Fact Check ಮನಮೋಹನ್ ಸಿಂಗ್​​ನ್ನು ಶ್ಲಾಘಿಸಿದ ರಿಷಿ ಸುನಕ್; ದೈನಿಕ್​​ ಭಾಸ್ಕರ್​​ ಲೋಗೊ ಇರುವ ವೈರಲ್​​ ಗ್ರಾಫಿಕ್​​ ಫೇಕ್

ಭಾರತಕ್ಕೆ ಸರಿಯಾದ ನಿರ್ದೇಶನ, ಸ್ಥಿತಿಯನ್ನು ನೀಡಲು ಮತ್ತು ದುರ್ಬಲ ಆರ್ಥಿಕತೆಯನ್ನು ಸರಿಪಡಿಸಲು ಮನಮೋಹನ್ ಸಿಂಗ್ ಅವರಂತಹ ಪ್ರಧಾನಿ ಬೇಕು ಎಂದು ರಿಷಿ ಸುನಕ್ ಹೇಳಿಕೆ ಇರುವ ಗ್ರಾಫಿಕ್ ಫೇಕ್

Fact Check ಮನಮೋಹನ್ ಸಿಂಗ್​​ನ್ನು ಶ್ಲಾಘಿಸಿದ ರಿಷಿ ಸುನಕ್; ದೈನಿಕ್​​ ಭಾಸ್ಕರ್​​ ಲೋಗೊ ಇರುವ ವೈರಲ್​​ ಗ್ರಾಫಿಕ್​​ ಫೇಕ್
ವೈರಲ್ ಆಗಿರುವ ಫೇಕ್ ಗ್ರಾಫಿಕ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 28, 2022 | 6:39 PM

ಭಾರತದ  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಮತ್ತು ಭಾರತದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಅವರ ಸಾಮರ್ಥ್ಯವನ್ನು ಯುನೈಟೆಡ್ ಕಿಂಗ್‌ಡಂನ ಪ್ರಧಾನಿ ರಿಷಿ ಸುನಕ್ (Rishi Sunak) ಶ್ಲಾಘಿಸಿದ್ದಾರೆ ಎಂದು ಹೇಳುವ ದೈನಿಕ ದೈನಿಕ್ ಭಾಸ್ಕರ್‌ನ ಗ್ರಾಫಿಕ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಗ್ರಾಫಿಕ್ ದೈನಿಕ್ ಭಾಸ್ಕರ್ ಪತ್ರಿಕೆಯ ಲೋಗೋ, ರಿಷಿ ಸುನಕ್ ಮತ್ತು ಮನಮೋಹನ್ ಸಿಂಗ್ ಅವರ ಚಿತ್ರಗಳನ್ನು ಒಳಗೊಂಡಿದೆ. ಆದರೆ ಇದು ಫೇಕ್ ಎಂದು ಬೂಮ್ ಲೈವ್ ವರದಿ ಮಾಡಿದೆ. ಬೂಮ್ ದೈನಿಕ್ ಭಾಸ್ಕರ್ ಕಚೇರಿಯನ್ನೂ ಸಂಪರ್ಕಿಸಿದ್ದು, ಈ ಗ್ರಾಫಿಕ್ ನಕಲಿ ಎಂದು ಖಚಿತ ಪಡಿಸಿದೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಈ ವರ್ಷ ಯುಕೆಯ ಮೂರನೇ ಪ್ರಧಾನ ಮಂತ್ರಿಯಾಗಿ ರಿಷಿ ಸುನಕ್ ಇತ್ತೀಚೆಗೆ ಆಯ್ಕೆಯಾದರು. ಈ ಹಿಂದೆ ಬೋರಿಸ್ ಜಾನ್ಸನ್ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಆಗಿ ಸೇವೆ ಸಲ್ಲಿಸಿದ ಸುನಕ್, ಬ್ರಿಟನ್‌ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಪ್ರತಿಜ್ಞೆ ಮಾಡಿದರು. ಈ ಹಿನ್ನಲೆಯಲ್ಲಿ ವೈರಲ್ ಆಗಿರುವ ಗ್ರಾಫಿಕ್ ಅನ್ನು ಹರಿಬಿಡಲಾಗುತ್ತಿದೆ. ಗ್ರಾಫಿಕ್‌ನಲ್ಲಿ “ಭಾರತಕ್ಕೆ ಸರಿಯಾದ ನಿರ್ದೇಶನ, ಸ್ಥಿತಿಯನ್ನು ನೀಡಲು ಮತ್ತು ದುರ್ಬಲ ಆರ್ಥಿಕತೆಯನ್ನು ಸರಿಪಡಿಸಲು ಮನಮೋಹನ್ ಸಿಂಗ್ ಅವರಂತಹ ಪ್ರಧಾನಿ ಬೇಕು-ರಿಷಿ ಸುನಕ್ ಎಂದು ಹಿಂದಿಯಲ್ಲಿ ಬರೆದಿದೆ. (भारत को सही दिशा और दशा देने. कमजोर गिरती अर्थव्यवस्था को सुधारने के लिए मनमोहन सिंह जैसे प्रधानमंत्री की आवश्यकता है -ऋषि सुनक)

ಫ್ಯಾಕ್ಟ್ ಚೆಕ್ ಬೂಮ್ ಲೈವ್ ಹಿಂದಿಯಲ್ಲಿಯೇ ಸಂಬಂಧಿತ ಕೀವರ್ಡ್ ಹುಡುಕಾಟ ನಡೆಸಿತು. ಆದರೆ ದೈನಿಕ್ ಭಾಸ್ಕರ್​​ನಲ್ಲಿ ಅಂತಹ ಯಾವುದೇ ವರದಿಗಳು ಸಿಕ್ಕಿಲ್ಲ. ಮನಮೋಹನ್ ಸಿಂಗ್ ಬಗ್ಗೆ ಸುನಕ್ ಮಾತನಾಡಿದ್ದಾರೆ ಎಂದು ಹೇಳುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿ ಸಿಕ್ಕಿಲ್ಲ. ಟ್ವಿಟರ್​​ನಲ್ಲಿ ಕೀವರ್ಡ್ ಹುಡುಕಾಡಿದಾಗ ದೈನಿಕ್ ಭಾಸ್ಕರ್  ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಪ್ರಕಟವಾದ ಮೂಲ ಗ್ರಾಫಿಕ್‌ ಸಿಕ್ಕಿದೆ. ಅದರಲ್ಲಿ ರಿಷಿ ಸುನಕ್ ಮತ್ತು ಮನಮೋಹನ್ ಸಿಂಗ್ ಅವರ ಚಿತ್ರಗಳಿವೆ.

ಮೂಲ ಗ್ರಾಫಿಕ್‌ನಲ್ಲಿ ಫಾಂಟ್ ಶೈಲಿಯು ವಿಭಿನ್ನವಾಗಿದೆ. ಇದು ಸುನಕ್ ಅವರ ಹೇಳಿಕೆಯನ್ನು ಹೊಂದಿಲ್ಲ. ಮೂಲ ದೈನಿಕ್ ಭಾಸ್ಕರ್ ಗ್ರಾಫಿಕ್ ವರದಿಗಳು ಭಾರತದಲ್ಲಿ ಅಲ್ಪಸಂಖ್ಯಾತರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿ ಎಂದು ಪಿ ಚಿದಂಬರಂ ಮತ್ತು ಶಶಿ ತರೂರ್ ಹೇಳಿಕೆಗೆ ಬಿಜೆಪಿ ಮನಮೋಹನ್ ಸಿಂಗ್ ಅವರನ್ನು ಮರೆತಿದ್ದೀರಾ ಎಂದು ಕೇಳಿದ ಬರಹ ಈ ಚಿತ್ರದೊಂದಿಗೆ ಇದೆ. ಗ್ರಾಫಿಕ್ ಕುರಿತು ಹೆಚ್ಚಿನ ದೃಢೀಕರಣಕ್ಕಾಗಿ ದೈನಿಕ್ ಭಾಸ್ಕರ್ ಡಿಜಿಟಲ್‌ನ ರಾಷ್ಟ್ರೀಯ ಸಂಪಾದಕ ಪ್ರಸೂನ್ ಮಿಶ್ರಾ ಅವರನ್ನು ಬೂಮ್ ಸಂಪರ್ಕಿಸಿದೆ. BOOM ಗೆ ಇಮೇಲ್ ಪ್ರತಿಕ್ರಿಯೆ ನೀಡಿದ ಮಿಶ್ರಾ ಗ್ರಾಫಿಕ್ ದೈನಿಕ್ ಭಾಸ್ಕರ್ ದ್ದು ಅಲ್ಲ. ಡಿಜಿಟಲ್ ವಿಂಗ್ ಅದನ್ನು ಬಳಸಿಲ್ಲ” ಎಂದು ಖಚಿತಪಡಿಸಿದ್ದಾರೆ. ಈ ವೈರಲ್ ಗ್ರಾಫಿಕ್ ನಕಲಿ ಎಂದು ಸ್ಪಷ್ಟಪಡಿಸುವ ಹೇಳಿಕೆಯನ್ನು ದೈನಿಕ್ ಭಾಸ್ಕರ್ ಬಿಡುಗಡೆ ಮಾಡಿದೆ.

Published On - 6:35 pm, Fri, 28 October 22

ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ