AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ಇಷ್ಟದ ಐಸ್ ಕ್ರೀಮ್ ಫ್ಲೇವರ್ ಯಾವುದು? ಇದುವೇ ಹೇಳುತ್ತೆ ನಿಗೂಢ ವ್ಯಕ್ತಿತ್ವ

ಐಸ್ ಕ್ರೀಮ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಅದರಲ್ಲಿಯೂ ಈ ಬೇಸಿಗೆಯಲ್ಲಿ ತಣ್ಣನೆಯ ಐಸ್ ಕ್ರೀಮ್ ತಿನ್ನಲು ಇಷ್ಟ ಪಡುತ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ಫ್ಲೇವರ್ ಐಸ್ ಕ್ರೀಮ್‌ಗಳು ಲಭ್ಯವಿದೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ಅಭಿರುಚಿಗಳು ಭಿನ್ನವಾಗಿದ್ದು,ಹೀಗಾಗಿ ತಮ್ಮ ಇಷ್ಟದ ಐಸ್ ಕ್ರೀಮ್ ಫ್ಲೇವರ್ ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ನಿಮ್ಮ ಇಷ್ಟದ ಐಸ್ ಕ್ರೀಮ್ ನಿಂದಲೂ ನಿಮ್ಮ ವ್ಯಕ್ತಿತ್ವ ಹೇಗೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದಾಗಿದ್ದು, ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ

Personality Test: ನಿಮ್ಮ ಇಷ್ಟದ ಐಸ್ ಕ್ರೀಮ್ ಫ್ಲೇವರ್ ಯಾವುದು? ಇದುವೇ ಹೇಳುತ್ತೆ ನಿಗೂಢ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Apr 01, 2025 | 3:00 PM

Share

ಈ ಸೃಷ್ಟಿಯಲ್ಲಿರುವ ಎಲ್ಲಾ ವ್ಯಕ್ತಿಗಳು ಒಂದೇ ರೀತಿ ಇರುವುದಿಲ್ಲ. ಹೀಗಾಗಿ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಯ ಗುಣಸ್ವಭಾವ, ವರ್ತನೆ, ನಡವಳಿಕೆಗಳಲ್ಲಿ ಭಿನ್ನತೆಯಿರುತ್ತದೆ. ಆದರೆ ಎಲ್ಲರಿಗೂ ತಿಳಿದಿರುವಂತೆ ನಿಂತುಕೊಳ್ಳುವ ಭಂಗಿ, ಮಲಗುವ, ಕುಳಿತುಕೊಳ್ಳುವ ಭಂಗಿ, ಮೂಗು, ಕಣ್ಣು, ಕಿವಿ, ನಾಲಗೆ, ಹಲ್ಲು ಹಣೆ, ಹುಬ್ಬು, ಕಾಲು ಬೆರಳು ಹಾಗೂ ಕೈಬೆರಳಿನ ಆಕಾರದಿಂದ ವ್ಯಕ್ತಿಯ ವ್ಯಕ್ತಿತ್ವ (personality) ವನ್ನು ನಿರ್ಣಯಿಸಬಹುದು. ಅದರಂತೆ ಈ ಐಸ್ ಕ್ರೀಮ್ ಫ್ಲೆವರ್ (ice cream flavours) ನಿಮ್ಮ ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತದೆಯಂತೆ. ವೆನಿಲ್ಲಾ (vanilla), ಚಾಕೊಲೇಟ್ (chocolate), ಸ್ಟ್ರಾಬೆರಿ (strawberry) ಮುಂತಾದ ವಿಭಿನ್ನ ಫ್ಲೆವರ್ ಗಳು ನಿಮ್ಮ ವ್ಯಕ್ತಿತ್ವದೊಂದಿಗೆ ಬೆಸೆದುಕೊಂಡಿದ್ದು, ಈ ಮೂಲಕ ನಿಮ್ಮ ನಿಗೂಢ ವ್ಯಕ್ತಿತ್ವ ತಿಳಿದುಕೊಳ್ಳುವುದು ಸುಲಭದಾಯಕವಾಗಿದೆ.

  • ಸ್ಟ್ರಾಬೆರಿ : ಸ್ಟ್ರಾಬೆರಿ ಫ್ಲೇವರ್ ಇಷ್ಟ ಜನರು ಸಹಿಷ್ಣುತೆ ಹಾಗೂ ಅಂತರ್ಮುಖಿಗಳಾಗಿರುತ್ತಾರೆ. ಕೆಲಸ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾರೆ. ತಾರ್ಕಿಕ ಸ್ವಭಾವವನ್ನು ಹೊಂದಿದ್ದು, ಚಿಂತನಾಶೀಲರು. ಪ್ರಾಮಾಣಿಕತೆ ಹಾಗೂ ನಿಷ್ಠೆಗೆ ಇನ್ನೊಂದು ಹೆಸರೇ ಈ ವ್ಯಕ್ತಿಗಳು ಎನ್ನಬಹುದು. ಯಾರಿಗೂ ಮೋಸ ಮಾಡಲು ಇಷ್ಟ ಪಡುವುದಿಲ್ಲ. ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಗುಣ ಇವರಲ್ಲಿ ಹೆಚ್ಚಿರುತ್ತದೆ.
  • ವೆನಿಲ್ಲಾ : ವೆನಿಲ್ಲಾ ಫ್ಲೇವರ್ ಇಷ್ಟ ಪಟ್ಟು ಸವಿಯುವ ಜನರು ಹಠಾತ್ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಆದರ್ಶವಾದಿಗಳಾಗಿದ್ದು, ಪ್ರಭಾವಶಾಲಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಧೈರ್ಯದಿಂದ ಹಾಗೂ ಸಲೀಸಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಈ ವ್ಯಕ್ತಿಗಳು ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳಲು ಇಷ್ಟ ಪಡುತ್ತಾರೆ. ಇವರು ತಮ್ಮ ತರ್ಕಕ್ಕಿಂತ ಹೆಚ್ಚಾಗಿ ತಮ್ಮಅಂತಃಪ್ರಜ್ಞೆಯನ್ನು ನಂಬುತ್ತಾರೆ. ಹೀಗಾಗಿ ಏನೇ ಮಾಡುವುದಿದ್ದರೂ ಮನಸ್ಸು ಒಪ್ಪಿದರೆ ಮಾತ್ರ ಮುಂದಿನ ಹೆಜ್ಜೆ ಇಡುತ್ತಾರೆ.
  • ಚಾಕೊಲೇಟ್ : ಚಾಕೊಲೇಟ್ ಐಸ್ ಕ್ರೀಮ್ ಇಷ್ಟಪಡುವ ಜನರು ತಮಾಷೆ ಹಾಗೂ ಹಾಸ್ಯ ಪ್ರವೃತ್ತಿಯಿಂದಲೇ ಗುರುತಿಸಿಕೊಳ್ಳುತ್ತಾರೆ. ಮುಗ್ಧ ಸ್ವಭಾವವನ್ನು ಹೊಂದಿದ್ದು ಸ್ವಲ್ಪ ನಾಟಕೀಯವಾಗಿ ವರ್ತಿಸುವುದೇ ಹೆಚ್ಚು. ಈ ಗುಣಗಳಿಂದಲೇ ಇತರರು ಇವರ ಮೇಲೆ ಆಕರ್ಷಿತರಾಗುತ್ತಾರೆ. ಕೆಲವೊಮ್ಮೆ ಸ್ವಲ್ಪ ಕಹಿಯಾಗಿ ಮುಖಕ್ಕೆ ಹೊಡೆದಂತೆ ಮಾತನಾಡುತ್ತಾರೆ.
  • ಪುದೀನ ಚಾಕೊಲೇಟ್ ಚಿಪ್ : ಪುದೀನ ಚಾಕೊಲೇಟ್ ಚಿಪ್ ಇಷ್ಟಪಡುವ ಜನರು ಮಹತ್ವಾಕಾಂಕ್ಷೆಯುಳ್ಳವರು. ಈ ಜನರಲ್ಲಿ ಆತ್ಮವಿಶ್ವಾಸ ಹಾಗೂ ತಾರ್ಕಿಕ ಗುಣ ಅಧಿಕವಾಗಿರುತ್ತದೆ. ಈ ಜನರು ತಮ್ಮ ಆಲೋಚನೆಗಳನ್ನು ಇತರರ ಮುಂದೆ ವ್ಯಕ್ತಪಡಿಸಲು ಇಷ್ಟಪಡುತ್ತಾರೆ. ಕೆಲವೊಮ್ಮೆ ಈ ವ್ಯಕ್ತಿಗಳ ಆಲೋಚನೆಗಳು ಹಾಗೂ ಮಾತುಗಳಿಂದಲೇ ಸುತ್ತಲಿನ ವ್ಯಕ್ತಿಗಳು ಪ್ರಭಾವಿತರಾಗುತ್ತಾರೆ.
  • ಕಾಫಿ: ಕಾಫಿ ಫ್ಲೇವರ್ ಐಸ್ ಕ್ರೀಮ್ ಇಷ್ಟಪಡುವ ಮಾನಸಿಕ ಹಾಗೂ ದೈಹಿಕವಾಗಿ ಶಕ್ತಿವಂತರು. ಈ ವ್ಯಕ್ತಿಗಳು ಜೀವನದ ಯಾವುದೇ ಕೆಟ್ಟ ಹೊಡೆತಗಳಿಗೆ ಕುಗ್ಗುವುದಿಲ್ಲ. ಎಲ್ಲರೊಂದಿಗೆ ಬೆರೆಯುವ ಇವರು ಬಿಡುವು ಸಿಕ್ಕಾಗಲೆಲ್ಲಾ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಹೀಗಾಗಿ ಇವರನ್ನು ಅಧ್ಯಯನ ಶೀಲರು ಎನ್ನಬಹುದು.
  • ಚಾಕೊಲೇಟ್ ಚಿಪ್ : ಚಾಕೊಲೇಟ್ ಚಿಪ್ ಫ್ಲೇವರ್ ಐಸ್ ಕ್ರೀಮ್ ಇಷ್ಟಪಡುವವರು ಉದಾರ ಮನೋಭಾವದವರು. ಇವರಿಗೆ ಸಂದರ್ಭ ಹಾಗೂ ಸನ್ನಿವೇಶವನ್ನು ಚೆನ್ನಾಗಿ ನಿರ್ವಹಿಸಲು ಗೊತ್ತಿರುತ್ತದೆ. ಕಷ್ಟಕರ ಸಂದರ್ಭದಲ್ಲಿ ಯಾರಿಗೂ ನೋವಾಗದಂತೆ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಈ ಜನರು ದೃಢನಿಶ್ಚಯ ಹೊಂದಿದ್ದು, ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಯಾವುದೇ ಗೊಂದಲವಿರುವುದಿಲ್ಲ. ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಲು ತುಂಬಾನೇ ಶ್ರಮಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ