ರೈತ ಹೋರಾಟ ಬೆಂಬಲಿಸಿ ಟ್ರಾಕ್ಟರ್​ನಲ್ಲಿ ಚಳಿಗಾಲದ ಅಧಿವೇಶನಕ್ಕೆ ತೆರಳಲು ಕಾಂಗ್ರೆಸ್ ನಿರ್ಧಾರ: ಬಿಜೆಪಿ ಟೀಕೆ

ಡಿಸೆಂಬರ್ 28ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಕಾಂಗ್ರೆಸ್ ಶಾಸಕರು ಟ್ರಾಕ್ಟರ್​ನಲ್ಲಿ ಬರುತ್ತೇವೆ ಎಂದು ಹೇಳಿಕೆ ನೀಡಿದ್ದರು. ಆ ಮೂಲಕ, ರೈತ ಚಳವಳಿಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದರು.

ರೈತ ಹೋರಾಟ ಬೆಂಬಲಿಸಿ ಟ್ರಾಕ್ಟರ್​ನಲ್ಲಿ ಚಳಿಗಾಲದ ಅಧಿವೇಶನಕ್ಕೆ ತೆರಳಲು ಕಾಂಗ್ರೆಸ್ ನಿರ್ಧಾರ: ಬಿಜೆಪಿ ಟೀಕೆ
ಪ್ರಾತಿನಿಧಿಕ ಚಿತ್ರ
Edited By:

Updated on: Apr 06, 2022 | 11:23 PM

ಭೋಪಾಲ್: ‘15 ತಿಂಗಳಿನಿಂದ ಒಬ್ಬ ರೈತರ ಹೊಲಕ್ಕೂ ಭೇಟಿ ನೀಡದ ಕಮಲ್​ನಾಥ್ ಟ್ರ್ಯಾಕ್ಟರ್​ನಲ್ಲಿ ಬರುತ್ತಾರಂತೆ. ಆಲೂಗಡ್ಡೆ ನೆಲದೊಳಗೆ ಬೆಳೆಯುತ್ತೋ? ಮೇಲೆ ಬೆಳೆಯುತ್ತೋ ತಿಳಿಯದ ರಾಹುಲ್ ಗಾಂಧಿ ರೈತರನ್ನು ಬೆಂಬಲಿಸಿ ಟ್ರಾಕ್ಟರ್ ಮೂಲಕ ಹೋರಾಟ ನಡೆಸುತ್ತಾರೆ’ ಎಂದು ಮಧ್ಯಪ್ರದೇಶದ ಬಿಜೆಪಿ ನಾಯಕರೂ ಆಗಿರುವ ಸಂಸದ ನರೋತ್ತಮ್ ಮಿಶ್ರಾ ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದಾರೆ.

ಡಿ.28ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಕಾಂಗ್ರೆಸ್ ಶಾಸಕರು ಟ್ರ್ಯಾಕ್ಟರ್​ನಲ್ಲಿ ಬರುತ್ತೇವೆ ಎಂದು ಹೇಳಿಕೆ ನೀಡಿದ್ದರು. ಆ ಮೂಲಕ, ರೈತ ಚಳವಳಿಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದರು. ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಕಮಲ್​ನಾಥ್ ಕೂಡ ಈ ಬಗ್ಗೆ ಒಪ್ಪಿಗೆ ಸೂಚಿಸಿ, ಪಕ್ಷದ ಸದಸ್ಯರೂ ಟ್ರಾಕ್ಟರ್ ಚಳವಳಿ ನಡೆಸುವಂತೆ ಕೇಳಿಕೊಂಡಿದ್ದರು.

ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಬಿಜೆಪಿ ನಾಯಕ ನರೋತ್ತಮ್ ಮಿಶ್ರಾ ಕಾಂಗ್ರೆಸ್ ನಿರ್ಧಾರವನ್ನು ಲೇವಡಿ ಮಾಡಿದ್ದಾರೆ. ರೈತ ಕಾಯ್ದೆಗಳಲ್ಲಿ ಏನು ದೋಷವಿದೆ ಎಂದು ತಿಳಿಯುತ್ತಿಲ್ಲ. ಕಾಂಗ್ರೆಸ್ ಸಹಿತ ಇತರ ‘ತುಕ್ಡೆ ತುಕ್ಡೆ ಗ್ಯಾಂಗ್’ ರೈತರ ಹಾದಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈಗಾಗಲೇ ಸೋತು ಸುಣ್ಣವಾಗಿರುವ ಕಾಂಗ್ರೆಸ್ ರೈತಸ್ನೇಹಿ ಎಂದು ತೋರಿಕೊಳ್ಳುತ್ತಿದೆ ಎಂದು ಬಿಜೆಪಿ ಶಾಸಕ ಓಂ ಪ್ರಕಾಶ್ ಸಖ್ಲೇಚಾ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿದ್ದಾರೆ.

ರೈತ ದಿನದ ಉಡುಗೊರೆಯಾಗಿ ನೂತನ ಕೃಷಿ ಕಾಯ್ದೆ ಹಿಂಪಡೆಯಿರಿ: ಕೇಂದ್ರ ಸರ್ಕಾರಕ್ಕೆ ರೈತರ ಮನವಿ

Published On - 3:00 pm, Wed, 23 December 20