ರಾಜ್ಯಪಾಲರ ಆಗಮನ ವೇಳೆ ವಿಧಾನಸಭೆ ಗೇಟ್ ಬಂದ್, ಪ್ರಜಾಪ್ರಭುತ್ವಕ್ಕೆ ಅವಮಾನ ಎಂದು ಆಕ್ರೋಶ

ದೆಹಲಿ: ಪಶ್ಚಿಮ ಬಂಗಾಳ ಸಿಎಂ‌ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲರ ನಡುವಿನ ಕಾದಾಟ ತಾರಕ್ಕೇರಿದೆ. ವಿಧಾನಸಭೆ ಪ್ರವೇಶಕ್ಕೆ ರಾಜ್ಯಪಾಲರಿಗೆ ಅವಕಾಶ ನಿರಾಕರಿಸಿರುವುದಕ್ಕೆ ರಾಜ್ಯಪಾಲರು ಕೆಂಡಕಾರಿದ್ದಾರೆ. ಇಡೀ ದೇಶದ ರಾಜಕಾರಣಿಗಳ ನಡೆ ಒಂದ್ಕಡೆಯಾದ್ರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯದ್ದೇ ಬೇರೆ ನಡೆ. ಆ ದಿಟ್ಟತನ. ಹಠಮಾರಿತನದಿಂದಲೇ ಸುದ್ದಿಯಾಗಿದ್ದೇ ಹೆಚ್ಚು. ಆದ್ರೀಗ ಅದೇ ಮಮತಾ ಬ್ಯಾನರ್ಜಿ ವಿರುದ್ಧ ಅದೇ ರಾಜ್ಯದ ರಾಜ್ಯಪಾಲರೇ ಕೆಂಡಾಮಂಡಲವಾಗಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆಗೆ ತಾವು ಆಗಮಿಸಿದಾಗ ಗೇಟ್ ಮುಚ್ಚಿರುವುದನ್ನು ಕಂಡು ರಾಜ್ಯಪಾಲ ಜಗದೀಶ್ ಧನ್ಕಾರ್ […]

ರಾಜ್ಯಪಾಲರ ಆಗಮನ ವೇಳೆ ವಿಧಾನಸಭೆ ಗೇಟ್ ಬಂದ್,  ಪ್ರಜಾಪ್ರಭುತ್ವಕ್ಕೆ ಅವಮಾನ ಎಂದು ಆಕ್ರೋಶ
Follow us
ಸಾಧು ಶ್ರೀನಾಥ್​
|

Updated on:Dec 06, 2019 | 12:28 PM

ದೆಹಲಿ: ಪಶ್ಚಿಮ ಬಂಗಾಳ ಸಿಎಂ‌ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲರ ನಡುವಿನ ಕಾದಾಟ ತಾರಕ್ಕೇರಿದೆ. ವಿಧಾನಸಭೆ ಪ್ರವೇಶಕ್ಕೆ ರಾಜ್ಯಪಾಲರಿಗೆ ಅವಕಾಶ ನಿರಾಕರಿಸಿರುವುದಕ್ಕೆ ರಾಜ್ಯಪಾಲರು ಕೆಂಡಕಾರಿದ್ದಾರೆ.

ಇಡೀ ದೇಶದ ರಾಜಕಾರಣಿಗಳ ನಡೆ ಒಂದ್ಕಡೆಯಾದ್ರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯದ್ದೇ ಬೇರೆ ನಡೆ. ಆ ದಿಟ್ಟತನ. ಹಠಮಾರಿತನದಿಂದಲೇ ಸುದ್ದಿಯಾಗಿದ್ದೇ ಹೆಚ್ಚು. ಆದ್ರೀಗ ಅದೇ ಮಮತಾ ಬ್ಯಾನರ್ಜಿ ವಿರುದ್ಧ ಅದೇ ರಾಜ್ಯದ ರಾಜ್ಯಪಾಲರೇ ಕೆಂಡಾಮಂಡಲವಾಗಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಗೆ ತಾವು ಆಗಮಿಸಿದಾಗ ಗೇಟ್ ಮುಚ್ಚಿರುವುದನ್ನು ಕಂಡು ರಾಜ್ಯಪಾಲ ಜಗದೀಶ್ ಧನ್ಕಾರ್ ಅವರು ಕೆಂಡಾಮಂಡಲವಾಗಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಅವಮಾನ: ನಿನ್ನೆ ವಿಧಾನಸಭೆಯ ಐತಿಹಾಸಿಕ ಕಟ್ಟಡವನ್ನು ನೋಡಬೇಕು, ಗ್ರಂಥಾಲಯಕ್ಕೆ ಭೇಟಿ ನೀಡಬೇಕು ಅಂತಾ ರಾಜ್ಯಪಾಲ ಜಗದೀಶ್ ದನ್ಕರ್ ಆಗಮಿಸಿದ್ದಾರೆ. ಆದ್ರೆ ಅವರು ಬಂದಾಗ ವಿಧಾನಸಭೆ ಬಾಗಿಲು ಮುಚ್ಚಿರುವುದು ರಾಜ್ಯಪಾಲರ ಆಕ್ರೋಶಕ್ಕೆ ಕಾರಣವಾಗಿದೆ. ವಿಧಾನಸಭೆ ಅಧಿವೇಶನ ನಡೆಯುವಾಗ ಮಾತ್ರವಲ್ಲದೆ ವರ್ಷಪೂರ್ತಿ ತೆರೆದಿರಬೇಕು.

ಆದರೆ ನಾನು ಬರುವುದು ಗೊತ್ತಿದ್ದರೂ ಬಂದ್ ಮಾಡಲಾಗಿದೆ. ಹೀಗೆ ಮಾಡುವುದ್ರಿಂದ ನನಗೆ ಅವಮಾನವಾಗುತ್ತಿಲ್ಲ. ಬದಲಿಗೆ ಪ್ರಜಾಪ್ರಭುತ್ವವನ್ನು ಅವಮಾನಿಸಲಾಗುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದ್ರೆ ಅಸಲಿಗೆ ಎರಡು ದಿನ ವಿಧಾನಸಭೆ ಮುಂದೂಡಲಾಗಿತ್ತು. ಬುಧವಾರ ಮತ್ತು ಗುರುವಾರ ವಿಧಾನಸಭೆ ಮುಂದೂಡಲಾಗಿದ್ದು. ವಿಧಾನಸಭೆ ಅಧಿವೇಶನ ಮುಂದೂಡಿಕೆ ಅಂದರೆ ಪಶ್ಚಿಮ ಬಂಗಾಳದ ವಿಧಾನಸಭೆಯನ್ನು ಮುಚ್ಚಲಾಗಿತ್ತು ಈ ಸಮಯದಲ್ಲಿ ವಿಧಾನಸಭೆ ವೀಕ್ಷಣೆಮಾಡಲು ಹೋದ ರಾಜ್ಯಪಾಲರಿಗೆ ಗೇಟ್ ಬಂದ್ ಮಾಡಲಾಗಿತ್ತು. ಇದೇ ವಿಚಾರವಾಗಿ ರಾಜ್ಯಪಾಲರು ಕೆಂಡಕಾರಿದ್ದಾರೆ.

ವಿಧಾನ ಸಭೆಯನ್ನು ಎರಡುದಿನಗಳ ಕಾಲ ಮದೂಡಿರುವುದಕ್ಕೆ ಕಾರಣ ನೀಡಿರುವ ಪಶ್ಚಿಮ ಬಂಗಾಳ ವಿಧಾನಸಭೆ ಸ್ಪೀಕರ್ ಬಿಮನ್ ಬ್ಯಾನರ್ಜಿ, ಸದನದಲ್ಲಿ ಕೆಲವು ಮಸೂದೆಗಳನ್ನು ಮಂಡಿಸಲು ಸಮಯ ನಿಗದಿಪಡಿಸಿದ್ದೇವೆ ಮತ್ತು ಅವುಗಳ ಮಂಡನೆಗೂ ಮುನ್ನ ಅವುಗಳನ್ನು ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಿದ್ದೇವೆ. ಮಸೂದೆಗಳು ಮುದ್ರಣಕ್ಕೂ ಕಳುಹಿಸಲಾಗಿತ್ತು. ಆದರೆ, ಅವರು ಅನುಮೋದನೆಗೆ ಅವುಗಳನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ಎರಡು ದಿನಗಳ ಮಟ್ಟಿಗೆ ವಿಧಾನಸಭೆಯನ್ನು ಮುಂದೂಡಿಕೆ ಮಾಡಲಾಯಿತು ಅಂತಾ ಹೇಳಿದ್ದಾರೆ.

ಆದ್ರೆ ಮೇಲ್ನೋಟಕ್ಕೆ ರಾಜ್ಯಪಾಲರು ಕೇಬಲ ವಿಧಾನಸಭೆ ಗೇಟ್ ಬಂದಾಗಿರುವ ವಿಚಾರಕ್ಕೆ‌ಸಿಟ್ಟಾಗಿಲ್ಲ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವಮಾನ ಮಾಡೋದೊಕ್ಕಾಗಿಯೇ ಈ ರೀತಿ ಮಾಡಿದ್ದಾರೆ ಎನ್ನುವ ರೀತಿಯಲ್ಲಿ ಆರೋಪ‌ ಮಾಡಿದ್ದಾರೆ.

Published On - 8:01 am, Fri, 6 December 19

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್