AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maoist Link Case: ಮಾವೋವಾದಿಗಳ ಜೊತೆ ನಂಟು ಪ್ರಕರಣ; ದೆಹಲಿ ವಿವಿ ಮಾಜಿ ಪ್ರಾಧ್ಯಾಪಕ ಜಿಎನ್ ಸಾಯಿಬಾಬಾ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಆದೇಶ

ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿಎನ್ ಸಾಯಿಬಾಬಾ ಅವರನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ

Maoist Link Case: ಮಾವೋವಾದಿಗಳ ಜೊತೆ ನಂಟು ಪ್ರಕರಣ; ದೆಹಲಿ ವಿವಿ ಮಾಜಿ ಪ್ರಾಧ್ಯಾಪಕ ಜಿಎನ್ ಸಾಯಿಬಾಬಾ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಆದೇಶ
GN Saibaba
TV9 Web
| Edited By: |

Updated on:Oct 14, 2022 | 11:42 AM

Share

ನವದೆಹಲಿ: ಮಾವೋವಾದಿಗಳ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ದೆಹಲಿ ವಿಶ್ವವಿದ್ಯಾಲಯದ (Delhi University) ಮಾಜಿ ಪ್ರೊಫೆಸರ್ ಜಿಎನ್ ಸಾಯಿಬಾಬಾ (GN Saibaba) ಅವರನ್ನು ಬಂಧಿಸಲಾಗಿತ್ತು. ಆದರೆ, ಅವರನ್ನು ಈ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ದೋಷಮುಕ್ತಗೊಳಿಸಿದೆ. ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಅವರನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಈ ಪ್ರಕರಣದಲ್ಲಿ ಅವರೊಂದಿಗೆ ಇತರೆ ಅಪರಾಧಿಗಳನ್ನೂ ಖುಲಾಸೆಗೊಳಿಸಲಾಗಿದೆ.

ವಿಕಲಚೇತನರಾಗಿದ್ದ ಸಾಯಿಬಾಬಾ ಪ್ರಸ್ತುತ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರನ್ನು 2014ರಲ್ಲಿ ಬಂಧಿಸಲಾಗಿತ್ತು. ನ್ಯಾಯಮೂರ್ತಿ ರೋಹಿತ್ ದೇವ್ ಮತ್ತು ಅನಿಲ್ ಪನ್ಸಾರೆ ಅವರಿದ್ದ ವಿಭಾಗೀಯ ಪೀಠವು ಸಾಯಿಬಾಬಾ ಅವರು 2017ರ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯನ್ನು ಅಂಗೀಕರಿಸಿತು. ನ್ಯಾಯಪೀಠವು ಈ ಪ್ರಕರಣದಲ್ಲಿ ಇತರ ಐವರು ಅಪರಾಧಿಗಳ ಮೇಲ್ಮನವಿಯನ್ನು ಸಹ ಅಂಗೀಕರಿಸಿ, ಅವರನ್ನು ಖುಲಾಸೆಗೊಳಿಸಿತು. ಮಹೇಶ್ ಟಿರ್ಕಿ, ಪಾಂಡು ಪೋರಾ ನರೋಟೆ, ಹೇಮ್ ಕೇಶ್ವದತ್ತ ಮಿಶ್ರಾ, ಪ್ರಶಾಂತ್ ರಾಹಿ ಮತ್ತು ವಿಜಯ್ ನಾನ್ ಟಿರ್ಕಿ ಇತರ ಐದು ಅಪರಾಧಿಗಳಾಗಿದ್ದಾರೆ.

ಇದನ್ನೂ ಓದಿ: ಮಾವೋವಾದಿಗಳಿಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆ; ಸಿಆರ್​ಪಿಎಫ್​ ಕಾನ್​ಸ್ಟೆಬಲ್​ ಸೇರಿ ಮೂವರ ಬಂಧನ

ಈ ಅಪರಾಧಿಗಳು ಬೇರೆ ಯಾವುದೇ ಪ್ರಕರಣದಲ್ಲಿ ಆರೋಪಿಗಳಾಗಿರದಿದ್ದರೆ ಅವರನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡುವಂತೆ ನ್ಯಾಯಪೀಠವು ಸೂಚಿಸಿದೆ.

ಮಾರ್ಚ್ 2017 ರಲ್ಲಿ, ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಸೆಷನ್ಸ್ ನ್ಯಾಯಾಲಯವು ಸಾಯಿಬಾಬಾ ಮತ್ತು ಪತ್ರಕರ್ತ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸೇರಿದಂತೆ ಇತರರನ್ನು ಮಾವೋವಾದಿ ಸಂಪರ್ಕಗಳ ಆರೋಪದ ಮೇಲೆ ಮತ್ತು ದೇಶದ ವಿರುದ್ಧ ಯುದ್ಧ ಸಾರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಶಿಕ್ಷೆ ವಿಧಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:23 am, Fri, 14 October 22

Follow Us
TV9 Web
TV9 Web

TV9 Kannada

Read More
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!