ಬಿಜೆಪಿ ಸರ್ಕಾರದ ವಿರುದ್ಧ ಇಡೀ ದೇಶ ಬಂದ್​.. ಆದ್ರೆ ಪ. ಬಂಗಾಳದಲ್ಲಿ ಬಿಜೆಪಿಯಿಂದಲೇ 12 ತಾಸು ಬಂದ್​ಗೆ ಕರೆ

| Updated By: ಸಾಧು ಶ್ರೀನಾಥ್​

Updated on: Dec 08, 2020 | 10:41 AM

ಕೋಲ್ಕತ್ತಾ: ಬಿಜೆಪಿ ಕೇಂದ್ರ ಸರ್ಕಾರ ಹೊರತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕರೆ ನೀಡಿರುವ ಭಾರತ್​ ಬಂದ್​ಗೆ ಅಪಾರ ಬೆಂಬಲ ವ್ಯಕ್ತವಾಗಿದೆ. 14ಕ್ಕೂ ಹೆಚ್ಚು ರಾಜಕೀಯ ಪಕ್ಷಗಳೂ ತಮ್ಮ ಬೆಂಬಲ ಇದೆ ಎಂದು ಹೇಳಿವೆ. ಇಡೀ ದೇಶಾದ್ಯಂತ ಬಿಜೆಪಿ ಸರ್ಕಾರದ ವಿರುದ್ಧ ಬಂದ್ ಮಾಡಲಾಗುತ್ತಿದ್ದರೆ, ಇತ್ತ ಪಶ್ಚಿಮ ಬಂಗಾಳದ ಉತ್ತರದಲ್ಲಿ ಬಿಜೆಪಿ ಅಲ್ಲಿನ ಟಿಎಂಸಿ ಸರ್ಕಾರದ ವಿರುದ್ಧ 12 ತಾಸುಗಳ ಬಂದ್​ ಕರೆದಿದೆ. ಪಶ್ಚಿಮ ಬಂಗಾಳ ಸರ್ಕಾರದ ದುರಾಡಳಿತವನ್ನು ಖಂಡಿಸಿ ನಿನ್ನೆ ಬಿಜೆಪಿ ಮುಖಂಡರು ಯುವಮೋರ್ಚಾ ಅಧ್ಯಕ್ಷ, […]

ಬಿಜೆಪಿ ಸರ್ಕಾರದ ವಿರುದ್ಧ ಇಡೀ ದೇಶ ಬಂದ್​.. ಆದ್ರೆ ಪ. ಬಂಗಾಳದಲ್ಲಿ ಬಿಜೆಪಿಯಿಂದಲೇ 12 ತಾಸು ಬಂದ್​ಗೆ ಕರೆ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರತಿಭಟನೆಯ ಚಿತ್ರ
Follow us on

ಕೋಲ್ಕತ್ತಾ: ಬಿಜೆಪಿ ಕೇಂದ್ರ ಸರ್ಕಾರ ಹೊರತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕರೆ ನೀಡಿರುವ ಭಾರತ್​ ಬಂದ್​ಗೆ ಅಪಾರ ಬೆಂಬಲ ವ್ಯಕ್ತವಾಗಿದೆ. 14ಕ್ಕೂ ಹೆಚ್ಚು ರಾಜಕೀಯ ಪಕ್ಷಗಳೂ ತಮ್ಮ ಬೆಂಬಲ ಇದೆ ಎಂದು ಹೇಳಿವೆ. ಇಡೀ ದೇಶಾದ್ಯಂತ ಬಿಜೆಪಿ ಸರ್ಕಾರದ ವಿರುದ್ಧ ಬಂದ್ ಮಾಡಲಾಗುತ್ತಿದ್ದರೆ, ಇತ್ತ ಪಶ್ಚಿಮ ಬಂಗಾಳದ ಉತ್ತರದಲ್ಲಿ ಬಿಜೆಪಿ ಅಲ್ಲಿನ ಟಿಎಂಸಿ ಸರ್ಕಾರದ ವಿರುದ್ಧ 12 ತಾಸುಗಳ ಬಂದ್​ ಕರೆದಿದೆ.

ಪಶ್ಚಿಮ ಬಂಗಾಳ ಸರ್ಕಾರದ ದುರಾಡಳಿತವನ್ನು ಖಂಡಿಸಿ ನಿನ್ನೆ ಬಿಜೆಪಿ ಮುಖಂಡರು ಯುವಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಉತ್ತರ ಬಂಗಾಳದ ಸಿಲಿಗುರಿಯಲ್ಲಿ ಪ್ರತಿಭಟನಾ ಱಲಿ ಹಮ್ಮಿಕೊಂಡಿದ್ದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಅಶ್ರುವಾಯು, ಜಲಫಿರಂಗಿಗಳ ಪ್ರಯೋಗ ಮಾಡಿದ್ದರು. ಕಾರ್ಯಕರ್ತರು ಮತ್ತು ಪೊಲೀಸರ ನಡುವಿನ ತೀವ್ರ ಘರ್ಷಣೆಯಲ್ಲಿ ಓರ್ವ ಬಿಜೆಪಿ ಕಾರ್ಯಕರ್ತ ಮೃತಪಟ್ಟಿದ್ದ. ಹಲವು ಕಾರ್ಯಕರ್ತರು, ಪೊಲೀಸರು ಗಾಯಗೊಂಡಿದ್ದಾರೆ. ಈ ಎಲ್ಲ ಅವಘಡ, ಸಾವಿಗೆ ಪೊಲೀಸರೇ ಕಾರಣ ಎಂದು ಬಿಜೆಪಿ ಮುಖಂಡರು ಆರೋಪ ಮಾಡಿದ್ದಾರೆ.

ಉಲೇನ್ ರಾಯ್​ಗೆ ಪೊಲೀಸರು ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸತ್ತಿದ್ದಾಗಿ ಬಿಜೆಪಿ ಆರೋಪ ಮಾಡುತ್ತಿದ್ದರೆ, ಪೊಲೀಸರು ನಾವು ಲಾಠಿ ಚಾರ್ಜ್​ ಮಾಡಿಯೇ ಇಲ್ಲ ಎಂದಿದ್ದಾರೆ. ಆದರೆ ಬಿಜೆಪಿ ಮಾತ್ರ ತನ್ನ ಪಟ್ಟು ಬಿಡುತ್ತಿಲ್ಲ. ಪೊಲೀಸರು ಲಾ ಆ್ಯಂಡ್ ಆರ್ಡರ್​ ನಿಯಮ ಮುರಿದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರ ಪೊಲೀಸರನ್ನು ಬಳಸಿಕೊಂಡು ಬಲವಂತವಾಗಿ ನಮ್ಮನ್ನು ಹತ್ತಿಕ್ಕುತ್ತಿದೆ. ಬಿಜೆಪಿಯ ಬೆಳವಣಿಗೆ ಸಹಿಸಲಾಗುತ್ತಿಲ್ಲ. ಪೊಲೀಸ್​ ದೌರ್ಜನ್ಯದಿಂದ ಕಾರ್ಯಕರ್ತ ಮೃತಪಟ್ಟಿದ್ದಾನೆಂದು ಆರೋಪಿಸಿ, ಇಂದು ಉತ್ತರ ಬಂಗಾಳದಲ್ಲಿ ಬಿಜೆಪಿಯೇ 12 ತಾಸುಗಳ ಬಂದ್​ ನಡೆಸುತ್ತಿದೆ.

ಬಿಜೆಪಿ ಕಾರ್ಯಕರ್ತ ಸಾವು: ಪೊಲೀಸರದೇ ತಪ್ಪು ಎಂದ ತೇಜಸ್ವಿ ಸೂರ್ಯ