ನಾಳೆ ಅಮಿತ್ ಶಾ ರಿಪೋರ್ಟ್ ಕಾರ್ಡ್ ಕೇಳಿದಾಗ ಇಸ್ರೋ ಮಾಡಿದ್ದು ನಾವು ಎಂದು ಹೇಳಿ: ಮಲ್ಲಿಕಾರ್ಜುನ ಖರ್ಗೆ
Mallikarjun Kharge in Telangana: "ನಾಳೆ ಶಾ (ಅಮಿತ್) ಬರುತ್ತಿದ್ದಾರೆ, ಕಳೆದ 53 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ, ನಮಗೆ ರಿಪೋರ್ಟ್ ಕಾರ್ಡ್ ಕೊಡಿ ಎಂದು ಕೇಳುತ್ತಾರೆ, ಅವರು ಮೊದಲು 70 ವರ್ಷ ಎಂದು ಹೇಳುತ್ತಿದ್ದರು ಆದರೆ ಈಗ ಅವರು ಸಮಯವನ್ನು ಕಡಿತಗೊಳಿಸಿ 53 ವರ್ಷಕ್ಕೆ ಇಳಿಸಿದ್ದಾರೆ. ಬಿಜೆಪಿ ಸರ್ಕಾರಗಳು, ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಏನು ಮಾಡಿದೆ ಎಂದು ಶಾ ಅವರಿಗೆ ಹೇಳಿ. ಹೈದರಾಬಾದ್ ಅನ್ನು ದೇಶದೊಂದಿಗೆ ಒಂದುಗೂಡಿಸಿದವರು ಯಾರು? ಅದು ಮಾಡಿದ್ದು ಕಾಂಗ್ರೆಸ್ ಎಂದು ಅವರಿಗೆ ಹೇಳಿ ಎಂದಿದ್ದಾರೆ ಮಲ್ಲಿಕಾರ್ಜುನ ಖರ್ಗೆ.
ಹೈದರಾಬಾದ್ ಆಗಸ್ಟ್ 26: ಭಾರತ್ ರಾಷ್ಟ್ರ ಸಮಿತಿ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrasekhar Rao) ಅವರು ವಿರೋಧ ಪಕ್ಷದ ಮೈತ್ರಿ ಇಂಡಿಯಾದ ಯಾವುದೇ ಸಭೆಗೆ ಏಕೆ ಹಾಜರಾಗಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಲ್ಲಿ ಕೇಳಿದಾಗ, ಬಿಜೆಪಿ ಮತ್ತು ಬಿಆರ್‌ಎಸ್ (BRS) ಈಗ ಗೆಳೆಯರು. ಕೆಲವು ಒಳ ಒಪ್ಪಂದಗಳಿರುವಾಗ ಪರಸ್ಪರರ ವಿರುದ್ಧ ಮಾತನಾಡಲು ಸಾಧ್ಯವಿಲ್ಲ. ಕೆಸಿಆರ್ ಬಿಜೆಪಿ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿದ್ದಾರೆ ಎಂದು ನಾನು ಕೇಳಿದ್ದೇನೆ ಎಂದು ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಖರ್ಗೆ, ಕೇಂದ್ರದಲ್ಲಿ ಮೋದಿ ವಿರುದ್ಧ ಹೋರಾಡಲು 26 ಪಕ್ಷಗಳು ಒಟ್ಟಾಗಿವೆ. ಆದರೆ ನಿಮ್ಮ ಕೆಸಿಆರ್ ಯಾವುದೇ ಸಭೆಗೆ ಹಾಜರಾಗಿಲ್ಲ. ಮೋದಿಯನ್ನು ಸೋಲಿಸಲು ಎಲ್ಲಾ ಜಾತ್ಯತೀತ ಪಕ್ಷಗಳು ಒಗ್ಗೂಡುತ್ತಿವೆಯೇ ಎಂದು ಅವರು ಕೇಳಲಿಲ್ಲ. BRS ತಮ್ಮನ್ನು ಜಾತ್ಯತೀತ ಪಕ್ಷ ಎಂದು ಕರೆದುಕೊಳ್ಳುತ್ತಾರೆ ಆದರೆ ರಹಸ್ಯವಾಗಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಆದರೆ ನಾವು ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟಿಗೆ ತರುತ್ತಿದ್ದೇವೆ. ನಾವು ಪಾಟ್ನಾದಲ್ಲಿ ಸಭೆಗಳನ್ನು ನಡೆಸಿದ್ದೇವೆ, ನಂತರ ನನ್ನ ಮನೆಯಲ್ಲಿ ಮತ್ತು ಅಂತಹ ಸಭೆಗಳು ಇನ್ನಷ್ಟು ನಡೆಯುತ್ತವೆ. ಬಿಜೆಪಿಯನ್ನು ಕೇಂದ್ರದಿಂದ ಮತ್ತು ಕೆಸಿಆರ್‌ನಂತಹ ಬಿಜೆಪಿಯನ್ನು ಬೆಂಬಲಿಸುವವರನ್ನು ರಾಜ್ಯದಿಂದ ತೊಲಗಿಸುವುದು ನಮ್ಮ ಗುರಿ ಎಂದು ಖರ್ಗೆ ಹೇಳಿದರು.
ప్రజలందరూ అలోచించి.. వోట్ వేయండి : Congress President Mallikarjun Kharge | TS Politics – TV9#MallikarjunKharge #Congress #Chevella #Telangana pic.twitter.com/jsVnKBDOOB
— TV9 Telugu (@TV9Telugu) August 26, 2023
“ನಾಳೆ ಶಾ (ಅಮಿತ್) ಬರುತ್ತಿದ್ದಾರೆ, ಕಳೆದ 53 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ, ನಮಗೆ ರಿಪೋರ್ಟ್ ಕಾರ್ಡ್ ಕೊಡಿ ಎಂದು ಕೇಳುತ್ತಾರೆ, ಅವರು ಮೊದಲು 70 ವರ್ಷ ಎಂದು ಹೇಳುತ್ತಿದ್ದರು ಆದರೆ ಈಗ ಅವರು ಸಮಯವನ್ನು ಕಡಿತಗೊಳಿಸಿ 53 ವರ್ಷಕ್ಕೆ ಇಳಿಸಿದ್ದಾರೆ. ಬಿಜೆಪಿ ಸರ್ಕಾರಗಳು, ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಏನು ಮಾಡಿದೆ ಎಂದು ಶಾ ಅವರಿಗೆ ಹೇಳಿ. ಹೈದರಾಬಾದ್ ಅನ್ನು ದೇಶದೊಂದಿಗೆ ಒಂದುಗೂಡಿಸಿದವರು ಯಾರು? ಅದು ಮಾಡಿದ್ದು ಕಾಂಗ್ರೆಸ್ ಎಂದು ಅವರಿಗೆ ಹೇಳಿ ಎಂದಿದ್ದಾರೆ ಮಲ್ಲಿಕಾರ್ಜುನ ಖರ್ಗೆ.
ಪಟೇಲ್ ಮತ್ತು ನೆಹರು 1947 ರ ನಂತರ ಛಿದ್ರಗೊಂಡ ದೇಶವನ್ನು ಒಂದುಗೂಡಿಸಿದರು. ಸಂವಿಧಾನವನ್ನು ನೀಡಿದವರು ಯಾರು? IIT, IIM, AIIMS,Isro, DRDO, SAIL, HAL, BEL, ONGC ಯನ್ನು ಕೊಟ್ಟವರು ಯಾರು? ಕಾಂಗ್ರೆಸ್ ಇವೆಲ್ಲವನ್ನೂ ನೀಡಿದ್ದು. ಕಾಂಗ್ರೆಸ್ಲಿಷ್ಠ, ಐಕ್ಯ ದೇಶವನ್ನು ನೀಡಿದೆ. ಒಂದು ಸೂಜಿಯನ್ನು ದೇಶದಲ್ಲಿ ತಯಾರಿಸಲಾಗಿಲ್ಲ. ನಾವು ಹೈದರಾಬಾದ್, ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಕಾನ್ಪುರದಲ್ಲಿ ದೊಡ್ಡ ಕಾರ್ಖಾನೆಗಳನ್ನು ಸ್ಥಾಪಿಸಿದ್ದೇವೆ. ಬಿಜೆಪಿಯವರು ಯಾವ ದೊಡ್ಡ ಕಾರ್ಖಾನೆ ಸ್ಥಾಪಿಸಿದರು ಆದರೆ ಇಂದು ಎಲ್ಲವನ್ನೂ ತಾವೇ ಮಾಡಿದ್ದೇವೆ ಎಂದು ಭಾವಿಸುತ್ತಿದ್ದಾರೆ.
ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಸ್ತ್ರೀ ರೋಬೋಟ್ ವ್ಯೋಮ್ಮಿತ್ರ ಕಳಿಸಲು ಸರ್ಕಾರ ಚಿಂತನೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್
ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದಿದ್ದ ಸಂಭ್ರಮದಲ್ಲಿರುವಾಗ ಇಸ್ರೋದ ಉಲ್ಲೇಖವು ಬರುತ್ತದೆ.ಈ ಸಾಧನೆ ಯಾವುದೇ ರಾಜಕೀಯ ಪಕ್ಷದ್ದಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್ ನಡೆಯುತ್ತಿದೆ.
ತೆಲಂಗಾಣ ಕುರಿತ ಮಾತನಾಡಿದ ಅವರು ತೆಲಂಗಾಣ ಹೊಸ ರಾಜ್ಯ ಬೇಡಿಕೆಯನ್ನು ಕಾಂಗ್ರೆಸ್ ಬೆಂಬಲಿಸಿತ್ತು. ಆಗ ಕೆಸಿಆರ್ ಅವರಿಗೆ ಶಕ್ತಿ ಇತ್ತೇ? ಆಗ ಅವರಿಗೆ ಶಕ್ತಿಕೊಟ್ಟಿದ್ದು ಸೋನಿಯಾ ಗಾಂಧಿ ಎಂದು ಖರ್ಗೆ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ