ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಬೀಜಿಂಗ್​ ಏರ್​ಪೋರ್ಟ್​ ಫೋಟೋ ಹಂಚಿಕೊಂಡ ಬಿಜೆಪಿ ನಾಯಕರು !; ಚೀನಾ ತಗಾದೆ

| Updated By: Lakshmi Hegde

Updated on: Nov 27, 2021 | 2:11 PM

ಭಾರತ ಸರ್ಕಾರ ತಾನು ಮೂಲಸೌಕರ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ತೋರಿಸಿಕೊಳ್ಳಲು ಬೀಜಿಂಗ್​ನ ಡ್ಯಾಕ್ಸಿಂಗ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಫೋಟೋವನ್ನು ತೋರಿಸಿಕೊಂಡಿದ್ದು ಶಾಕಿಂಗ್​ ಎಂದು ಶೇನ್​ ಶಿವೇಯಿ ಹೇಳಿದ್ದಾರೆ.

ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಬೀಜಿಂಗ್​ ಏರ್​ಪೋರ್ಟ್​ ಫೋಟೋ ಹಂಚಿಕೊಂಡ ಬಿಜೆಪಿ ನಾಯಕರು !; ಚೀನಾ ತಗಾದೆ
ವಿವಾದಕ್ಕೆ ಕಾರಣವಾಗಿರುವ ಚಿತ್ರ
Follow us on

ಉತ್ತರಪ್ರದೇಶದ ಜೇವಾರ್​​ನಲ್ಲಿ ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊನ್ನೆ ತಾನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಅದರ ಬೆನ್ನಲ್ಲೇ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೇರಿ ಹಲವು ಕೇಂದ್ರ ಮಂತ್ರಿಗಳು, ಬಿಜೆಪಿ ಮುಖಂಡರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಒಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ನೊಯ್ಡಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಧುನಿಕ ವ್ಯವಸ್ಥೆ ಮಾಡುವ ಬಗ್ಗೆ, ಅದರ ವಿಶೇಷತೆಗಳ ಬಗ್ಗೆ ವಿವರಿಸಲಾಗಿದೆ. ಹಾಗೇ ಕೆಲವು ಫೋಟೋಗಳನ್ನು ಬಳಸಲಾಗಿದೆ. ಆದರೆ ಈ ವಿಡಿಯೋ,  ನೋಡಿದ ಚೀನಾ ತಗಾದೆ ತೆಗೆದಿದೆ. ವಿಡಿಯೋದಲ್ಲಿ ನೊಯ್ಡಾ ವಿಮಾನ ನಿಲ್ದಾಣ ಎಂದು ಹೇಳಿ ಬಳಸಿಕೊಳ್ಳಲಾದ ಫೋಟೋ ಬೀಜಿಂಗ್​ನ ಡ್ಯಾಕ್ಸಿಂಗ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ್ದು ಎಂದು ಚೀನಾ ಸರ್ಕಾರದ ಮಾಧ್ಯಮ ಗ್ಲೋಬಲ್​ ಟೆಲಿವಿಷನ್​ ನೆಟ್ವರ್ಕ್​​ ಹೇಳಿದೆ.

ಈ ಬಗ್ಗೆ ಧ್ವನಿ ಎತ್ತಿದವರು ಗ್ಲೋಬಲ್​ ಟೆಲಿವಿಷನ್​ ನೆಟ್ವರ್ಕ್​​ನ ಪತ್ರಕರ್ತ ಶೇನ್​ ಶಿವೇಯಿ ಎಂಬುವರು. ಭಾರತ ಸರ್ಕಾರ ತಾನು ಮೂಲಸೌಕರ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ತೋರಿಸಿಕೊಳ್ಳಲು ಬೀಜಿಂಗ್​ನ ಡ್ಯಾಕ್ಸಿಂಗ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಫೋಟೋವನ್ನು ತೋರಿಸಿಕೊಂಡಿದ್ದು ಶಾಕಿಂಗ್​ ಎಂದು ಬರೆದುಕೊಂಡಿದ್ದಾರೆ. ಹಾಗೇ, ಸೋಷಿಯಲ್ ಮೀಡಿಯಾದಲಲ್ಲಿ ಶೇರ್​ ಮಾಡಿಕೊಂಡಿರವು ಬಿಜೆಪಿ ನಾಯಕರ ಹೆಸರಿನ ಸಹಿತ ಅವರ ಪೋಸ್ಟ್​ಗಳ ಸ್ಕ್ರೀನ್​ಶಾಟ್​ ತೆಗೆದು ಎಲ್ಲವನ್ನೂ ಕೊಲ್ಯಾಜ್ ಮಾಡಿ ಶೇರ್ ಮಾಡಿದ್ದಾರೆ. ಹಾಗೇ, 2017ರಲ್ಲಿ ಗಾರ್ಡಿಯನ್​​ನಲ್ಲಿ ಪ್ರಕಟವಾಗಿದ್ದ ಬೀಜಿಂಗ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಿತ್ರವನ್ನೂ ಶೇರ್ ಮಾಡಿಕೊಂಡಿದ್ದಾರೆ.

ಅನುರಾಗ್ ಠಾಕೂರ್ ಶೇರ್​ ಮಾಡಿರುವ ವಿಡಿಯೋ

ಇದನ್ನೂ ಓದಿ: ಮೈಸೂರು: ಕೇರಳದಲ್ಲಿ ನೊರೊ ವೈರಸ್ ಪತ್ತೆ, ಕರ್ನಾಟಕದಲ್ಲಿ ಕಟ್ಟೆಚ್ಚರ; ಬಾವಲಿ ಗ್ರಾಮದಲ್ಲಿ ಮನೆಮನೆಗೆ ತೆರಳಿ ಸಮೀಕ್ಷೆ

Published On - 1:17 pm, Sat, 27 November 21