ದೆಹಲಿ ಸೆಪ್ಟೆಂಬರ್ 21: ಲೋಕಸಭೆಯು (Lok sabha) ಮಹಿಳಾ ಮೀಸಲಾತಿ ಮಸೂದೆಯನ್ನು (women’s reservation bill) ಅಂಗೀಕರಿಸಿದ ನಂತರ ಬಿಜೆಪಿ ಸಂಸದ ಮನೋಜ್ ತಿವಾರಿ (Manoj Tiwari) ಅವರಿಗೆ ಬುಧವಾರ ರಾತ್ರಿ ಅವರ ಮನೆಯಲ್ಲಿ ಭವ್ಯ ಸ್ವಾಗತ ಸಿಕ್ಕಿದ. ತಿವಾರಿ ಪತ್ನಿ ಅಭಿನಂದನೆ ಸಲ್ಲಿಸಿ ಹಣೆಗೆ ತಿಲಕವಿಡುತ್ತಿರುವ ವಿಡಿಯೊ ವೈರಲ್ ಆಗಿದೆ. ಬಿಜೆಪಿ ಸಂಸದ ತಿವಾರಿ ಅವರೇ ‘ಕಮಾಲ್ ಹೋ ಗಯಾ ಹೈ’ ಎಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ. “ನೀವು ಮೋದಿಯವರ ಸೈನಿಕರು ಎಂದು ನನಗೆ ಹೆಮ್ಮೆ ಇದೆ” ಎಂದು ಮನೋಜ್ ತಿವಾರಿ ಅವರ ಪತ್ನಿ ಹೇಳಿದ್ದಾರೆ..ಮನೋಜ್ ತಿವಾರಿ ಮನೆಗೆ ಬಂದಾಗ ಅವರರ ಪತ್ನಿ ಅವರನ್ನು ಸ್ವಾಗತಿಸುತ್ತಿದ್ದಂತೆ ‘ಕ್ಯಾ ಹುವಾ’ ಎಂದು ಅಚ್ಚರಿಯಿಂದ ಕೇಳಿದ್ದು, ನೀವು ನೋಡ್ತಾ ಇದ್ರಾ ಎಂದು ಕೇಳುತ್ತಿರುವುದು ವಿಡಿಯೊದಲ್ಲಿದೆ.
ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆ ಬುಧವಾರ ಅಂಗೀಕರಿಸಿದೆ. ಇದು ಭಾರತದ ಸಂಸದೀಯ ಪಯಣದ ಸುವರ್ಣ ಕ್ಷಣ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಸಂಸತ್ ನ ವಿಶೇಷ ಅಧಿವೇಶನದಲ್ಲಿ ಸಂಸತ್ತಿನ ಪ್ರಕ್ರಿಯೆಗಳು ಹೊಸ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ ಲೋಕಸಭೆಯು ಅಂಗೀಕರಿಸಿದ ಮೊದಲ ಮಸೂದೆ ಇದಾಗಿದೆ.
ನೀವು ಮೋದಿಯವರ ಸೈನಿಕ ಎಂದು ಹೆಮ್ಮೆ ಇದೆ ಎಂದು ಹೇಳಿ ನನ್ನ ಪತ್ನಿ ನನಗೆ ಸರ್ಪೈಸ್ ಕೊಟ್ಟಿದ್ದಾಳೆ. ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಆದ ನಂತರ ನಾನು ಮನೆಗೆ ಬಂದರೆ ಈ ರೀತಿ ಸ್ವಾಗತ ಸಿಕ್ಕಿತು. ಇದಂತೂ ಅಚ್ಚರಿ ಆಗಿಬಿಡ್ತು ಎಂದು ಪ್ರಧಾನಿ ಮೋದಿ, ಕಾನೂನು ಸಚಿವ ಅರ್ಜುನ್ ಮೇಘವಾಲ್ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿ ಮನೋಜ್ ತಿವಾರಿ ಟ್ವೀಟ್ ಮಾಡಿದ್ದಾರೆ.
मुझे गर्व है की आप मोदी जी के सिपाही हैं.. ऐसा कहते हुए मेरी पत्नी ने तो मुझे सरप्राइज ही कर दिया.. #NariShaktiVandan बिल पास करने के बाद घर में घुसा तो स्वागत यूँ हुआ.. ये तो कमाल हो गया है #MahilaAarakshanBill धन्यवाद @narendramodi जी @arjunrammeghwal @AmitShah @surabhitiwari_ pic.twitter.com/MpUTFFwwt6
— Manoj Tiwari 🇮🇳 (@ManojTiwariMP) September 20, 2023
ಮಸೂದೆಯು ಸವರ್ಣೀಯ ಮಹಿಳೆಯರನ್ನು ಮಾತ್ರ ಉನ್ನತೀಕರಿಸುತ್ತದೆ ಎಂದು ವಾದಿಸಿದ AIMIM ಹೊರತುಪಡಿಸಿ, ಎಲ್ಲಾ ಪಕ್ಷದ ಸಂಸದರು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಖಚಿತಪಡಿಸುವ ಮಸೂದೆಯ ಪರವಾಗಿ ಮತ ಚಲಾಯಿಸಿದರು. ಆದರೆ, ಜನಗಣತಿ ಮತ್ತು ಡಿಲಿಮಿಟೇಶನ್ ನಂತರ ಇದು ಜಾರಿಗೆ ಬರಲಿದೆ. ಹೊಸ ಮಸೂದೆಯಲ್ಲಿ ಒಬಿಸಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂಬ ಬೇಡಿಕೆಯನ್ನು ಹಲವು ಪಕ್ಷಗಳು ಎತ್ತಿದ್ದವು.
ಇದನ್ನೂ ಓದಿ: G20 ಶೃಂಗಸಭೆ ವೇಳೆ ಐಷಾರಾಮಿ ಕೊಠಡಿಯಲ್ಲಿ ತಂಗಲು ನಿರಾಕರಿಸಿತ್ತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನಿಯೋಗ
ವಿರೋಧ ಪಕ್ಷದ ಇಂಡಿಯಾ ಮೈತ್ರಿಕೂಟ ಮಹಿಳಾ ಮೀಸಲಾತಿಗೆ ಬೆಂಬಲವನ್ನು ನೀಡಿದ್ದು, ಅದರ ಅನುಷ್ಠಾನದಲ್ಲಿನ ವಿಳಂಬವನ್ನು ವಿರೋಧಿಸಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ