ಬಿಜೆಪಿ ನಾಯಕಿ ಸನಾ ಖಾನ್ ಹತ್ಯೆ ಪ್ರಕರಣ: ತಾನೇ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡ ಪತಿ

|

Updated on: Aug 12, 2023 | 10:30 AM

ಬಿಜೆಪಿ ನಾಯಕಿ ಸನಾ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತಿ ಅಮಿತ್ ಸಾಹು ಅವರನ್ನು ಮಧ್ಯಪ್ರದೇಶದ ಜಬಲ್ಪುರದಲ್ಲಿ ಶುಕ್ರವಾರ ಬಂಧಿಸಲಾಗಿದೆ.

ಬಿಜೆಪಿ ನಾಯಕಿ ಸನಾ ಖಾನ್ ಹತ್ಯೆ ಪ್ರಕರಣ: ತಾನೇ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡ ಪತಿ
ಸನಾ ಖಾನ್
Follow us on

ನಾಗ್ಪುರ: ಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಾಗ್ಪುರದ ಬಿಜೆಪಿ ನಾಯಕಿ ಸನಾ ಖಾನ್ ( Sana Khan) ಅವರ ಪತಿ ಅಮಿತ್ ಸಾಹು ಅವರನ್ನು ಮಧ್ಯಪ್ರದೇಶದ ಜಬಲ್ಪುರದಲ್ಲಿ ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಪತ್ನಿಯನ್ನು ಕೊಂದಿರುವ ಬಗ್ಗೆ ಅಮಿತ್ ಸಾಹು ಒಪ್ಪಿಕೊಂಡಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗ್ಪುರ ಪೊಲೀಸರ ತಂಡವು ಜಬಲ್ಪುರದ ಘೋರಾ ಬಜಾರ್ ಪ್ರದೇಶದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪೊಲೀಸರ ನೀಡಿರುವ ವರದಿ ಪ್ರಕಾರ ಅಮಿತ್ ಸಾಹು ಅವರು ಸನಾ ಖಾನ್ ಅವರನ್ನು ಕೊಂದು ದೇಹವನ್ನು ನದಿಗೆ ಎಸೆದಿದ್ದರೆ. ಆದರೆ, ಅವರ ದೇಹ ಇನ್ನು ಪತ್ತೆಯಾಗಿಲ್ಲ. ಮೃತದೇಹವನ್ನು ಪತ್ತೆ ಮಾಡುವ ಕಾರ್ಯಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಸನಾ ಖಾನ್ ಅವರು ಜಬಲ್ಪುರಕ್ಕೆ ಭೇಟಿ ನೀಡಿದ ನಂತರ ನಾಪತ್ತೆಯಾಗಿದ್ದಾರೆ. ಆಕೆಯ ಕುಟುಂಬದವರು ತಿಳಿಸಿರುವ ಪ್ರಕಾರ, ಆಗಸ್ಟ್ 1 ರಂದು ಸನಾ ಖಾನ್ ಅವರು ಜಬಲ್ಪುರಕ್ಕೆ ಹೋಗಿದ್ದಾರೆ. ಅಲ್ಲಿ ಅವರು ಅಮಿತ್ ಸಾಹು ಅವರನ್ನು ಭೇಟಿಯಾಗಿದ್ದಾರೆ. ಕೊನೆಯಾದಾಗಿ ಸನಾ ಖಾನ್ ನಾಗ್ಪುರದಿಂದ ಖಾಸಗಿ ಬಸ್‌ನಲ್ಲಿ ಹೊರಟು ಜಬಲ್ಪುರ ನಗರಕ್ಕೆ ತಲುಪಿದ ನಂತರ ತನ್ನ ತಾಯಿಗೆ ಕರೆ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ನಾಪತ್ತೆಯಾಗಿದ್ದು, ಮತ್ತೊಮ್ಮೆ ಸನಾ ಖಾನ್ ಅವರ ತಾಯಿ ಫೋನ್ ಮಾಡಿದಾಗ ಕರೆಯನ್ನು ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಗುರುಗ್ರಾಮ್ ಹೋಟೆಲ್‌ನಲ್ಲಿ ಉದಯೋನ್ಮುಖ ಭೋಜ್‌ಪುರಿ ನಟಿ ಮೇಲೆ ಇನ್‌ಸ್ಟಾಗ್ರಾಮ್ ಸ್ನೇಹಿತನಿಂದ ಅತ್ಯಾಚಾರ

ಅಮಿತ್​​ ಸಾಹು ಅವರು ಸನಾ ಖಾನ್ ಅವರನ್ನು  ಯಾಕೆ ಕೊಂದಿದ್ದಾರೆ ಎಂಬುದನ್ನು ಇನ್ನು ಬಾಯಿಬಿಟ್ಟಿಲ್ಲ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿರುವ ನಾಗ್ಪುರ ಪೊಲೀಸ್ ತಂಡ ಮಹಾರಾಷ್ಟ್ರಕ್ಕೆ ತೆರಳಿದ್ದು, ಇಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:29 am, Sat, 12 August 23