ಪೂರ್ವ ದೆಹಲಿ ಕ್ಷೇತ್ರದ ಬಿಜೆಪಿ ಸಂಸದ ಗೌತಮ್ ಗಂಭೀರ್ (Gautam Gambhir) ಅವರಿಗೆ ಕೊವಿಡ್ 19 ಸೋಂಕು (Covid 19 ) ತಗುಲಿದೆ. ಹಾಗೇ, ಸೌಮ್ಯ ಲಕ್ಷಣಗಳು ಇರುವುದಾಗಿ ಅವರು ತಿಳಿಸಿದ್ದಾರೆ. ನನಗೆ ಸೌಮ್ಯ ಲಕ್ಷಣಗಳಿದ್ದವು. ತಪಾಸಣೆ ಮಾಡಿಸಿದ ನಂತರ ಕೊವಿಡ್ 19 ಇರುವುದು ದೃಢಪಟ್ಟಿದೆ. ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ. 2021ರ ನವೆಂಬರ್ನಲ್ಲಿ ಗಂಭೀರ್ ಕುಟುಂಬದ ಸದಸ್ಯರಲ್ಲಿ ಕೊವಿಡ್ 19 ದೃಢಪಟ್ಟಿದ್ದರಿಂದ ಅವರು ಐಸೋಲೇಟ್ ಆಗಿದ್ದರು.
After experiencing mild symptoms, I tested positive for COVID today. Requesting everyone who came into my contact to get themselves tested. #StaySafe
— Gautam Gambhir (@GautamGambhir) January 25, 2022
ಗೌತಮ್ ಗಂಭೀರ್ ಕೆಲವು ದಿನಗಳಿಂದಲೂ ಭರ್ಜರಿ ಸುದ್ದಿಯಲ್ಲಿದ್ದಾರೆ. ಅದಕ್ಕೆ ಮುಖ್ಯ ಕಾರಣ ಅವರು ಮತ್ತೊಮ್ಮೆ ಕ್ರಿಕೆಟ್ ಫೀಲ್ಡ್ಗೆ ಕಾಲಿಟ್ಟಿದ್ದು. ಹಾಗಂತ ಅವರು ಕ್ರಿಕೆಟ್ ಆಡುತ್ತಿಲ್ಲ. 15ನೇ ಆವೃತ್ತಿಯ ಐಪಿಎಲ್ನಲ್ಲಿ ಹೊಸದಾಗಿ ಆಡಲಿರುವ ಲಖನೌ ತಂಡದ ಮೆಂಟರ್ ಆಗಲಿದ್ದಾರೆ. ಈ ಸಂಬಂಧ ಕಳೆದ ಕೆಲವು ದಿನಗಳಿಂದಲೂ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಹೀಗೆ ಹೊಸದಾಗಿ ಸೇರ್ಪಡೆಯಾಗಲಿರುವ ಲಖನೌ ತಂಡ, ಲಖನೌ ಸೂಪರ್ ಜೇಂಟ್ಸ್ ಎಂದು ಹೆಸರಿಟ್ಟುಕೊಂಡಿದೆ.
ಹಲವು ರಾಜಕಾರಣಿಗಳಿಗೆ ಕೊರೊನಾ ಸೋಂಕು
ಇನ್ನು ರಾಜಕಾರಣಿಗಳಿಗೆ ಹಲವರಿಗೆ ಕೊರೊನಾ ಸೋಂಕು ತಗುಲಿದೆ. ನಿನ್ನೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾತ್ ತಮಗೆ ಕೊರೊನಾ ವೈರಸ್ ತಗುಲಿದೆ ಎಂದು ಟ್ವೀಟ್ ಮಾಡಿ ಹೇಳಿದ್ದರು. ಜ.31ರಂದು ಸಂಸತ್ತಿನ ಬಜೆಟ್ ಅಧಿವೇಶನ ಪ್ರಾರಂಭವಾಗಲಿದ್ದು, ಅದಕ್ಕೂ ಮೊದಲು ಅಲ್ಲಿನ ಸುಮಾರು 875 ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಭಾನುವಾರ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ತಮಗೆ ಕೊರೊನಾ ಸೋಂಕು ತಗುಲಿದ್ದಾಗಿ ಹೇಳಿಕೊಂಡಿದ್ದರು. ವೆಂಕಯ್ಯ ನಾಯ್ಡು ಅವರು ಹೈದರಾಬಾದ್ನಲ್ಲಿದ್ದು, ಅವರಲ್ಲಿ ಕೊರೊನಾ ದೃಢಪಟ್ಟಿದೆ. ಸದ್ಯ ಐಸೋಲೇಶನ್ಗೆ ಒಳಗಾಗಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದವರೆಲ್ಲ ತಪಾಸಣೆಗೆ ಒಳಗಾಗುವಂತೆ ಹೇಳಿದ್ದಾರೆ. ಇವರು 2021ರಲ್ಲೂ ಒಮ್ಮೆ ಕೊರೊನಾಕ್ಕೆ ಒಳಗಾಗಿದ್ದರು. ಇದು ಎರಡನೇ ಬಾರಿಗೆ ಅವರಿಗೆ ಸೋಂಕು ತಗುಲಿದೆ. ಸೌಮ್ಯ ಲಕ್ಷಣಗಳನ್ನು ಹೊಂದಿದ್ದಾಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಾಂಕ್ರಾಮಿಕ ರೋಗ ಅಂತ್ಯ ಕಾಣುತ್ತಿದೆ ಎಂದು ಭಾವಿಸುವುದು ಅಪಾಯಕಾರಿ: ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ