ಹೈದರಾಬಾದ್ ಎನ್ಕೌಂಟರ್, ಪ್ರಾಣಿಪ್ರಿಯಾ ಮೇನಕಾ ಗಾಂಧಿ ಏನಂತ ರಿಯಾಕ್ಟ್​ ಮಾಡಿದರು?

|

Updated on: Dec 06, 2019 | 12:34 PM

ಹೈದರಾಬಾದ್: ವೈದ್ಯೆ ಪ್ರಿಯಾಂಕಾ ರೆಡ್ಡಿ ಭಯಾನಕ ಗ್ಯಾಂಗ್​ ರೇಪ್​ ಮತ್ತು ಮರ್ಡರ್​ ಪ್ರಕರಣದಲ್ಲಿ ಎಲ್ಲ ನಾಲ್ಕೂ ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಇಂದು ಬೆಳಗಿನ ಜಾವ ಗುಂಡಿಟ್ಟು ಎನ್ಕೌಂಟರ್​ ಮಾಡಿದ್ದಾರೆ. ಕನ್ನಡಿಗ, ಸೈಬರಾದಾಬ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡದಿಂದ ಆರೋಪಿಗಳ ಮೇಲೆ ಎನ್‌ಕೌಂಟರ್ ಆಗಿದೆ. ಇದಕ್ಕೆ ನಾಗರಿಕ ಸಮಾಜ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪೊಲೀಸ್​ ಕಾರ್ಯವನ್ನು ಹಾಡಿಹೊಗಳಿದೆ. ಈ ಮಧ್ಯೆ, ಕೆಲವರು ಪೊಲೀಸರ ಈ ಕೃತ್ಯವನ್ನು ಖಂಡಿಸಿ, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ಎನ್ಕೌಂಟರ್ ಕೃತ್ಯ ಭಯಾನಕವಾಗಿದೆ. […]

ಹೈದರಾಬಾದ್ ಎನ್ಕೌಂಟರ್, ಪ್ರಾಣಿಪ್ರಿಯಾ ಮೇನಕಾ ಗಾಂಧಿ ಏನಂತ ರಿಯಾಕ್ಟ್​ ಮಾಡಿದರು?
Follow us on

ಹೈದರಾಬಾದ್: ವೈದ್ಯೆ ಪ್ರಿಯಾಂಕಾ ರೆಡ್ಡಿ ಭಯಾನಕ ಗ್ಯಾಂಗ್​ ರೇಪ್​ ಮತ್ತು ಮರ್ಡರ್​ ಪ್ರಕರಣದಲ್ಲಿ ಎಲ್ಲ ನಾಲ್ಕೂ ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಇಂದು ಬೆಳಗಿನ ಜಾವ ಗುಂಡಿಟ್ಟು ಎನ್ಕೌಂಟರ್​ ಮಾಡಿದ್ದಾರೆ. ಕನ್ನಡಿಗ, ಸೈಬರಾದಾಬ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡದಿಂದ ಆರೋಪಿಗಳ ಮೇಲೆ ಎನ್‌ಕೌಂಟರ್ ಆಗಿದೆ. ಇದಕ್ಕೆ ನಾಗರಿಕ ಸಮಾಜ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪೊಲೀಸ್​ ಕಾರ್ಯವನ್ನು ಹಾಡಿಹೊಗಳಿದೆ. ಈ ಮಧ್ಯೆ, ಕೆಲವರು ಪೊಲೀಸರ ಈ ಕೃತ್ಯವನ್ನು ಖಂಡಿಸಿ, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ ಎನ್ಕೌಂಟರ್ ಕೃತ್ಯ ಭಯಾನಕವಾಗಿದೆ. ಜನರನ್ನು ಹೀಗೆಲ್ಲ ನಿಮ್ಮಿಷ್ಟದಂತೆ ಸಾಯಿಸುವ ಹಾಗಿಲ್ಲ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳುವ ಹಾಗಿಲ್ಲ. ಅವರನ್ನು ಸಾಯಿಸಿಬೇಕ ಎಂದು ಮನಸ್ಸಿಗೆ ಅನ್ನಿಸಿದ ತಕ್ಷಣ ಸುಮ್ಮಸುಮ್ನೆ ಗನ್ ತೆಗೆದುಕೊಂಡು ಗುಂಡು ಹಾರಸುವ ಹಾಗಿಲ್ಲ. ಬೆಳಗ್ಗೆ ನಡೆದಿರುವುದು ದೇಶದ ದೃಷ್ಟಿಯಿಂದ ನಿಜಕ್ಕೂ ಭಯಾನಕವಾಗಿದೆ ಎಂದು ಬಿಜೆಪಿ ಮಾಜಿ ಸಂಸದೆ, ಪ್ರಾಣಿದಯಾ ಕಾರ್ಯಕರ್ತೆ ಮೇನಕಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

Published On - 12:28 pm, Fri, 6 December 19