2 ಕೋಟಿ ರೂ. ಇನ್ಶೂರೆನ್ಸ್ ಹಣ ಪಡೆಯಲು ಬದುಕಿದ್ದ ಮಗನನ್ನು ಸತ್ತನೆಂದು ಬಿಂಬಿಸಿದ ತಂದೆ
ದುರಾಸೆ ದುಃಖಕ್ಕೆ ಕಾರಣ ಎನ್ನುವಂತೆ 2ಕೋಟಿ ರೂ., ಇನ್ಶೂರೆನ್ಸ್ ಹಣ ಪಡೆಯಲು ಹೋಗಿ ತಂದೆ-ಮಗ ಜೈಲು ಪಾಲಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ನಕಲಿ ಮರಣ ಪ್ರಮಾಣ ಪತ್ರವನ್ನು ಮಾಡಲಾಗಿತ್ತು, ಹಾಗೆಯೇ ನಕಲಿ ದಹನವನ್ನು ಕೂಡ ಮಾಡಲಾಗಿತ್ತು, ಹದಿಮೂರನೇ ದಿನದಂದು ಔತಣಕೂಟವನ್ನು ಕೂಡ ಆಯೋಜಿಸಲಾಗಿತ್ತು. ಆದರೆ ಪೊಲೀಸ್ ತನಿಖೆಯಲ್ಲಿ ಸತ್ಯ ಬಯಲಾಯಿತು. ನಜಾಫ್‌ಗಢ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ನವದೆಹಲಿ, ಏಪ್ರಿಲ್ 1: ಹಣದ ದುರಾಸೆಯಿದ್ದವನು ಯಾವ ಮಟ್ಟಕ್ಕಾದರೂ ಇಳಿಯುತ್ತಾನೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ವಿಮಾ ಕಂಪನಿ(Insurance Company)ಯಿಂದ 2 ಕೋಟಿ ರೂ. ಇನ್ಶೂರೆನ್ಸ್ ಹಣ ಪಡೆಯಲು ವ್ಯಕ್ತಿಯೊಬ್ಬ ಬದುಕಿರುವ ಮಗನನ್ನು ಸತ್ತಿದ್ದಾನೆಂದು ಬಿಂಬಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ನಕಲಿ ಮರಣ ಪ್ರಮಾಣ ಪತ್ರವನ್ನು ಸಿದ್ಧಪಡಿಸಲಾಗಿತ್ತು, ಹಾಗೆಯೇ ನಕಲಿ ದಹನವನ್ನು ಕೂಡ ಮಾಡಲಾಗಿತ್ತು, ಹದಿಮೂರನೇ ದಿನದಂದು ಔತಣಕೂಟವನ್ನು ಕೂಡ ಆಯೋಜಿಸಲಾಗಿತ್ತು. ಆದರೆ ಪೊಲೀಸ್ ತನಿಖೆಯಲ್ಲಿ ಸತ್ಯ ಬಯಲಾಯಿತು. ನಜಾಫ್‌ಗಢ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ಪ್ರಕರಣದಲ್ಲಿ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗ ಆರೋಪಿಗಳು ಜಾಮೀನಿಗಾಗಿ ಅಲೆಯುತ್ತಿದ್ದಾರೆ. ಮಾರ್ಚ್ 5 ರ ರಾತ್ರಿ, ನಜಾಫ್‌ಗಢದ ಫಿರ್ನಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ ಎಂದು ವರದಿಯಾಗಿತ್ತು.
ಅದರಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಬಳಿಕ ಸತ್ತಿದ್ದಾನೆಂದು ಬಿಂಬಿಸಲಾಯಿತು. ಅವರ ತಂದೆ ಅಂತ್ಯಕ್ರಿಯೆ ನಡೆಸಿದಂತೆ ಬಿಂಬಿಸಿ ಹಳ್ಳಿಯ ಸು್ತತಲೂ ಸುದ್ದಿ ಹಬ್ಬಿಸಿದರು. ದೇಹವು ಕೆಟ್ಟದಾಗಿ ಗಾಯಗೊಂಡಿತ್ತು ಹೀಗಾಗಿ ಗಂಗಾ ನದಿಯ ಬಳಿ ದಹನ ಮಾಡಲಾಯಿತು ಎಂದು ಹೇಳಿ ನಂಬಿಸಿದ್ದರು. ಮರಣ ಪ್ರಮಾಣ ಪತ್ರವನ್ನೂ ಪಡೆದುಕೊಂಡರು, ವಿಮೆಯನ್ನು ಪಡೆಯಲು ಮುಂದಿನ ಪ್ರಕ್ರಿಯೆ ಪ್ರಾರಂಭವಾದಾಗ ಪೊಲೀಸ್ ದಾಖಲೆಗಳು ಕೂಡ ಮುಖ್ಯವಾದವು.
ಮತ್ತಷ್ಟು ಓದಿ: ಬೆಳೆ ವಿಮೆಯಲ್ಲಿ ಭಾರಿ ಅಕ್ರಮದ ಅನುಮಾನ: ಮಧ್ಯವರ್ತಿಗಳ ಮೂಲಕ ವಿಮೆ ಮಾಡಿದ ರೈತರಿಗಷ್ಟೇ ಹಣ ಜಮೆ
ಬಳಿಕ ವಕೀಲರೊಬ್ಬರು ಪೊಲೀಸ್ ಠಾಣೆಗೆ ಬಂದಿದ್ದರು. ಡಿಕ್ಕಿ ಹೊಡೆದ ಬೈಕ್ ಸವಾರನನ್ನೂ ಪೊಲೀಸರ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿಸಲಾಯಿತು. ಆ ನಕಲಿ ಆರೋಪಿ ಯುವಕ ಕೂಡ ಹೌದು, ತನ್ನ ಬೈಕ್‌ಗೆ ಡಿಕ್ಕಿಯಾಗಿದೆ ಎಂದು ಹೇಳಿದ್ದ.
ಆದರೆ ನಜಾಫ್‌ಗಢ ಪೊಲೀಸ್ ಠಾಣೆಯ ಪೊಲೀಸರು ಈ ವಿಷಯದ ತನಿಖೆ ಆರಂಭಿಸಿದಾಗ, ಆತ ಸತ್ತಿಲ್ಲ ಬದುಕಿದ್ದಾನೆ ಎನ್ನುವ ವಿಚಾರ ಬಹಿರಂಗಗೊಂಡಿದೆ. ಬಳಿಕ ಇಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ








