ಬಿಸ್ವನಾಥ್: ಅಸ್ಸಾಂನಲ್ಲಿ ಭಯೋತ್ಪಾದನೆ ಮತ್ತು ಒಳನುಸುಳುವಿಕೆ ಕಡಿಮೆಯಾಗಿದ್ದು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕ್ಷಿಪ್ರ ಗತಿಯಲ್ಲಿ ಸಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ. ಅಸ್ಸಾಂನಲ್ಲಿ ಭಾನುವಾರ ಮೊದಲ ಬಾರಿ ಚುನಾವಣಾ ಪ್ರಚಾರ ನಡೆಸಿದ ಸಿಂಗ್, ಅಸ್ಸಾಂನಲ್ಲಿ ಶಾಂತಿ ಮರಳಿದೆ. ಕಳೆದ ಐದು ವರ್ಷದ ಬಿಜೆಪಿ ಅಧಿಕಾರವಧಿಯಲ್ಲಿ 12ಕ್ಕಿಂತಲೂ ಹೆಚ್ಚು ಬಂಡಾಯ ಗುಂಪುಗಳು ಶಸ್ತ್ರಾಸ್ತ್ರ ತ್ಯಜಿಸಿವೆ. ನನ್ನಲ್ಲಿ ಬಿಸ್ವನಾಥ್ಗೆ ಬರಬೇಕು ಎಂದು ಕರೆದಾಗ ನನಗೆ 2014ರಲ್ಲಿ ನಡೆದ ಆದಿವಾಸಿಗಳ ಹತ್ಯಾಕಾಂಡ ನೆನಪಿಗೆ ಬಂತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಈ ಪ್ರದೇಶದಲ್ಲಿ ಶಾಂತಿ ನೆಲೆಸುವುದಕ್ಕಿಂತ ಮಹತ್ವದ ಘಟನೆ ಬೇರೆ ಯಾವುದೂ ಇಲ್ಲ ಎಂದು ಅವರು ಹೇಳಿದ್ದಾರೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೇರಿದಾಗ ಭಯೋತ್ಪಾದನೆ ಮತ್ತು ಒಳ
ನುಸುಳುವಿಕೆಯನ್ನು ನಿಲ್ಲಿಸುವುದಾಗಿ ಹೇಳಿತ್ತು. ಅಸ್ಸಾಂನ ಪರಿಸ್ಥಿತಿ ಬಹಳಷ್ಟು ಉತ್ತಮವಾಗಿದೆ, ರಾಜ್ಯ ಪ್ರಗತಿಯ ಹಾದಿಯಲ್ಲಿದೆ. ಬಿಜೆಪಿ ನೇತ್ವದ ಸರ್ಕಾರ ಭಾರತ-ಬಾಂಗ್ಲಾದೇಶ ಗಡಿಭಾಗದಲ್ಲಿ ಪ್ರಧಾನ ಪ್ರದೇಶಗಳನ್ನು ಮುಚ್ಚಿದ್ದು, ಒಳನುಸುಳುವಿಕೆ ತಡೆಯಲು ಎಲೆಕ್ಟ್ರಾನಿಕ್ ನಿಗಾ ವ್ಯವಸ್ಥೆ ಸ್ಥಾಪಿಸಿದೆ. ಧುಬ್ರಿಯಲ್ಲಿ ನಾವು ಅಂತರರಾಷ್ಟ್ರೀಯ ಗಡಿಯನ್ನು ಮುಚ್ಚಿದ್ದೇವೆ. ಅಸ್ಸಾಂನಲ್ಲಿ ಇನ್ನುಳಿದ ಕೆಲಸ ಕಾರ್ಯಗಳು ಬಾಕಿ ಇದ್ದರೆ ಮತ್ತೊಮ್ಮೆ ಅಧಿಕಾರಕ್ಕೇರಿದಾಗ ಅದನ್ನು ನಾವು ಪೂರೈಸುತ್ತೇವೆ.
I want to congratulate the state government for building toilets in the houses, across the state. I have been told that all the districts of Assam are now open defecation free: Defence Minister Rajnath Singh in Biswanath constituency #Assam pic.twitter.com/wBfjlpO1Bu
— ANI (@ANI) March 14, 2021
ರಾಜ್ಯದಾದ್ಯಂತ ಮನೆಗಳಲ್ಲಿ ಶೌಚಾಲಯ ನಿರ್ಮಿಸಿದ್ದಕ್ಕೆ ನಾನು ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ. ಅಸ್ಸಾಂನ ಎಲ್ಲ ಜಿಲ್ಲೆಗಳು ಈ ಬಹಿರ್ದೆಸೆ ಮುಕ್ತವಾಗಿದೆ. ತ್ರಿಪುರಾದಲ್ಲಿ ನಮ್ಮ ಸರ್ಕಾರವಿದೆ. ನಿಮ್ಮ ಆಶೀರ್ವಾದದಿಂದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ನಾವು ಅಧಿಕಾರ ರಚಿಸಲಿದ್ದೇವೆ. ಈ ರಾಜ್ಯಗಳು ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿವೆ. ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಮುಖ ಗಡಿಭಾಗಗಳನ್ನು ಬಂದ್ ಮಾಡುವ ಮೂಲಕ ಬಾಂಗ್ಲಾದೇಶಿಗಳು ಭಾರತಕ್ಕೆ ಪ್ರವೇಶಿಸದಂತೆ ತಡೆಯುತ್ತೇವೆ ಎಂದಿದ್ದಾರೆ ರಾಜ್ನಾಥ್ ಸಿಂಗ್.
We have our govt in Tripura. With your blessing, we are going to make govt in Assam & West Bengal… Borders of these states are shared with Bangladesh. If BJP comes to power here, we’ll block major border area to stop entry of Bangladeshis in India:Defence Minister Rajnath Singh pic.twitter.com/6lEg4ahbH9
— ANI (@ANI) March 14, 2021
ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ಅವರು ಯಾವತ್ತೂ ಎಐಯುಡಿಎಫ್ ಜತೆ ಮೈತ್ರಿ ಮಾಡಿಕೊಂಡಿಲ್ಲ. ಆದರೆ ಇಂದು ಕಾಂಗ್ರೆಸ್ ಅಧಿಕಾರಕ್ಕಾರಕ್ಕಾಗಿ ಎಐಯುಡಿಎಫ್ ಜತೆ ಮೈತ್ರಿಮಾಡಿದೆ ಎಂದಿದ್ದಾರೆ. ಅಸ್ಸಾಂನ ಬಿಸ್ವನಾಥ್ನಲ್ಲಿ ಹಾಲಿ ಬಿಜೆಪಿ ಶಾಸಕ ಪ್ರಮೋದ್ ಬೊರ್ಥಾಕುರ್ ಅವರ ಪರ ರಾಜನಾಥ ಸಿಂಗ್ ಪ್ರಚಾರ ನಡೆಸುತ್ತಿದ್ದಾರೆ. ಪ್ರಮೋದ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅಂಜನ್ ಬೋರ್ಹಾ ಸ್ಪರ್ಧಿಸಲಿದ್ದು, ಮಾರ್ಚ್ 27ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ.
Published On - 4:46 pm, Sun, 14 March 21