ಹಾಗಂತ ಅವರು ದೇವರಾಗುವುದಿಲ್ಲ..; ನರೇಂದ್ರ ಮೋದಿ ದೇವರ ಅವತಾರ ಎಂದಿದ್ದ ಯುಪಿ ಸಚಿವರ ಮಾತಿಗೆ ಬಿಜೆಪಿ ವಕ್ತಾರೆಯ ಪ್ರತಿಕ್ರಿಯೆ

| Updated By: Lakshmi Hegde

Updated on: Oct 28, 2021 | 1:13 PM

ಸ್ವಾತಂತ್ರ್ಯ ಬಂದು 75ವರ್ಷಗಳಾದ ಹಿನ್ನೆಲೆಯಲ್ಲಿ ಈ ಬಾರಿ ಆಜಾದಿ ಕಾ ಅಮೃತ ಮಹೋತ್ಸವ್​ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಅದರ ಭಾಗವಾಗಿ ನಡೆದಿದ್ದ ಸ್ವಚ್ಛ ಭಾರತ ಸೆಮಿನಾರ್​​ನಲ್ಲಿ ಮಾತನಾಡಿದ್ದ ಉಪೇಂದ್ರ ತಿವಾರಿ ನರೇಂದ್ರ ಮೋದಿಯವರನ್ನು ಹೊಗಳಿದ್ದರು.

ಹಾಗಂತ ಅವರು ದೇವರಾಗುವುದಿಲ್ಲ..; ನರೇಂದ್ರ ಮೋದಿ ದೇವರ ಅವತಾರ ಎಂದಿದ್ದ ಯುಪಿ ಸಚಿವರ ಮಾತಿಗೆ ಬಿಜೆಪಿ ವಕ್ತಾರೆಯ ಪ್ರತಿಕ್ರಿಯೆ
ಉಪೇಂದ್ರ ತಿವಾರಿ ಮತ್ತು ಅನಿಲಾ ಸಿಂಗ್​
Follow us on

ದೆಹಲಿ: ಉತ್ತರಪ್ರದೇಶ ಪಂಚಾಯತ್​ ರಾಜ್​​ ಸಚಿವ ಉಪೇಂದ್ರ ತಿವಾರಿ ನಿನ್ನೆ ಸ್ವಚ್ಛ ಭಾರತ್​ಗೆ ಸಂಬಂಧಪಟ್ಟ ಸೆಮಿನಾರ್​​ನಲ್ಲಿ ಮಾತನಾಡುತ್ತ, ಪ್ರಧಾನಿ ನರೇಂದ್ರ ಮೋದಿಯವರನ್ನು ತುಂಬ ಹೊಗಳಿದ್ದರು. ನರೇಂದ್ರ ಮೋದಿ (PM Narendra Modi) ಸಾಮಾನ್ಯ ಮನುಷ್ಯರಲ್ಲ. ಅವರು ದೇವರ ಒಂದು ಅವತಾರ ಎಂದಿದ್ದರು.  ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಬಿಜೆಪಿ ನಾಯಕ, ವಕ್ತಾರೆ ಅನಿಲಾ ಸಿಂಗ್​, ಉಪೇಂದ್ರ ತಿವಾರಿ ಹೇಳಿಕೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು ಎಂದು ಹೇಳಿದ್ದಾರೆ. 

ಉಪೇಂದ್ರ ತಿವಾರಿಯವರು ಪ್ರಧಾನಿ ನರೇಂದ್ರ ಮೋದಿ ದೇವರ ಅವತಾರ ಎಂದು ಹೇಳಿದ್ದಾರೆ. ಆದರೆ ಆ ಹೇಳಿಕೆಗೆ ರಾಜಕೀಯ ಆಯಾಮ ನೀಡಬಾರದು. ಅವರು ದೇಶದ ಅನೇಕ ಜನರು, ಮಹಿಳೆಯರ ಭಾವನೆಗಳನ್ನು ವಿವರಿಸಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಮಹಿಳೆಯರಿಗೆ ಅನುಕೂಲವಾಗುವಂತೆ ಅನಿಲ ಸಂಪರ್ಕ ನೀಡಿದ್ದಾರೆ. ಲಕ್ಷಾಂತರ ಜನರು ಮನೆ, ಶೌಚಗೃಹಗಳು, ಬ್ಯಾಂಕ್​ ಅಕೌಂಟ್​​​ಗಳನ್ನು ಹೊಂದಿದ್ದಾರೆ. ಬಡವರ ಮಕ್ಕಳೂ ಶಿಕ್ಷಣ ಪಡೆದಿದ್ದಾರೆ. ಹೀಗೆ ಹಲವು ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅನೇಕರ ಪಾಲಿಗೆ ದೇವರಂತಾಗಿದ್ದಾರೆ. ಈಗ ನಾವು ಕಷ್ಟದಲ್ಲಿದ್ದಾಗ ನಮಗೆ ಸಹಾಯ ಮಾಡಿದವರು ದೇವರಂತಾಗುತ್ತಾರೆ. ಅವರನ್ನು ದೇವರು ಎಂದೇ ಭಾವಿಸಲಾಗುತ್ತದೆ. ಹಾಗಂತ ಅವರು ದೇವರ ಅವತಾರ ಆಗುವುದಿಲ್ಲ ಎಂದು ಅನಿಲಾ ಸಿಂಗ್​ ಹೇಳಿದ್ದಾರೆ.

ಸ್ವಾತಂತ್ರ್ಯ ಬಂದು 75ವರ್ಷಗಳಾದ ಹಿನ್ನೆಲೆಯಲ್ಲಿ ಈ ಬಾರಿ ಆಜಾದಿ ಕಾ ಅಮೃತ ಮಹೋತ್ಸವ್​ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಅದರ ಭಾಗವಾಗಿ ನಡೆದಿದ್ದ ಸ್ವಚ್ಛ ಭಾರತ ಸೆಮಿನಾರ್​​ನಲ್ಲಿ ಮಾತನಾಡಿದ್ದ ಉಪೇಂದ್ರ ತಿವಾರಿ ನರೇಂದ್ರ ಮೋದಿಯವರನ್ನು ಹೊಗಳಿದ್ದರು. ಹಾಗೇ, ಪ್ರತಿಪಕ್ಷಗಳನ್ನು ಟೀಕಿಸಿದ್ದರು. ಇತ್ತೀಚೆಗೆ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ದೇವರಿಗೆ ಪೂಜೆ ಸಲ್ಲಿಸಿದ್ದ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಬಗ್ಗೆಯೂ ವ್ಯಂಗ್ಯವಾಡಿದ್ದರು.

ಮುಂದಿನ ವರ್ಷ ಉತ್ತರಪ್ರದೇಶ ಸೇರಿ ಮೂರ್ನಾಲ್ಕು ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ಹಾಗಾಗಿ ಆಮ್​ ಆದ್ಮಿ ಪಕ್ಷದ ನಾಯಕ ತನ್ನನ್ನು ತಾನು ಕಟ್ಟಾ ಹಿಂದು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಓಲೈಕೆ ರಾಜಕಾರಣ ಎಂದಿಗೂ ನಡೆಯುವುದಿಲ್ಲ ಎಂಬುದು ಇದೀಗ ಬೇರೆ ಪಕ್ಷಗಳಿಗೆ ಅರ್ಥವಾಗುತ್ತಿದೆ. ಇದರ ಸಂಪೂರ್ಣ ಯಶಸ್ಸು ಬಿಜೆಪಿಗೆ ಸಲ್ಲಬೇಕು. ನೀವು ಜಾತ್ಯತೀತರಾಗಿರುತ್ತೀರಿ ಎಂದಾದರೆ ಎಲ್ಲರ ಪಾಲಿಗೂ ಜಾತ್ಯತೀತರೇ ಆಗಿರಬೇಕು. ನಮ್ಮ ಬಿಜೆಪಿ ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್​​, ಸಬ್​ ಕಾ ವಿಶ್ವಾಸ್​ ಮಂತ್ರದಲ್ಲಿ ನಂಬಿಕೆಯಿಟ್ಟಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ವ್ಯಾಘ್ರನ ಅಟ್ಟಹಾಸ! ಎರಡು ತಿಂಗಳಲ್ಲಿ 30ಕ್ಕೂ ಹೆಚ್ಚು ಜಾನುವಾರುಗಳು ಬಲಿ, ಹುಲಿ ದಾಳಿಗೆ ಜನರು ಕಂಗಾಲು

‘ಭಜರಂಗಿ 2’ ಗೆಲುವಿಗಾಗಿ ಪೂಜೆ ಸಲ್ಲಿಸಿದ ಅಭಿಮಾನಿಗಳು; ರಿಲೀಸ್​ಗೂ ಮೊದಲೇ ಹೆಚ್ಚಿದ ಕ್ರೇಜ್​​

 

 

Published On - 10:37 am, Thu, 28 October 21