ಮಾವೋವಾದಿಗಳಿಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆ; ಸಿಆರ್​ಪಿಎಫ್​ ಕಾನ್​ಸ್ಟೆಬಲ್​ ಸೇರಿ ಮೂವರ ಬಂಧನ

ಮಾವೋವಾದಿಗಳಿಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆ; ಸಿಆರ್​ಪಿಎಫ್​ ಕಾನ್​ಸ್ಟೆಬಲ್​ ಸೇರಿ ಮೂವರ ಬಂಧನ
ಸಾಂಕೇತಿಕ ಚಿತ್ರ

ಸಿಆರ್​ಪಿಎಫ್​ ಕಾನ್​ಸ್ಟೆಬಲ್​ ಅವಿನಾಶ್​ ಕುಮಾರ್ (29) ಕಳೆದ ನಾಲ್ಕು ತಿಂಗಳಿಂದಲೂ ರಜೆಯಲ್ಲಿದ್ದಾರೆ. ಅವರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲು ಮಾಡಿದ್ದಾರೆ.

TV9kannada Web Team

| Edited By: Lakshmi Hegde

Nov 18, 2021 | 8:06 AM

ಮಾವೋವಾದಿಗಳಿಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಇನ್ನಿತರ ನೆರವು ಒದಗಿಸುತ್ತಿದ್ದ  ಮೂವರನ್ನು ಜಾರ್ಖಂಡ್​​ನ ಆ್ಯಂಟಿ ಟೆರರಿಸ್ಟ್​ (ಭಯೋತ್ಪಾದಕ ವಿರೋಧಿ) ದಳ ಬಂಧಿಸಿದೆ. ಬಂಧಿತ ಮೂವರಲ್ಲಿ ಒಬ್ಬ ಕೇಂದ್ರೀ ಮೀಸಲು ಪಡೆ (CRPF)ಯ ಕಾನ್​ಸ್ಟೆಬಲ್​​ ಆಗಿದ್ದು, ಇವರು  2017ರಿಂದಲೂ ಪುಲ್ವಾಮಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಇವರು ಸಿಪಿಐ (ಎಂ) -(ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸಂಘಟನೆಗೆ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ ಇನ್ನಿತರ ಕೆಲವು ಕ್ರಿಮಿನಲ್​ ಕೇಸ್​ಗಳಲ್ಲೂ ಬೇಕಾದವರು ಆಗಿದ್ದಾರೆ. ಈ ಮೂವರೂ ಸೇರಿಕೊಂಡು ಈಗಾಗಲೇ ಎಕೆ 47 ಮತ್ತು ಐಎನ್​​ಎಸ್​ಎಎಸ್​ ರೈಫಲ್ಸ್​​ಗಳನ್ನು ಭಾರಿ ಪ್ರಮಾಣದಲ್ಲಿ ಮಾವೋವಾದಿಗಳಿಗೆ ಪೂರೈಕೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.  

ಸಿಆರ್​ಪಿಎಫ್​ ಕಾನ್​ಸ್ಟೆಬಲ್​ ಅವಿನಾಶ್​ ಕುಮಾರ್ (29) ಕಳೆದ ನಾಲ್ಕು ತಿಂಗಳಿಂದಲೂ ರಜೆಯಲ್ಲಿದ್ದಾರೆ. ಅವರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲು ಮಾಡಿದ್ದಾರೆ. ಹಾಗೇ ಇವರೊಂದಿಗೆ ಸೇರಿ ಶಸ್ತ್ರಾಸ್ತ್ರ ಪೂರೈಸುತ್ತಿದ್ದ ನಿರ್ಮಾಣ ಗುತ್ತಿಗೆದಾರರಾದ ಪಂಕಜ್​ ಸಿಂಗ್​ (48) ಮತ್ತು ರಿಶಿ ಕುಮಾರ್ (49) ವಿರುದ್ಧವೂ ಪ್ರಕರಣ ದಾಖಲಾಗಿದೆ. ಮೂವರೂ ಬಿಹಾರದವರೇ ಆಗಿದ್ದು, ಇವರನ್ನು ಬಂಧಿಸಿದ ದಿನಾಂಕ, ಸ್ಥಳದ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ನೀಡಲಿಲ್ಲ.

ಈ ಮೂವರೂ ಸೇರಿ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ಸಿಪಿಐ(ಮಾವೋವಾದಿ) ಸಂಘಟನೆಯ ಕೇಡರ್​ಗಳಿಗೆ ಮತ್ತು ಇನ್ನಿತರ ಗ್ಯಾಂಗ್​ಸ್ಟರ್​ಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಮೂವರೂ ಬಿಹಾರದವರೇ ಆಗಿದ್ದು, ಅಲ್ಲಿನ ಭಯೋತ್ಪಾದಕ ನಿಗ್ರಹ ದಳದ ಸಹಾಯದಿಂದ ಬಂಧಿಸಲಾಗಿದೆ ಎಂದು ಜಾರ್ಖಂಡ ಎಟಿಎಸ್ ಎಸ್​ಪಿ ಪ್ರಶಾಂತ್​ ಆನಂದ್​ ತಿಳಿಸಿದ್ದಾರೆ. ಇದೀಗ ಬಂಧಿತನಾಗಿರುವ ಕಾನ್​ಸ್ಟೆಬಲ್​​ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ನ 182ನೇ ಬೆಟಾಲಿಯನ್​​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಅದಕ್ಕೂ ಮೊದಲು ಛತ್ತೀಸ್​ಗಢ್​​ನ ಜಗದಲ್​​ಪುರ 204 ಕೋಬ್ರಾ ಬೆಟಾಲಿಯನ್​​ನಲ್ಲಿ ಇದ್ದ ಎಂದೂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Gold Price Today: ಇಂದು ಹಲವೆಡೆ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ನೀವು ಚಿನ್ನಾಭರಣ ಕೊಳ್ಳುವುದಾದರೆ ದರ ವಿವರ ಗಮನಿಸಿ

Follow us on

Related Stories

Most Read Stories

Click on your DTH Provider to Add TV9 Kannada