AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಬಹಳಷ್ಟು ಈರುಳ್ಳಿ, ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ-ನಿರ್ಮಲಾ ಸೀತಾರಾಮನ್

ದೆಹಲಿ: ರೇಟ್ ಇಳೀತಿಲ್ಲ. ಕೊಂಡೊಕೊಳ್ಳೋಕೆ ಆಗ್ತಿಲ್ಲ. ಈರುಳ್ಳಿ ರೇಟ್ ಸೆಂಚುರಿ ಬಾರಿಸ್ತಿದ್ದಂತೆ ಜನರು ತಲೆ ಗಿರಕಿ ಹೊಡೀತಿದೆ. ಗಲ್ಲಿ ಗಲ್ಲಿಯಲ್ಲೂ ಈರುಳ್ಳಿಯದ್ದೇ ಮಾತು. ಇದೀಗ ಲೋಕಸಭೆಲ್ಲಿ ಮಾರ್ಧನಿಸ್ತಿರೋ ಈರುಳ್ಳಿ ಬೆಲೆ ಏರಿಕೆ ಬಿಸಿ ದೊಡ್ಡ ಹೈಡ್ರಾಮಾವನ್ನೇ ಸೃಷ್ಟಿ ಮಾಡ್ತಿದೆ. ಈರುಳ್ಳಿ ಬೆಲೆ ಏರಿಕೆಗೆ ನಿರ್ಮಲಾ ಸೀತಾರಾಮನ್ ಶಾಕಿಂಗ್ ಹೇಳಿಕೆ..! ದೇಶಾದ್ಯಂತ ಈರುಳ್ಳಿ ರೇಟ್ ನೂರರ ಗಡಿ ಮುಟ್ಟಿರೋದು ಜನರ ಕಣ್ಣಲ್ಲಿ ನೀರು ತರಿಸ್ತಿದೆ. ಇದನ್ನೇ ಟಾರ್ಗೆಟ್ ಮಾಡಿರೋ ವಿಪಕ್ಷಗಳು ಲೋಕಸಭೆ ಕಲಾಪದಲ್ಲಿ ಮೋದಿ ಸರ್ಕಾರದ ಮೇಲೆ ಅಟ್ಯಾಕ್ […]

ನಾನು ಬಹಳಷ್ಟು ಈರುಳ್ಳಿ, ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ-ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಸಾಧು ಶ್ರೀನಾಥ್​
|

Updated on:Dec 06, 2019 | 6:58 AM

Share

ದೆಹಲಿ: ರೇಟ್ ಇಳೀತಿಲ್ಲ. ಕೊಂಡೊಕೊಳ್ಳೋಕೆ ಆಗ್ತಿಲ್ಲ. ಈರುಳ್ಳಿ ರೇಟ್ ಸೆಂಚುರಿ ಬಾರಿಸ್ತಿದ್ದಂತೆ ಜನರು ತಲೆ ಗಿರಕಿ ಹೊಡೀತಿದೆ. ಗಲ್ಲಿ ಗಲ್ಲಿಯಲ್ಲೂ ಈರುಳ್ಳಿಯದ್ದೇ ಮಾತು. ಇದೀಗ ಲೋಕಸಭೆಲ್ಲಿ ಮಾರ್ಧನಿಸ್ತಿರೋ ಈರುಳ್ಳಿ ಬೆಲೆ ಏರಿಕೆ ಬಿಸಿ ದೊಡ್ಡ ಹೈಡ್ರಾಮಾವನ್ನೇ ಸೃಷ್ಟಿ ಮಾಡ್ತಿದೆ.

ಈರುಳ್ಳಿ ಬೆಲೆ ಏರಿಕೆಗೆ ನಿರ್ಮಲಾ ಸೀತಾರಾಮನ್ ಶಾಕಿಂಗ್ ಹೇಳಿಕೆ..! ದೇಶಾದ್ಯಂತ ಈರುಳ್ಳಿ ರೇಟ್ ನೂರರ ಗಡಿ ಮುಟ್ಟಿರೋದು ಜನರ ಕಣ್ಣಲ್ಲಿ ನೀರು ತರಿಸ್ತಿದೆ. ಇದನ್ನೇ ಟಾರ್ಗೆಟ್ ಮಾಡಿರೋ ವಿಪಕ್ಷಗಳು ಲೋಕಸಭೆ ಕಲಾಪದಲ್ಲಿ ಮೋದಿ ಸರ್ಕಾರದ ಮೇಲೆ ಅಟ್ಯಾಕ್ ಮೇಲೆ ಅಟ್ಯಾಕ್ ಮಾಡ್ತಿವೆ. ಈರುಳ್ಳಿ ಬೆಲೆ ಏರಿಕೆ ಕುರಿತ ಚರ್ಚೆ ನಿನ್ನೆ ಲೋಕಸಭಾ ಕಲಾಪದಲ್ಲಿ ಕಾವೇರಿತ್ತು.

ಕಲಾಪದಲ್ಲಿ ಚರ್ಚೆ ವೇಳೆ ಎನ್​ಸಿಪಿ ಸಂಸದೆ ಸುಪ್ರಿಯಾ ಸುಲೆ ಪ್ರಶ್ನೆಗೆ ಉತ್ತರಿಸೋ ಬರದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಡವಟ್ಟು ಮಾಡ್ಕೊಂಡಿದ್ದಾರೆ. ಆ ಒಂದು ಹೇಳಿಕೆ ದೇಶದಾದ್ಯಂತ ನಗೆಪಾಟಲಿಗೆ ಕಾರಣವಾಗಿದೆ.

ನಾನು ಬಹಳಷ್ಟು ಈರುಳ್ಳಿ, ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ. ಈರುಳ್ಳಿ ಬೆಳ್ಳುಳ್ಳಿಯನ್ನು ತಿನ್ನದ ಕುಟುಂಬದಿಂದ ನಾನು ಬಂದಿದ್ದೇನೆ. ಹೀಗಾಗಿ ಈರುಳ್ಳಿ ಬೆಲೆ ಏರಿಕೆ ಕುರಿತು ನಾನು ಹೆಚ್ಚು ಚಿಂತಿಸಲ್ಲ ಅನ್ನೋ ಅರ್ಥದಲ್ಲಿ ಸೀತಾರಾಮನ್ ಹೇಳಿಕೆ ನೀಡಿದ್ದಾರೆ.

ಹಣಕಾಸು ಸಚಿವೆಯ ಈ ದಿಢೀರ್ ಹೇಳಿಕೆಗೆ ಶಾಕ್ ಆದ ಉಳಿದ ಸಂಸದರು ಕೆಲ ಕಾಲ ನಗೆಗಡಲಲ್ಲಿ ತೇಲಿದ್ರೆ, ವಿಪಕ್ಷಗಳ ಬಾಯಿಗೆ ಆಹಾರವಾದಂತಾಗಿದೆ. ಅಲ್ಲದೇ, ಮೋದಿ ಸರ್ಕಾರದ ಮೇಲೆ ಮುಗಿ ಬಿಳೋಕೆ ರಣಹದ್ದುಗಳಂತೆ ಕಾಯ್ತಿದ್ದ ವಿರೋಧಿಗಳಿಗೆ ರಣಬೇಟೆ ಸಿಕ್ಕಂತಾಗಿದೆ.

ಇತ್ತ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಅಶ್ವಿನಿ ಕುಮಾರ್ ಚೌಬೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ನಾನು ಸಸ್ಯಹಾರಿಯಾಗಿದ್ದು, ಈರುಳ್ಳಿ ಬೆಲೆ ಏರಿಕೆ ಬಗ್ಗೆ ನನಗೆ ಹೇಗೆ ತಿಳಿಯಬೇಕು ಅಂತಾ ಹೇಳಿದ್ದು, ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

Published On - 6:56 am, Fri, 6 December 19