ಸಂಸದರಿಗೆ‌ ಇನ್ಮುಂದೆ ಸಿಗಲ್ಲ ಸಬ್ಸಿಡಿ ಊಟ!

ದೆಹಲಿ: ನಮ್ಮ ದೇಶದಲ್ಲಿ ನಿಧಾನವಾಗಿ ವಿಐಪಿ ಸಂಸ್ಕೃತಿಯ ಒಂದೊಂದೇ ಪಳೆಯುಳಿಕೆಗಳು ಅಂತ್ಯವಾಗುತ್ತಿದೆ. ಈಗಾಗಲೇ ನಮ್ಮ ದೇಶದಲ್ಲಿ ವಿಐಪಿಗಳ ಕೆಂಪು ಗೂಟದ ಸಂಸ್ಕೃತಿಯು‌ ಅಂತ್ಯವಾಗಿದೆ. ಈಗ ಸಂಸದರಿಗೆ ಸಂಸತ್ ಭವನದಲ್ಲಿ ನೀಡುತ್ತಿದ್ದ ಸಬ್ಸಿಡಿ ಊಟಕ್ಕೂ ಫುಲ್‌ ಬ್ರೇಕ್ ಬಿದ್ದಿದೆ. ಇದರಿಂದ ಸರ್ಕಾರಕ್ಕೆ ಕೋಟಿ ಕೋಟಿ ಉಳಿತಾಯವಾಗಲಿದೆ. ನಮ್ಮ ದೇಶದಲ್ಲಿ ವಿಐಪಿ ಸಂಸ್ಕೃತಿ ಜೋರಾಗಿಯೇ ಇದೆ. ಸಂಸದರು ನಮ್ಮ ದೇಶದ ವಿಐಪಿಗಳು, ಅವರಿಗೆ ಎಲ್ಲೆಡೆ ರಾಜ ಮರ್ಯಾದೆ. ಜನರಿಗೆ ತಿನ್ನೋಕೆ ಅನ್ನ ಇಲ್ಲದಿದ್ರೂ ಪರವಾಗಿಲ್ಲ, ಇವ್ರಿಗೆ ಸರ್ಕಾರದಿಂದ ಎಲ್ಲಾ ಉಚಿತ […]

ಸಂಸದರಿಗೆ‌ ಇನ್ಮುಂದೆ ಸಿಗಲ್ಲ ಸಬ್ಸಿಡಿ ಊಟ!
ಸಂಸತ್ ಭವನ
Follow us
ಸಾಧು ಶ್ರೀನಾಥ್​
|

Updated on:Dec 06, 2019 | 12:29 PM

ದೆಹಲಿ: ನಮ್ಮ ದೇಶದಲ್ಲಿ ನಿಧಾನವಾಗಿ ವಿಐಪಿ ಸಂಸ್ಕೃತಿಯ ಒಂದೊಂದೇ ಪಳೆಯುಳಿಕೆಗಳು ಅಂತ್ಯವಾಗುತ್ತಿದೆ. ಈಗಾಗಲೇ ನಮ್ಮ ದೇಶದಲ್ಲಿ ವಿಐಪಿಗಳ ಕೆಂಪು ಗೂಟದ ಸಂಸ್ಕೃತಿಯು‌ ಅಂತ್ಯವಾಗಿದೆ. ಈಗ ಸಂಸದರಿಗೆ ಸಂಸತ್ ಭವನದಲ್ಲಿ ನೀಡುತ್ತಿದ್ದ ಸಬ್ಸಿಡಿ ಊಟಕ್ಕೂ ಫುಲ್‌ ಬ್ರೇಕ್ ಬಿದ್ದಿದೆ. ಇದರಿಂದ ಸರ್ಕಾರಕ್ಕೆ ಕೋಟಿ ಕೋಟಿ ಉಳಿತಾಯವಾಗಲಿದೆ.

ನಮ್ಮ ದೇಶದಲ್ಲಿ ವಿಐಪಿ ಸಂಸ್ಕೃತಿ ಜೋರಾಗಿಯೇ ಇದೆ. ಸಂಸದರು ನಮ್ಮ ದೇಶದ ವಿಐಪಿಗಳು, ಅವರಿಗೆ ಎಲ್ಲೆಡೆ ರಾಜ ಮರ್ಯಾದೆ. ಜನರಿಗೆ ತಿನ್ನೋಕೆ ಅನ್ನ ಇಲ್ಲದಿದ್ರೂ ಪರವಾಗಿಲ್ಲ, ಇವ್ರಿಗೆ ಸರ್ಕಾರದಿಂದ ಎಲ್ಲಾ ಉಚಿತ ಸೌಲಭ್ಯಗಳು ಸಿಕ್ಕೇ ಸಿಗುತ್ತೆ. ಉಚಿತ ಮನೆ, ಸಾರಿಗೆ ವ್ಯವಸ್ಥೆ, ವರ್ಷಕ್ಕೆ 36 ವಿಮಾನ ಟಿಕೆಟ್, ನೀರಿನ ಬಿಲ್, ಕರೆಂಟ್ ಬಿಲ್, ಹೀಗೆ ಎಲ್ಲವನ್ನೂ ಸರ್ಕಾರವೇ ಪಾವತಿ ಮಾಡುತ್ತೆ. ಆದ್ರೀಗ, ಸರ್ಕಾರ ನೀಡುವ ಒಂದೊಂದೆ ಸೌಲಭ್ಯಕ್ಕೆ ಕತ್ತರಿ ಬೀಳ್ತಿದೆ.

ಸರ್ಕಾರಕ್ಕೆ 17 ಕೋಟಿ ರೂಪಾಯಿ ಉಳಿತಾಯ! ದೆಹಲಿಯ ಸಂಸತ್ ಭವನದ ಕ್ಯಾಂಟೀನ್ ನಲ್ಲಿ ಸಂಸದರಿಗೆ ಸಬ್ಸಿಡಿ ದರದಲ್ಲಿ ಊಟ, ತಿಂಡಿ, ಕಾಫಿ ಸೌಲಭ್ಯ ಸಿಗುತ್ತೆ. ಕಾಫಿ ಟೀ 5 ರೂಪಾಯಿಗೆ, ವೆಜ್‌ ಕರಿ 7 ರೂಪಾಯಿ, ಚಿಕನ್ ಕರಿ 50 ರೂಪಾಯಿ, ಚಿಕನ್ ಬಿರಿಯಾನಿ 50 ರೂಪಾಯಿ, ಮಟನ್ ಕರಿ 40 ರೂಪಾಯಿ. ಹೀಗೆ ಕಮ್ಮಿಯಲ್ಲಿ ಸಂಸರಿಗೆ ಊಟ ಸಿಗುತ್ತಿತ್ತು.‌ ಈಗ ಸಂಸತ್ ಕ್ಯಾಂಟೀನ್ ಸಬ್ಸಿಡಿ ಊಟಕ್ಕೆ ಫುಲ್ ಬ್ರೇಕ್ ಬಿದ್ದಿದೆ.

ಇನ್ನೂ ಮುಂದೆ ಸಂಸತ್ ಕ್ಯಾಂಟೀನ್ ನಲ್ಲಿ ಸಂಸದರಿಗೆ ಸಬ್ಸಿಡಿ ದರದಲ್ಲಿ ಊಟ ಸಿಗಲ್ಲ. ಅಗ್ಗದ ದರದಲ್ಲಿ ಊಟ ನೀಡಿ, ಊಟದ ಸಬ್ಸಿಡಿ ಹಣವನ್ನು ಕೇಂದ್ರ ಸರ್ಕಾರವೇ ಪಾವತಿ ಮಾಡುತ್ತಿತ್ತು. ಸಂಸತ್ ಕ್ಯಾಂಟೀನ್ ಊಟದ ಸಬ್ಸಿಡಿಗಾಗಿ ವರ್ಷಕ್ಕೆ ಹದಿನೇಳು ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು‌. ಆದರೆ ಈಗ ಸಂಸತ್ ಕ್ಯಾಂಟೀನ್ ಸಬ್ಸಿಡಿ ಊಟಕ್ಕೆ ಲೋಕಸಭಾ ಸ್ಪೀಕರ್ ಓಂಬಿರ್ಲಾ ಬ್ರೇಕ್ ಹಾಕಿದ್ದಾರೆ.

ಸ್ಪೀಕರ್​ ಓಂ ಬಿರ್ಲಾ ಸಬ್ಸಿಡಿಯನ್ನು ತೆಗೆದು ಹಾಕುವ ಕುರಿತು ಸಲಹೆ ನೀಡಿದ್ದರು. ಬಳಿಕ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಂಸತ್ತಿನಲ್ಲಿ ಊಟದ ಮೇಲೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ತೆಗೆದುಹಾಕುವ ಪ್ರಸ್ತಾಪಕ್ಕೆ ಉಭಯ ಸದನ ಸಂಸದರು ಸರ್ವಾನುಮತದಿಂದ ಒಪ್ಪಿದ್ದಾರೆ.

ಇದರಿಂದಾಗಿ ಇನ್ನೂ ಮುಂದೆ ಸಂಸತ್ ಭವನದಲ್ಲಿ ಸಬ್ಸಿಡಿ ಊಟ ಸಿಗಲ್ಲ. ಪೂರ್ತಿ ಹಣವನ್ನ ನೀಡಿ ಉಪಹಾರ ಸೇವಿಸಬೇಕು. ಹೀಗಾಗಿ ಸರ್ಕಾರಕ್ಕೆ ಊಟದ ಸಬ್ಸಿಡಿಗಾಗಿ ನೀಡುತ್ತಿದ್ದ ಹದಿನೇಳು ಕೋಟಿ ರೂಪಾಯಿ ಉಳಿತಾಯ ಆಗಲಿದೆ. ಈ ಹಣವನ್ನು ಕೇಂದ್ರ ಸರ್ಕಾರ ಜನ ಕಲ್ಯಾಣ ಕಾರ್ಯಕ್ರಮಕ್ಕೆ ಬಳಕೆ ಮಾಡಬಹುದಾಗಿದೆ.

Published On - 9:52 am, Fri, 6 December 19

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?