ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ರಾಷ್ಟ್ರೀಯ ಸದಸ್ಯತ್ವ ಅಭಿಯಾನ- ‘ಸಂಘಟನ ಪರ್ವ, ಸದಾಸ್ಯತ ಅಭಿಯಾನ 2024’ಕ್ಕೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಸಚಿವರು ಮತ್ತು ಪಕ್ಷದ ಹಾಲಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು.
ಬಿಜೆಪಿಯ ಸದಸ್ಯತ್ವ ಅಭಿಯಾನದ ವಿಶಿಷ್ಟ ಸ್ವರೂಪವನ್ನು ಒತ್ತಿ ಹೇಳಿದ ಅಮಿತ್ ಶಾ, ಇಂತಹ ಅಭಿಯಾನವನ್ನು ಪ್ರಜಾಸತ್ತಾತ್ಮಕವಾಗಿ ನಡೆಸುತ್ತಿರುವ ದೇಶದ ಏಕೈಕ ರಾಜಕೀಯ ಪಕ್ಷವಾಗಿದೆ. ಪಕ್ಷವು 10 ಕೋಟಿ ಸದಸ್ಯರ ಗುರಿಯನ್ನು ತಲುಪುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಈ ಸಂಘಟನೆಯನ್ನು ಸರ್ಕಾರಕ್ಕೆ ಸಂಪರ್ಕಿಸುವಲ್ಲಿ ಕಾರ್ಯಕರ್ತರು ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದಿದ್ದಾರೆ.
VIDEO | PM Modi (@narendramodi) renews his BJP membership via missed call service, thereby kickstarts party’s ‘Sadasyata Abhiyan’ 2024. pic.twitter.com/MDL5jqmeE3
— Press Trust of India (@PTI_News) September 2, 2024
ಇದನ್ನೂ ಓದಿ: Vande Bharat: 3 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ
ಈ ವೇಳೆ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. “ಇಂದು ಮತ್ತೊಂದು ಸುತ್ತಿನ ‘ಸದಸ್ಯತಾ ಅಭಿಯಾನ’ ಆರಂಭವಾಗುತ್ತಿದೆ. ಭಾರತೀಯ ಜನಸಂಘದಿಂದ ಇಲ್ಲಿಯವರೆಗೆ ನಾವು ದೇಶದಲ್ಲಿ ಹೊಸ ರಾಜಕೀಯ ಸಂಸ್ಕೃತಿಯಾಗಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ಜನರು ಅಧಿಕಾರವನ್ನು ನೀಡುವ ಸಂಘಟನೆ ಅಥವಾ ರಾಜಕೀಯ ಪಕ್ಷ, ಘಟಕ, ಸಂಘಟನೆ, ಪಕ್ಷ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅನುಸರಿಸದಿದ್ದರೆ, ಆಂತರಿಕ ಪ್ರಜಾಪ್ರಭುತ್ವವು ಅದರಲ್ಲಿ ನೆಲೆಸದಿದ್ದರೆ, ಇಂದು ಹಲವಾರು ರಾಜಕೀಯ ಪಕ್ಷಗಳು ಎದುರಿಸುತ್ತಿರುವ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ