Sign In

By signing in or creating an account, you agree with Associated Broadcasting Company's Terms & Conditions and Privacy Policy.

Independence Day 2023: ಈ ಬಾರಿಯ ಸ್ವಾಂತಂತ್ರ್ಯ ದಿನಾಚರಣೆಯ ಥೀಮ್ ಏನು​, ವಿಶಿಷ್ಟವಾಗಿ ಆಚರಿಸುವುದು ಹೇಗೆ ? ಇಲ್ಲಿದೆ ಐಡಿಯಾ

ಅನೇಕ ಕ್ರಾಂತಿಕಾರಿಗಳ ಮತ್ತು ಅಹಿಂಸಾವಾದಿಗಳ ತ್ಯಾಗ ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು. ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದಂತೆ ನಮಗೆ ತಿಳಿಯದ ಅನೇಕ ಸ್ವತಂತ್ರ್ಯ ಹೋರಾಟಗಾರರ ಹೆಸರು ತಿಳಿಯುತ್ತಾ ಹೋಗುತ್ತೇವೆ. ದೇಶವನ್ನು ಸ್ವತಂತ್ರ್ಯಗೊಳಿಸಲು ಹೋರಾಡಿದ ಮಹಾನ್​ ಚೇತನ ಸ್ಮರಣೆಗೈಯವ ಸುದಿನ ಆಗಸ್ಟ್​​ 15.

Independence Day 2023: ಈ ಬಾರಿಯ ಸ್ವಾಂತಂತ್ರ್ಯ ದಿನಾಚರಣೆಯ ಥೀಮ್ ಏನು​, ವಿಶಿಷ್ಟವಾಗಿ ಆಚರಿಸುವುದು ಹೇಗೆ ? ಇಲ್ಲಿದೆ ಐಡಿಯಾ
ಕೆಂಪುಕೋಟೆ
Follow us
ವಿವೇಕ ಬಿರಾದಾರ
|

Updated on:Aug 12, 2023 | 11:25 AM

ಇನ್ನು ಎರಡು ದಿನ ಕಳೆದರೇ ಸ್ವಾತಂತ್ರ್ಯ ಹಬ್ಬದ ಸಂಭ್ರಮಾಚರಣೆ ದೇಶದಾದ್ಯಂತ ಜೋರಾಗಿರುತ್ತದೆ. 1947 ಆಗಸ್ಟ 15 (15th Augest 1947) ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನ (Independence Day). ಬ್ರಿಟಿಷ್​ರ ದಾಸ್ಯದಿಂದ ಮುಕ್ತರಾದ ದಿನ. ಈ ಸ್ವಾತಂತ್ರ್ಯ ದೊರೆಯಲು ಅನೇಕ ಕ್ರಾಂತಿಕಾರಿಗಳು ಮತ್ತು ಅಹಿಂಸಾವಾದಿಗಳ ತ್ಯಾಗ ಬಲಿದಾನವಿದೆ. ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದಂತೆ ನಮಗೆ ತಿಳಿಯದ ಅನೇಕ ಸ್ವತಂತ್ರ್ಯ ಹೋರಾಟಗಾರರ ಹೆಸರು ತಿಳಿಯುತ್ತಾ ಹೋಗುತ್ತೇವೆ. ದೇಶವನ್ನು ಸ್ವತಂತ್ರ್ಯಗೊಳಿಸಲು ಹೋರಾಡಿದ ಮಹಾನ್​ ಚೇತನ ಸ್ಮರಣೆಗೈಯಲು ಈ ದಿನ ಸುದಿನವಾಗಿದೆ. “ಪ್ರತಿವರ್ಷ ಆಗಸ್ಟ್​ 15 ರಂದು ಒಬ್ಬಬ್ಬ ಸ್ವಾಂತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಸಸಿ ನೆಟ್ಟರೇ ಮುಂದಿನ ಪೀಳಿಗೆಗೆ ನಮ್ಮ ಪೂರ್ವಜರ ಹೆಸರು ತಿಳಿಸಿದಂತಾಗುತ್ತದೆ”.

ಆಗಸ್ಟ್​​ 15 ಈ ವರ್ಷ ಮಂಗಳವಾರ ಬಂದಿದೆ. ಈ ದಿನ ದೇಶ್ಯಾದ್ಯಂತ ದೇಶ ಭಕ್ತಿ ಕಾರ್ಯಕ್ರಮಗಳು ನಡೆಯುತ್ತವೆ. ಶಾಲೆ, ಕಾಲೇಜು, ಧಾರ್ಮಿಕ ಸ್ಥಳ, ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಧ್ಚಜಾರೋಹಣ ನೆರವೇರುತ್ತದೆ. 190 ವರ್ಷಗಳ ಬ್ರಿಟಿಷ್ ಆಳ್ವಿಕೆ ಅಂತ್ಯವಾಗಿ 1947 ಆಗಸ್ಟ್​ 15 ರಂದು ಭಾರತ ಸ್ವಾತಂತ್ರ್ಯವಾಯಿತು. ಅಂದು ದೆಹಲಿಯ ಕೆಂಪು ಕೋಟೆ ಮೇಲೆ ಅಂದಿನ ಭಾರತ ಪ್ರಧಾನಮಂತ್ರಿ ಜವಾಹರ್​ ಲಾಲ್​ ನೆಹರು ಅವರು ಧ್ವಜಾರೋಹಣ ಮಾಡಿದರು.

ಈ ವರ್ಷದ 2023 ರ ಸ್ವಾತಂತ್ರ್ಯ ದಿನದ ಥೀಮ್ “ನೇಷನ್ ಫಸ್ಟ್, ಆಲ್ವೇಸ್​ ಫಸ್ಟ್” (Nation First Alwas First). “ಆಜಾದಿ ಕಾ ಅಮೃತ್ ಮೊಹತ್ಸವ್” ಅಡಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸ್ವಾತಂತ್ರ್ಯ ಹೋರಾಟಕ್ಕೆ ತಿರುವುಗಳು

1757 ರಲ್ಲಿ, ಈಸ್ಟ್ ಇಂಡಿಯಾ ಕಂಪನಿಯು ಪ್ಲಾಸಿ ಕದನದಲ್ಲಿ ಬಂಗಾಳದ ಕೊನೆಯ ನವಾಬನನ್ನು ಸೋಲಿಸಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಗೆ ನಾಂದಿ ಹಾಡಿತು. ಸಂಘಟಿತ ರೂಪವಾಗಿ 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಇದು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಒಂದು ಪ್ರಮುಖ ಹೋರಾಟವಾಗಿತ್ತು.

1885 ರಲ್ಲಿ, ಭಾರತದ ಮೊದಲ ರಾಜಕೀಯ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಯಿತು. ಮೊದಲ ಮಹಾಯುದ್ಧದ ನಂತರ 1918 ರಲ್ಲಿ ಕೊನೆಗೊಂಡ ನಂತರ, ಭಾರತೀಯ ಕಾರ್ಯಕರ್ತರು ಸ್ವಯಂ ಆಡಳಿತ ಅಥವಾ “ಸ್ವದೇಶಿ ಚಳುವಳಿ” ಆಂದೋಲನ ಆರಂಭವಾಯಿತು.

1929 ರಲ್ಲಿ, ಭಾರತೀಯ ಸಂಸತ್ತು ಲಾಹೋರ್‌ನಲ್ಲಿ ನಡೆದ ಸಭೆಯಲ್ಲಿ ‘ಪೂರ್ಣ ಸ್ವರಾಜ್’ ಎಂಬ ಬೇಡಿಕೆಯನ್ನು ಬ್ರಿಟಿಷ್ ಸರ್ಕಾರದ ಮುಂದೆ ಇಡಲಾಯಿತು. ಭಾರತದ ಕೊನೆಯ ವೈಸ್ರಾಯ್ ಆಗಿದ್ದ ಲಾರ್ಡ್ ಮೌಂಟ್ಬ್ಯಾಟನ್ ಈ ಪ್ರಸ್ತಾಪವನ್ನು ಒಪ್ಪಿಕೊಂಡರು.

15 ಆಗಸ್ಟ್ 1947 ರಂದು, ಲಾರ್ಡ್ ಮೌಂಟ್ ಬ್ಯಾಟನ್ ಬ್ರಿಟಿಷ್ ಭಾರತವನ್ನು ಎರಡು ತುಂಡು ಮಾಡಿ ನೀಡಿದರು. ಭಾರತ ಮತ್ತು ಪಾಕಿಸ್ತಾನ. 1947 ಆಗಸ್ಟ್​ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:24 am, Sat, 12 August 23

ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ