ದೆಹಲಿಗೆ ಬಂದು ಬಿಜೆಪಿ ನಾಯಕನನ್ನು ಬಂಧಿಸಿ ಕರೆದುಕೊಂಡು ಹೋದ ಪಂಜಾಬ್ ಪೊಲೀಸ್​; ದೆಹಲಿ ಪೊಲೀಸರಿಂದ ಕಿಡ್ನಾಪ್​ ಕೇಸ್​ ದಾಖಲು

| Updated By: Lakshmi Hegde

Updated on: May 06, 2022 | 1:02 PM

ಪಂಜಾಬ್​​ನಲ್ಲಿ ತಮಗೆ ಸಿಕ್ಕ ಅಧಿಕಾರವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಪಕ್ಷಗಳನ್ನು ಹೆದರಿಸಲು ಬಳಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಪಂಜಾಬ್ ಪೊಲೀಸರು ಕಿಡಿಕಾರಿದ್ದಾರೆ.

ದೆಹಲಿಗೆ ಬಂದು ಬಿಜೆಪಿ ನಾಯಕನನ್ನು ಬಂಧಿಸಿ ಕರೆದುಕೊಂಡು ಹೋದ ಪಂಜಾಬ್ ಪೊಲೀಸ್​; ದೆಹಲಿ ಪೊಲೀಸರಿಂದ ಕಿಡ್ನಾಪ್​ ಕೇಸ್​ ದಾಖಲು
ಬಂಧಿತ ಬಿಜೆಪಿ ಮುಖಂಡ
Follow us on

ದೆಹಲಿ: ಇಲ್ಲಿನ ಬಿಜೆಪಿ ನಾಯಕ ತಜೀಂದರ್ ಪಾಲ್​ ಸಿಂಗ್​ ಬಗ್ಗಾ ಅವರನ್ನು ಪಂಜಾಬ್​ ಪೊಲೀಸರು ಇಂದು ಬಂಧಿಸಿದ್ದಾರೆ. ತಜೀಂದರ್ ಅವರ ದೆಹಲಿಯಲ್ಲಿರುವ ನಿವಾಸಕ್ಕೆ ಪಂಜಾಬ್​ನಿಂದ ಬಂದ 10-15 ಪೊಲೀಸರು ಅಲ್ಲಿಂದಲೇ ಅರೆಸ್ಟ್ ಮಾಡಿಕೊಂಡು ಕರೆದುಕೊಂಡು ಹೋಗಿದ್ದಾರೆ. ತಜೀಂದರ್​ ಪಾಲ್​ ಸಿಂಗ್​ ಅವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ, ಈ ಮೂಲಕ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಹರಡಿದ್ದಾರೆ. ಅಷ್ಟೇ ಅಲ್ಲ, ಮಾರ್ಚ್​ 30ರಂದು ನಡೆದ ಪ್ರತಿಭಟನೆ ವೇಳೆ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​​ಗೆ ಬೆದರಿಕೆಯನ್ನೂ ಹಾಕಿದ್ದರು ಎಂದು ಆಪ್​ ನಾಯಕ ಸನ್ನಿ ಸಿಂಗ್​ ನೀಡಿದ ದೂರಿನ ಅನ್ವಯ ಪಂಜಾಬ್​ ಪೊಲೀಸರು ಬಂಧಿಸಿದ್ದಾರೆ. ಇನ್ನು ಬಗ್ಗಾರನ್ನು ಕರೆದುಕೊಂಡು ಹೋಗುತ್ತಿದ್ದ ಪಂಜಾಬ್​ ಪೊಲೀಸರನ್ನು ಮಾರ್ಗಮಧ್ಯದಲ್ಲಿ ಹರ್ಯಾಣ ಪೊಲೀಸರು ತಡೆದಿದ್ದಾರೆ. ಮತ್ತೊಂದೆಡೆ ಬಗ್ಗಾ ತಂದೆ ನೀಡಿದ ದೂರಿನ ಅನ್ವಯ ದೆಹಲಿ ಪೊಲೀಸರು ಕಿಡ್ನ್ಯಾಪ್​ ಕೇಸ್​​ ದಾಖಲು ಮಾಡಿದ್ದಾರೆ. 

ತಜೀಂದರ್ ಪಾಲ್​ ಸಿಂಗ್ ಬಗ್ಗಾರನ್ನು ಬಂಧಿಸಿದ್ದಕ್ಕೆ ಅವರ ತಂದೆ ಕೃಪಾಳ್​ ಸಿಂಗ್ ಬಗ್ಗಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಂಜಾಬ್​​ನ 10-15 ಪೊಲೀಸರು ಇಂದು ಮುಂಜಾನೆ 8.30ರ ಹೊತ್ತಿಗೆ  ನಮ್ಮ ಮನೆಗೆ ನುಗ್ಗಿದರು. ಅವರು ನನ್ನ ಮಗನನ್ನು ಕರೆದುಕೊಂಡು ಹೋಗುವುದನ್ನು ನಾನು ವಿಡಿಯೋ ಮಾಡಲು ಪ್ರಯತ್ನಿಸಿದ್ದಕ್ಕೆ ನನ್ನ ಮುಖದ ಮೇಲೆ ಹೊಡೆದಿದ್ದಾರೆ. ನನ್ನ ಮೊಬೈಲ್​​ ಕೂಡ ಕಸಿದುಕೊಂಡರು.  ನಂತರ ತೇಜಿಂದರ್​ರನನ್ನು ಹೊರಗೆ ಎಳೆದುಕೊಂಡು ಹೋದರು ಎಂದು ಆರೋಪಿಸಿದ್ದಾರೆ.

ಬಿಜೆಪಿ ಬಗ್ಗಾ ಬಂಧನವನ್ನು ಖಂಡಿಸಿದೆ. ಪಂಜಾಬ್​​ನಲ್ಲಿ ತಮಗೆ ಸಿಕ್ಕ ಅಧಿಕಾರವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಪಕ್ಷಗಳನ್ನು ಹೆದರಿಸಲು ಬಳಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು. ತಜೀಂದರ್​ ಪಾಲ್ ಸಿಂಗ್​ ಬಗ್ಗಾರೊಂದಿಗೆ ದೆಹಲಿಯ ಪ್ರತಿಯೊಬ್ಬ ನಾಗರಿಕರೂ ಇದ್ದಾರೆ ಎಂದು ಬಿಜೆಪಿ ದೆಹಲಿ ವಕ್ತಾರ ಪ್ರವೀಣ್​ ಶಂಕರ್ ಕಪೂರ್ ತಿಳಿಸಿದ್ದಾರೆ.  ಹಾಗೇ ಬಿಜೆಪಿ ನಾಯಕ ಕಪಿಲ್​ ಮಿಶ್ರಾ, ತಜೀಂದರ್ ಬಗ್ಗಾರನ್ನು ಸುಮಾರು 50 ಜನ ಪೊಲೀಸರು ಸೇರಿ ಮನೆಯಿಂದ ಎಳೆದುಕೊಂಡು ಹೋಗಿದ್ದಾರೆ. ನಿಜವಾಗಿಯೂ ನಾಯಕನಾದವನು, ಪ್ರತಿಪಕ್ಷಗಳ ನಾಯಕರನ್ನು ಹೆದರಿಸಲು ಇಂಥ ಕೀಳು ಮಟ್ಟದ ತಂತ್ರ ಉಪಯೋಗಿಸುವುದಿಲ್ಲ ಎಂದಿದ್ದಾರೆ. ಬಿಜೆಪಿ ಐಟಿ ಸೆಲ್​ ಚೀಫ್​ ಅಮಿತ್ ಮಾಳವಿಯಾ ಕೂಡ ಈ ಬಂಧನ ಖಂಡಿಸಿ ಟ್ವೀಟ್ ಮಾಡಿದ್ದಾರೆ.

ಅರೆಸ್ಟ್ ಮಾಡಿದ್ದನ್ನು ಸಮರ್ಥಿಸಿಕೊಂಡ ಪೊಲೀಸರು

ಇದೆಲ್ಲದರ ಮಧ್ಯೆ ಬಗ್ಗಾರನ್ನು ಬಂಧಿಸಿದ ತಮ್ಮ ಕ್ರಮವನ್ನು ಪಂಜಾಬ್​ ಪೊಲೀಸರು ಸಮರ್ಥನೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ಐದು ಬಾರಿ ಬಗ್ಗಾರಿಗೆ ನೋಟಿಸ್​ ನೀಡಿದ್ದೆವು. ಆದರೆ ಅವರು ಬರಲಿಲ್ಲ. ಹಾಗಾಗಿ ಅರೆಸ್ಟ್ ಮಾಡಬೇಕಾಯಿತು ಎಂದಿದ್ದಾರೆ.  ಬಗ್ಗಾರನ್ನು ಶೀಘ್ರವೇ ಪಂಜಾಬ್​ ಕೋರ್ಟ್​ಗೆ ಹಾಜರುಪಡಿಸಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಯೂನಿಫಾರ್ಮ್ ಹಾಕಿ ಕಳ್ಳರನ್ನು ಹಿಡಿಯುತ್ತಿದ್ದವರು ಈಗ ಸಮವಸ್ತ್ರ ತೆಗೆದು ಲಾಕಪ್​ನಲ್ಲಿದ್ದಾರೆ, ಭ್ರಷ್ಟರಿಗೆ ಇದೇ ಗತಿ: ಆರಗ ಜ್ಞಾನೇಂದ್ರ

Published On - 1:01 pm, Fri, 6 May 22