Video ಇಂದೋರ್: ಸಂಧಾನಕ್ಕೆ ಬಂದ ಬಿಜೆಪಿ ಕಾರ್ಪೊರೇಟರ್ ಪತಿಗೆ ಪೌರಕಾರ್ಮಿಕರಿಂದ ಥಳಿತ

| Updated By: ರಶ್ಮಿ ಕಲ್ಲಕಟ್ಟ

Updated on: Oct 14, 2022 | 12:53 PM

ಚೋಹಾನ್ ಅವರ ಪತ್ನಿ ಪುರಸಭೆಯ ವಾರ್ಡ್ ಸಂಖ್ಯೆ 13 ರಿಂದ ಕಾರ್ಪೊರೇಟರ್ ಆಗಿದ್ದಾರೆ. ಎರಡು ಗುಂಪುಗಳ ನಡುವೆ ಸಂಧಾನ ನಡೆಸುವುದಕ್ಕಾಗಿ ಚೋಹನ್ ಅವರನ್ನು ಪೊಲೀಸ್ ಠಾಣೆಗೆ ಕರೆಸಲಾಯಿತು.

Video ಇಂದೋರ್: ಸಂಧಾನಕ್ಕೆ ಬಂದ ಬಿಜೆಪಿ ಕಾರ್ಪೊರೇಟರ್ ಪತಿಗೆ ಪೌರಕಾರ್ಮಿಕರಿಂದ ಥಳಿತ
ಪೌರಕಾರ್ಮಿಕರು ಥಳಿಸುತ್ತಿರುವುದು
Follow us on

ಇಂದೋರ್: ಪೌರ ಕಾರ್ಮಿಕರು ಮತ್ತು ಅವರ ಸಂಬಂಧಿಕರ ಗುಂಪೊಂದು ರಾವು ಪುರಸಭೆಯ ಬಿಜೆಪಿ (BJP) ಕಾರ್ಪೊರೇಟರ್ (corporator) ಪತಿಗೆ ಪೊಲೀಸ್ ಠಾಣೆಯಲ್ಲಿ ಥಳಿಸಿದ್ದು ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದದ್ದು ಗುರುವಾರ. ಮಹಿಳಾ ಕಾರ್ಮಿಕರನ್ನು ದೂರವಾಣಿ ಮೂಲಕ ನಿಂದಿಸಿದ ಆರೋಪದ ಮೇಲೆ ಸಂದೀಪ್ ಚೋಹಾನ್ ವಿರುದ್ಧ ದೂರು ನೀಡಲು ಪೌರ ಕಾರ್ಮಿಕರ ಗುಂಪು ಮಧ್ಯಾಹ್ನ ಪೊಲೀಸ್ ಠಾಣೆಗೆ ಬಂದಿತ್ತು ಎಂದು ರಾವು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನರೇಂದ್ರ ಸಿಂಗ್ ರಘುವಂಶಿ ಪಿಟಿಐಗೆ ತಿಳಿಸಿದ್ದಾರೆ.


ಚೋಹಾನ್ ಅವರ ಪತ್ನಿ ಪುರಸಭೆಯ ವಾರ್ಡ್ ಸಂಖ್ಯೆ 13 ರಿಂದ ಕಾರ್ಪೊರೇಟರ್ ಆಗಿದ್ದಾರೆ.
ಎರಡು ಗುಂಪುಗಳ ನಡುವೆ ಸಂಧಾನ ನಡೆಸುವುದಕ್ಕಾಗಿ ಚೋಹನ್ ಅವರನ್ನು ಪೊಲೀಸ್ ಠಾಣೆಗೆ ಕರೆಸಲಾಯಿತು. ಆದರೆ ತೀವ್ರ ಮಾತಿನ ಚಕಮಕಿ ನಡೆದು ಗುಂಪಿನ ಕೆಲವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಎರಡೂ ಕಡೆಯವರು ಪರಸ್ಪರ ಹಲ್ಲೆ ಮತ್ತು ಬೆದರಿಕೆಯ ದೂರುಗಳನ್ನು ದಾಖಲಿಸಿದ್ದಾರೆ ಎಂದು ರಘುವಂಶಿ ಹೇಳಿದ್ದಾರೆ.