Summer Health Tips: ತಾಪಮಾನವು 45 ಡಿಗ್ರಿಗಳನ್ನು ದಾಟಿದಾಗ ದೇಹದಲ್ಲಿ ಸಂಭವಿಸಬಹುದಾದ ಬದಲಾವಣೆಗಳು

ಈ ಸುಡುವ ಬೇಸಿಗೆಯ ದಿನಗಳಲ್ಲಿ, ಶಾಖದ ತೀವ್ರತೆಯು ಭಾರತದ ವಿವಿಧ ಭಾಗಗಳಲ್ಲಿನ ಜನರನ್ನು ತತ್ತರಿಸುವಂತೆ ಮಾಡಿದೆ. ಶಾಖವು 45 ಡಿಗ್ರಿಗಳಿಗಿಂತ ಹೆಚ್ಚಾದಾಗ ದೇಹವು ಅದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಮತ್ತು ದೇಹದಲ್ಲಿ ಆಗಬಹುದಾದ ಬದಲಾವಣೆಗಳ ಕುರಿತ ಮಾಹಿತಿ ಇಲ್ಲಿದೆ.

Summer Health Tips: ತಾಪಮಾನವು 45 ಡಿಗ್ರಿಗಳನ್ನು ದಾಟಿದಾಗ ದೇಹದಲ್ಲಿ ಸಂಭವಿಸಬಹುದಾದ ಬದಲಾವಣೆಗಳು
Summer Health Tips
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: May 24, 2023 | 3:33 PM

ಭಾರತದ ಹಲವು ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಶಾಖದ ಅಲೆಗಳು ಕಾಣಿಸಿಕೊಳ್ಳುತ್ತಿದೆ. ಜನರು ಈ ಸುಡುವ ತಾಪಮಾನಕ್ಕೆ ತತ್ತರಿಸಿ ಹೋಗಿದ್ದಾರೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ದೆಹಲಿಯ ನಜಾಫ್ ಗಢದಲ್ಲಿ 46.2 ಡಿಗ್ರಿ ಸೆಲ್ಸಿಯಸ್ ಗರಿಷ್ಟ ತಾಪಮಾನ ದಾಖಲಾಗಿದೆ. ಇಂತಹ ಏರುತ್ತಿರುವ ತಾಪಮಾನದೊಂದಿಗೆ, ನಮ್ಮ ದೇಹವು ನಿಸ್ಸಂಶಯವಾಗಿ ಅನಾನುಕೂಲತೆಯನ್ನು ಅನುಭವಿಸುತ್ತದೆ ಮತ್ತು ದೇಹವು ಹೆಚ್ಚಿದ ಶಾಖ ಮತ್ತು ಆರ್ದ್ರತೆಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ದೇಹದ ಸಾಮಾನ್ಯ ತಾಪಮಾನವು 37 ರಿಂದ 38 ಡಿಗ್ರಿಗಳವರೆಗೆ ಇರುತ್ತದೆ. ತಾಪಮಾನವು ಹೆಚ್ಚಾದಂತೆ ಮೆದುಳು ಸ್ನಾಯುಗಳನ್ನು ನಿಧಾನಗೊಳಿಸಲು ಸೂಚನೆ ನೀಡುತ್ತದೆ. ಬೆವರು ಗ್ರಂಥಿಗಳು ಹೆಚ್ಚು ಬೆವರು ಬಿಡುಗಡೆ ಮಾಡುತ್ತದೆ ಮತ್ತು ರಕ್ತದ ಹರಿವು ವೇಗವಾಗಿ ಹೆಚ್ಚುತ್ತದೆ, ಇದು ದೇಹದಲ್ಲಿ ಹೆಚ್ಚಿನ ಶಾಖವನ್ನು ಉತ್ಪಾದಿಸಲು ಕಾರಣವಾಗುತ್ತದೆ. ತಾಪಮಾನವು 45 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಿದಾಗ ಮಾನವನ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಇಲ್ಲಿದೆ.

ವಿಪರೀತ ಶಾಖಕ್ಕೆ ನಿಮ್ಮ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ:

ಅತಿಯಾದ ಬೆವರು:

ಹೆಚ್ಚಿದ ತಾಪಮಾನಕ್ಕೆ ದೇಹದ ಸಾಮಾನ್ಯ ಮತ್ತು ತಕ್ಷಣದ ಪ್ರತಿಕ್ರಿಯೆಯೆಂದರೆ ಬೆವರುವಿಕೆ. ಬೆವರುವಿಕೆಯು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆವರುವಿಕೆಯು ನಮ್ಮ ದೇಹದ ನೈಸರ್ಗಿಕ ತಂಪಾಗಿಸುವ ಕಾರ್ಯವಿಧಾನವಾಗಿದೆ. ತಾಪಮಾನವು 45 ಡಿಗ್ರಿಗಳಿಗಿಂತ ಹೆಚ್ಚಾದಾಗ ಬೆವರು ಗ್ರಂಥಿಗಳು ಬೆವರು ಬಿಡುಗಡೆ ಮಾಡಲು ಹೆಚ್ಚು ಶ್ರಮಿಸುತ್ತದೆ. ಬೆವರುವಿಕೆಯು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಅಧಿಕ ಬಿಸಿಯಾಗುವಿಕೆಯನ್ನು ತಡೆಯುತ್ತದೆ. ಇದು ಎಲೆಕ್ಟ್ರೋಲೈಟ್ ಮತ್ತು ನೀರಿನ ನಷ್ಟವನ್ನು ಉಂಟುಮಾಡುತ್ತದೆ. ಇದರಿಂದ ಈ ಕಠಿಣ ಸಮಯದಲ್ಲಿ ನಿರ್ಜಲೀಕರಣ ಮತ್ತು ಅದರ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಾಕಷ್ಟು ಪ್ರಮಾಣದಲ್ಲಿ ದ್ರವಾಂಶವನ್ನು ಸೇವನೆ ಮಾಡುವ ಮೂಲಕ ಪುನರ್ಜಲೀಕರಣ ಮಾಡುವುದು ಅತ್ಯಗತ್ಯ.

ರಕ್ತನಾಳಗಳ ವಿಸ್ತರಣೆ:

ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ, ದೇಹದಲ್ಲಿನ ರಕ್ತನಾಳಗಳು ವಾಸೋಡಿಲೇಷನ್ ಎಂದು ಕರೆಯಲ್ಪಡುವ ಪ್ರಕ್ರಿಯೆಯನ್ನು ವಿಸ್ತರಿಸಲು ಪ್ರಾರಂಭಿಸುತ್ತವೆ. ವಾಸೋಡಿಲೇಷನ್ ಎನ್ನುವುದು ಹೆಚ್ಚಿದ ಶಾಖಕ್ಕೆ ಪ್ರತಿಕ್ರಿಯೆಯಾಗಿ ರಕ್ತನಾಳಗಳು ವಿಸ್ತರಿಸುವ ಪ್ರಕ್ರಿಯೆಯಾಗಿದೆ. ರಕ್ತನಾಳಗಳ ಈ ವಿಸ್ತರಣೆಯು ಶಾಖದ ಹರಡುವಿಕೆಗೆ ಕಾರಣವಾಗುತ್ತದೆ. ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಕೆಲವೊಮ್ಮೆ ಈ ರಕ್ತನಾಳಗಳ ವಿಸ್ತರಣೆಯು ಕಡಿಮೆ ರಕ್ತದೊತ್ತಡದ ಮಟ್ಟಗಳಿಗೆ ಕಾರಣವಾಗಬಹುದು. ಇದು ಮತ್ತಷ್ಟು ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವಿಕೆಗೆ ಕಾರಣವಾಗುತ್ತದೆ.

ಇದನ್ನೂ ಓದಿ:

ತ್ವರಿತ ಹೃದಯ ಬಡಿತ:

ಮಾನವನ ದೇಹವು ಸುಡುವ ಶಾಖವನ್ನು ಅನುಭವಿಸಿದಾಗ, ಹೃದಯ ಬಡಿತವು ಹೆಚ್ಚಾಗುತ್ತದೆ. ಮಾನವನ ದೇಹವು ಹೆಚ್ಚಿದ ತಾಪಮಾನವನ್ನು ಒತ್ತಡವಾಗಿ ತೆಗೆದುಕೊಳ್ಳುತ್ತದೆ ಮತ್ತು ದೇಹದ ವಿವಿಧ ಭಾಗಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಸಾಗಿಸಲು ಹೃದಯದ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಅದಕ್ಕೆ ಪ್ರತಿಕ್ರಿಯಿಸುತ್ತದೆ. ಈಗಾಗಲೇ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಜನರು ಹೆಚ್ಚಿನ ಶಾಖದ ಸಮಯದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಚರ್ಮದ ಬದಲಾವಣೆ:

ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಳ್ಳುವುದರಿಂದ ಸನ್ ಬರ್ನ್, ಶುಷ್ಕ ತ್ವಚೆಯಂತಹ ವಿವಿಧ ಚರ್ಮ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ತೀವ್ರವಾದ ಶಾಖವು ಚರ್ಮವನ್ನು ಒಣಗಿಸಬಹುದು ಮತ್ತು ಉರಿಯೂತ ಹಾಗೂ ಚರ್ಮವು ಕೆಂಪು ಬಣ್ಣಕ್ಕೆ ತಿರುಗಲು ಕಾರಣವಾಗಬಹುದು. ಸೂರ್ಯನ ನೇರಳಾತೀತ ಕಿರಣವು ದೀರ್ಘಾವಧಿಯ ಚರ್ಮದ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಪ್ರತಿನಿತ್ಯ ತ್ವಚೆಗೆ ಸನ್ಸ್ಕ್ರೀನ್ ಅನ್ವಯಿಸಬೇಕು.

ಶಾಖದ ಬಳಲಿಕೆ ಮತ್ತು ಶಾಖದ ಹೊಡೆದ:

ತೀವ್ರವಾದ ಬಿಸಿಲಿನ ಶಾಖವು, ಶಾಖದ ಬಳಲಿಕೆ ಮತ್ತು ಶಾಖದ ಹೊಡೆತದಂತಹ ಶಾಖಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅತಿಯಾದ ಬೆವರುವಿಕಯಿಂದ ದೇಹವು ಗಮನಾರ್ಹ ಪ್ರಮಾಣದ ನೀರು ಮತ್ತು ಎಲೆಕ್ಟ್ರೋಲೈಟ್ ಅಂಶಗಳನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ಶಾಖದ ಬಳಲಿಕೆ ಉಂಟಾಗುತ್ತದೆ. ಪರಿಣಾಮವಾಗಿ ತಲೆ ತಿರುಗುವಿಕೆ, ಆಯಾಸ, ವಾಕರಿಕೆ ಮತ್ತು ಸ್ನಾಯುಗಳ ಸೆಳೆತಗಳಂತ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಜೀವನಶೈಲಿಗೆ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ