlic) ಇಲ್ಲದಿದ್ದರೆ ರುಚಿ ಇರುವುದಿಲ್ಲ. ಶುಂಠಿ ಮತ್ತು ಬೆಳ್ಳುಳ್ಳಿ ಇಲ್ಲದ ಭಕ್ಷ್ಯಗಳನ್ನು ನಿಜವಾಗಿಯೂ ಊಹಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಶುಂಠಿ ಬೆಳ್ಳುಳ್ಳಿಯನ್ನು ಕೆಲವು ಪಾಕ ವಿಧಾನಗಳಲ್ಲಿ ಊಟದಿಂದ ರಾತ್ರಿಯ ಊಟದವರೆಗೆ ಬಳಸಲಾಗುತ್ತದೆ. ಇವೆರಡೂ ಆರೋಗ್ಯಕ್ಕೆ ಒಳ್ಳೆಯದು. ಅವುಗಳ ಸೇವನೆಯು ಆರೋಗ್ಯದ (health) ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ಆಹಾರದ ರುಚಿಯನ್ನು ಹೆಚ್ಚಿಸುತ್ತದೆ (Kitchen Hacks). ಆದರೆ ಹೆಚ್ಚಿನ ಒಣ ಹವೆ, ಶಾಖವು ಶುಂಠಿ ಬೆಳ್ಳುಳ್ಳಿ ಹಾಳಾಗಲು ಅಥವಾ ಒಣಗಲು ಕಾರಣವಾಗಬಹುದು. ಇಂತಹ ಸಂದರ್ಭಗಳಲ್ಲಿ ಮಹಿಳೆಯರು ಅದನ್ನು ಮತ್ತೆ ಮತ್ತೆ ಖರೀದಿ ಮಾಡಿ, ದುಂದುವೆಚ್ಚ ಮಾಡುವುದನ್ನು ತಪ್ಪಿಸಲು ಶುಂಠಿ, ಬೆಳ್ಳುಳ್ಳಿಯನ್ನು ಎಷ್ಟು ಬೇಕೋ ಅಷ್ಟು ಖರೀದಿಸಬೇಕಾಗುತ್ತದೆ. ಮತ್ತೊಂದೆಡೆ, ನೀವು ಬಹಳಷ್ಟು ಶುಂಠಿ ಬೆಳ್ಳುಳ್ಳಿಯನ್ನು ಸಂಗ್ರಹಿಸುತ್ತಿದ್ದರೆ (preservation), ಅದನ್ನು ಕೆಡದಂತೆ ಹೆಚ್ಚು ಕಾಲ ಸಂಗ್ರಹಿಸಬಹುದು ಎಂದು ತಿಳಿದು ತಾಜಾವಾಗಿರಲು ಕೆಲವು ಸಲಹೆಗಳು ಇಲ್ಲಿವೆ. ಬೇಸಿಗೆಯಲ್ಲಿ ಶುಂಠಿ ಬೆಳ್ಳುಳ್ಳಿ ಹಾಳಾಗುವುದನ್ನು ತಪ್ಪಿಸಲು ಕೆಲ ಶೇಖರಣಾ ವಿಧಾನಗಳ ಬಗ್ಗೆ ತಿಳಿಯೋಣ.

– ಸಿಪ್ಪೆ ಸುಲಿದ ಶುಂಠಿಯನ್ನು ಗಾಳಿಯಾಡದ ಚೀಲದಲ್ಲಿ ಇರಿಸಿ ಅಥವಾ ರೆಫ್ರಿಜರೇಟರ್​ನಲ್ಲಿ ಇರಿಸಿ. ಗಾಳಿಯಾಡದ ಚೀಲವು ತೇವಾಂಶ ಮತ್ತು ಆಮ್ಲಜನಕವನ್ನು ಶುಂಠಿಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಹಾಗಾಗಿ ಶುಂಠಿ ಕೆಡುವುದಿಲ್ಲ. ಬೇಸಿಗೆಯಲ್ಲಿ ಶುಂಠಿಗೆ ಬೂಜು ಬರುವುದುಂಟು. ಹಾಗಾಗಿ ಶುಂಠಿಯನ್ನು ಗಾಳಿಯಾಡದ ಚೀಲದಲ್ಲಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದರೆ ಎರಡು ತಿಂಗಳವರೆಗೆ ಇರುತ್ತದೆ.

– ಶುಂಠಿಯನ್ನು ಕತ್ತರಿಸಿ ಅಥವಾ ಸಿಪ್ಪೆ ಸುಲಿದು ಬಳಸುವುದು ಬೇಡಾ, ಹಾಗೆಯೇ ಇಡಿಯಾಗಿರಲಿ ಎಂದುಕೊಳ್ಳುವುದಿದ್ದರೆ, ಶುಂಠಿ ವ್ಯರ್ಥವಾಗುವುದನ್ನು ತಡೆಯಲು ಶುಂಠಿಯನ್ನು ಪ್ಲಾಸ್ಟಿಕ್ ಕವರ್​​ನಲ್ಲಿ ಸುತ್ತಿ ಫ್ರಿಡ್ಜ್ ನಲ್ಲಿಡಿ. ನೀವು ಕತ್ತರಿಸಿದ ಶುಂಠಿಯನ್ನು ಗಾಳಿಯಾಡದ ಕಂಟೇನರ್‌ನಲ್ಲಿ ಫ್ರಿಜ್‌ನಲ್ಲಿ ಸಂಗ್ರಹಿಸಬಹುದು. ಶುಂಠಿಯನ್ನು ಎರಡು ತಿಂಗಳು ಕೆಡದಂತೆ ಬಳಸಬಹುದು.

ಬೆಳ್ಳುಳ್ಳಿಯನ್ನು ತಾಜಾ ಆಗಿ ಸಂಗ್ರಹಿಸಲು ಸಲಹೆಗಳು:

-ಬೆಳ್ಳುಳ್ಳಿಯನ್ನು 6 ತಿಂಗಳ ಕಾಲ ಅನುಕೂಲಕರವಾಗಿ ಸಂಗ್ರಹಿಸಬಹುದು. ಇದಕ್ಕಾಗಿ ಬೆಳ್ಳುಳ್ಳಿ ಖರೀದಿಸುವಾಗ ಅದು ಮೊಳಕೆ ಬಾರದಂತೆ ನೋಡಿಕೊಳ್ಳಿ. ಅಂತಹ ಬೆಳ್ಳುಳ್ಳಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು, ಬೆಳಕಿನಿಂದ ದೂರವಿರುವ ತೆರೆದ ಸ್ಥಳದಲ್ಲಿ ಇರಿಸಿ. ಅಂದರೆ, ಚೀಲಗಳಲ್ಲಿ ಅಥವಾ ಪಾತ್ರೆಗಳಲ್ಲಿ ಪ್ಯಾಕ್ ಮಾಡಬೇಡಿ.

– ನೀವು ಸಿಪ್ಪೆ ಸುಲಿದ ಅಥವಾ ಕತ್ತರಿಸಿದ ಬೆಳ್ಳುಳ್ಳಿ ಎಸಳನ್ನು ಪ್ರತ್ಯೇಕವಾಗಿ ಶೇಖರಿಸಿಡಬಯಸಿದರೆ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ ಮತ್ತು ಫ್ರಿಜ್ನಲ್ಲಿ ಇರಿಸಿ. ಬೆಳ್ಳುಳ್ಳಿ ಎರಡರಿಂದ ಮೂರು ವಾರಗಳವರೆಗೆ ಉಪಯುಕ್ತವಾಗಿರುತ್ತದೆ. ಅದೇ ಬೆಳ್ಳುಳ್ಳಿಯನ್ನು ಕತ್ತರಿಸಿದರೆ ದೀರ್ಘ ಕಾಲ ಶೇಖರಣೆ ಮಾಡಿಡುವುದು ಸಾಧ್ಯವಾಗುವುದಿಲ್ಲ.

-ಜನರು ಬೆಳ್ಳುಳ್ಳಿಯನ್ನು ಫ್ರಿಡ್ಜ್ ನಲ್ಲಿ ಇಡುವುದಿಲ್ಲ. ಆದರೆ ಸರಿಯಾದ ಕ್ರಮದಲ್ಲಿ ಫ್ರಿಡ್ಜ್ ನಲ್ಲಿಟ್ಟರೆ ಬೆಳ್ಳುಳ್ಳಿ ತಾಜಾವಾಗಿರುತ್ತದೆ. ಇದಕ್ಕಾಗಿ ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿ ರೆಫ್ರಿಜರೇಟರ್ ನಲ್ಲಿಟ್ಟರೆ ಅದು ತಿಂಗಳಾನುಗಟ್ಟಲೆ ತಾಜಾವಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ