ಛತ್ ಪೂಜೆಗೂ ಮುನ್ನ ಯಮುನಾ ನದಿಗೆ (Yamuna river) ರಾಸಾಯನಿಕ ಸಿಂಪಡಿಸುತ್ತಿದ್ದ ದೆಹಲಿ ಜಲ ಮಂಡಳಿ (DJB) ಅಧಿಕಾರಿಗಳೊಂದಿಗೆ ಬಿಜೆಪಿ ಸಂಸದ ಪರ್ವೇಶ್ ವರ್ಮಾ (Parvesh Verma) ವಾಗ್ವಾದ ನಡೆಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ವಿಡಿಯೊದಲ್ಲಿಪ ಶ್ಚಿಮ ದೆಹಲಿಯ ಸಂಸದರು ಜಲ ಮಂಡಳಿಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದು, ಹೋಗಿ ನದಿಯಲ್ಲಿ ಮುಳುಗಿ ಅಂದಿದ್ದಾರೆ. ನದಿಯನ್ನು ಸ್ವಚ್ಛಗೊಳಿಸಲು ಅಧಿಕಾರಿಗಳು ರಾಸಾಯನಿಕಗಳನ್ನು ಸಿಂಪಡಿಸುತ್ತಿದ್ದರು. ಯಮುನಾ ಘಾಟ್ ಬಳಿಯಿರುವ ರಾಸಾಯನಿಕಗಳ ಬ್ಯಾರೆಲ್‌ಗಳತ್ತ ಬೊಟ್ಟು ಮಾಡಿ ಬಿಜೆಪಿ ನಾಯಕ ವರ್ಮಾ,ಎಂಟು ವರ್ಷಗಳ ನಂತರ, ಅದು (ರಾಸಾಯನಿಕ) ಅನುಮೋದನೆ ಪಡೆದಿರುವುದು ನಿಮಗೆ ಈಗ ನೆನಪಿದೆಯೇ? ಯಹಾನ್ ಲೋಗೋನ್ ಕೋ ಮಾರ್ ರಹೇ ಹೋ ತುಮ್, ಆಟ್ ಸಾಲ್ ಮೇ ತುಮ್ ಇಸ್ಕೋ ಸಾಫ್ ನಹೀಂ ಕರ್ ಪಾಯೆ (ನೀವು ಇಲ್ಲಿ ಜನರನ್ನು ಕೊಲ್ಲುತ್ತಿದ್ದೀರಿ, ಎಂಟು ವರ್ಷಗಳಿಂದ ನದಿಯನ್ನು ಸ್ವಚ್ಛಗೊಳಿಸಲು ನಿಮಗೆ ಸಾಧ್ಯವಾಗಲಿಲ್ಲವೇ) ಎಂದು ಕೂಗಾಡುತ್ತಿರುವುದು ವಿಡಿಯೊದಲ್ಲಿದೆ.
ಪರ್ವೇಶ್ ವರ್ಮಾ ಅವರು ಅಧಿಕಾರಿಗಳಲ್ಲಿ “ಪೆಹ್ಲೆ ತು ಇಸ್ಮೇ ದುಬ್ಕಿ ಲಗಾ (ಮೊದಲು ನೀವು ಇದರಲ್ಲಿ ಮುಳುಗೆದ್ದು ಬನ್ನಿ )” ಎಂದು ಹೇಳುವುದನ್ನು ಕೇಳಬಹುದು.
On visiting Chhath ghat near Yamuna today,we found containers with poisonous chemicals there.This chemical will be put into river.Asked the official present there who'll be responsible for harm to people: BJP MP Parvesh Verma, after his heated argument with a DJB official pic.twitter.com/TEeFC2tCur
— ANI (@ANI) October 28, 2022
ಜಲ ಮಂಡಳಿಯ ಅಧಿಕಾರಿಯು ರಾಸಾಯನಿಕವನ್ನು US FDA ಅನುಮೋದಿಸಿದೆ. ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ಸಹ ಅನುಮೋದಿಸಿದೆ ಎಂದು ಹೇಳಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದರು,ಈ ರಾಸಾಯನಿಕವನ್ನು ನಿನ್ನ ತಲೆ ಮೇಲೆ ಸುರಿಯಲಾ? ನೀನು ಇಲ್ಲಿ ಕೆಮಿಕಲ್ ಹಾಕುತ್ತಿದ್ದಿ. ಇದೇ ನೀರಲ್ಲಿ ಜನರು ಮುಳುಗೇಳುತ್ತಾರೆ. ಇದನ್ನು ನಿನ್ನ ತಲೆ ಮೇಲೆ ಸುರಿದು ಬಿಡಲಾ? ನಾಚಿಕೆ ಆಗಲ್ವಾ ನಿನಗೆ? ಇಲ್ಲಿ ಜನರು ಮುಳುಗೇಳಲು ಬರುತ್ತಾರೆ. ನೀನು ಮೊದಲು ಅದನ್ನು ಮಾಡಿ ತೋರಿಸು. ನಿನಗೆ ಎಂಟು ವರ್ಷಗಳಲ್ಲಿ ಬುದ್ಧಿ ಬಂದಿಲ್ವಾ, ನಾಳೆ ಇಲ್ಲಿ ಛತ್ ಪೂಜೆ ಮಾಡುತ್ತಾರೆ. ಆದರೆ ನೀನಿಲ್ಲಿ ಮಾಡುತ್ತಿರುವುದೇನನ್ನು, ಕೆಟ್ಟ ಮನುಷ್ಯ ಎಂದು ಪರ್ವೇಶ್ ವರ್ಮಾ ಬೈದಿದ್ದಾರೆ.
सांसद है या गली का सड़क छाप गुंडा? pic.twitter.com/om0bqZJBwu
— Siddharth (@ethicalsid) October 28, 2022
ಅಧಿಕಾರಿಗಳು ಪ್ರತಿ ವಾರಾಂತ್ಯದಲ್ಲಿ ನದಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಾರೆ ಎಂಬ ವಾದ ಕೇಳಿಬರುತ್ತಿದೆ.
ಇಂಡಿಯಾ ಟುಡೇ ಜೊತೆ ಮಾತನಾಡಿದ ಬಿಜೆಪಿ ನಾಯಕ ಪರ್ವೇಶ್ ವರ್ಮಾ, ದೆಹಲಿ ಮುಖ್ಯಮಂತ್ರಿ ಮತ್ತು ಸಚಿವರು ಮಾತನಾಡಲು ಸಿದ್ಧರಿಲ್ಲದಿದ್ದರೆ ನಾವು ಅಧಿಕಾರಿಗಳೊಂದಿಗೆ ಮಾತನಾಡಬೇಕಾಗುತ್ತದೆ. ಅಧಿಕಾರಿಗಳು ಸಹ ಕೇಳದಿದ್ದರೆ, ಸಹಜವಾಗಿ ನೀವು ಕೋಪಗೊಳ್ಳುತ್ತೀರಿ. ಅವರು ದೆಹಲಿ ನಿವಾಸಿಗಳಿಗೆ ವಿಷಪೂರಿತ ನೀರನ್ನು ನೀಡುತ್ತಿದ್ದರೆ, ನಾನು ಅಧಿಕಾರಿಗಳೊಂದಿಗೆ ಅಸಭ್ಯವಾಗಿ ಮಾತನಾಡುತ್ತೇನೆ. ನಾನು ಇದನ್ನು ನನಗಾಗಿ ಮಾಡುತ್ತಿಲ್ಲ, ದೆಹಲಿ ನಿವಾಸಿಗಳಿಗಾಗಿ ಮಾಡುತ್ತಿದ್ದೇನೆ ಎಂದಿದ್ದಾರೆ.