AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಮಿಕಲ್ ತಲೆ ಮೇಲೆ ಸುರಿಬೇಕಾ? ಯಮುನಾ ನದಿಗೆ ರಾಸಾಯನಿಕ ಸಿಂಪಡಿಸಿದ ಅಧಿಕಾರಿಗಳ ವಿರುದ್ಧ ಗುಡುಗಿದ ಬಿಜೆಪಿ ಸಂಸದ

ಈ ವಿಡಿಯೊದಲ್ಲಿಪ ಶ್ಚಿಮ ದೆಹಲಿಯ ಸಂಸದರು ಜಲ ಮಂಡಳಿಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದು, ಹೋಗಿ ನದಿಯಲ್ಲಿ ಮುಳುಗಿ ಅಂದಿದ್ದಾರೆ. ನದಿಯನ್ನು ಸ್ವಚ್ಛಗೊಳಿಸಲು ಅಧಿಕಾರಿಗಳು ರಾಸಾಯನಿಕಗಳನ್ನು ಸಿಂಪಡಿಸುತ್ತಿದ್ದರು.

ಕೆಮಿಕಲ್ ತಲೆ ಮೇಲೆ ಸುರಿಬೇಕಾ? ಯಮುನಾ ನದಿಗೆ ರಾಸಾಯನಿಕ ಸಿಂಪಡಿಸಿದ ಅಧಿಕಾರಿಗಳ ವಿರುದ್ಧ ಗುಡುಗಿದ ಬಿಜೆಪಿ ಸಂಸದ
ಪರ್ವೇಶ್ ವರ್ಮಾ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Oct 28, 2022 | 8:15 PM

Share

ಛತ್ ಪೂಜೆಗೂ ಮುನ್ನ ಯಮುನಾ ನದಿಗೆ  (Yamuna river) ರಾಸಾಯನಿಕ ಸಿಂಪಡಿಸುತ್ತಿದ್ದ ದೆಹಲಿ ಜಲ ಮಂಡಳಿ (DJB) ಅಧಿಕಾರಿಗಳೊಂದಿಗೆ ಬಿಜೆಪಿ ಸಂಸದ ಪರ್ವೇಶ್ ವರ್ಮಾ (Parvesh Verma) ವಾಗ್ವಾದ ನಡೆಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ವಿಡಿಯೊದಲ್ಲಿಪ ಶ್ಚಿಮ ದೆಹಲಿಯ ಸಂಸದರು ಜಲ ಮಂಡಳಿಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದು, ಹೋಗಿ ನದಿಯಲ್ಲಿ ಮುಳುಗಿ ಅಂದಿದ್ದಾರೆ. ನದಿಯನ್ನು ಸ್ವಚ್ಛಗೊಳಿಸಲು ಅಧಿಕಾರಿಗಳು ರಾಸಾಯನಿಕಗಳನ್ನು ಸಿಂಪಡಿಸುತ್ತಿದ್ದರು. ಯಮುನಾ ಘಾಟ್ ಬಳಿಯಿರುವ ರಾಸಾಯನಿಕಗಳ ಬ್ಯಾರೆಲ್‌ಗಳತ್ತ ಬೊಟ್ಟು ಮಾಡಿ ಬಿಜೆಪಿ ನಾಯಕ ವರ್ಮಾ,ಎಂಟು ವರ್ಷಗಳ ನಂತರ, ಅದು (ರಾಸಾಯನಿಕ) ಅನುಮೋದನೆ ಪಡೆದಿರುವುದು ನಿಮಗೆ ಈಗ ನೆನಪಿದೆಯೇ? ಯಹಾನ್ ಲೋಗೋನ್ ಕೋ ಮಾರ್ ರಹೇ ಹೋ ತುಮ್, ಆಟ್ ಸಾಲ್ ಮೇ ತುಮ್ ಇಸ್ಕೋ ಸಾಫ್ ನಹೀಂ ಕರ್ ಪಾಯೆ (ನೀವು ಇಲ್ಲಿ ಜನರನ್ನು ಕೊಲ್ಲುತ್ತಿದ್ದೀರಿ, ಎಂಟು ವರ್ಷಗಳಿಂದ ನದಿಯನ್ನು ಸ್ವಚ್ಛಗೊಳಿಸಲು ನಿಮಗೆ ಸಾಧ್ಯವಾಗಲಿಲ್ಲವೇ) ಎಂದು ಕೂಗಾಡುತ್ತಿರುವುದು ವಿಡಿಯೊದಲ್ಲಿದೆ.

ಪರ್ವೇಶ್ ವರ್ಮಾ ಅವರು ಅಧಿಕಾರಿಗಳಲ್ಲಿ “ಪೆಹ್ಲೆ ತು ಇಸ್ಮೇ ದುಬ್ಕಿ ಲಗಾ (ಮೊದಲು ನೀವು ಇದರಲ್ಲಿ ಮುಳುಗೆದ್ದು ಬನ್ನಿ )” ಎಂದು ಹೇಳುವುದನ್ನು ಕೇಳಬಹುದು.

ಜಲ ಮಂಡಳಿಯ ಅಧಿಕಾರಿಯು ರಾಸಾಯನಿಕವನ್ನು US FDA ಅನುಮೋದಿಸಿದೆ. ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ಸಹ ಅನುಮೋದಿಸಿದೆ ಎಂದು ಹೇಳಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದರು,ಈ ರಾಸಾಯನಿಕವನ್ನು ನಿನ್ನ ತಲೆ ಮೇಲೆ ಸುರಿಯಲಾ? ನೀನು ಇಲ್ಲಿ ಕೆಮಿಕಲ್ ಹಾಕುತ್ತಿದ್ದಿ. ಇದೇ ನೀರಲ್ಲಿ ಜನರು ಮುಳುಗೇಳುತ್ತಾರೆ. ಇದನ್ನು ನಿನ್ನ ತಲೆ ಮೇಲೆ ಸುರಿದು ಬಿಡಲಾ? ನಾಚಿಕೆ ಆಗಲ್ವಾ ನಿನಗೆ? ಇಲ್ಲಿ ಜನರು ಮುಳುಗೇಳಲು ಬರುತ್ತಾರೆ. ನೀನು ಮೊದಲು ಅದನ್ನು ಮಾಡಿ ತೋರಿಸು. ನಿನಗೆ ಎಂಟು ವರ್ಷಗಳಲ್ಲಿ ಬುದ್ಧಿ ಬಂದಿಲ್ವಾ, ನಾಳೆ ಇಲ್ಲಿ ಛತ್ ಪೂಜೆ ಮಾಡುತ್ತಾರೆ. ಆದರೆ ನೀನಿಲ್ಲಿ ಮಾಡುತ್ತಿರುವುದೇನನ್ನು, ಕೆಟ್ಟ ಮನುಷ್ಯ ಎಂದು ಪರ್ವೇಶ್ ವರ್ಮಾ ಬೈದಿದ್ದಾರೆ.

ಅಧಿಕಾರಿಗಳು ಪ್ರತಿ ವಾರಾಂತ್ಯದಲ್ಲಿ ನದಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಾರೆ ಎಂಬ ವಾದ ಕೇಳಿಬರುತ್ತಿದೆ.

ಇಂಡಿಯಾ ಟುಡೇ ಜೊತೆ ಮಾತನಾಡಿದ ಬಿಜೆಪಿ ನಾಯಕ ಪರ್ವೇಶ್ ವರ್ಮಾ, ದೆಹಲಿ ಮುಖ್ಯಮಂತ್ರಿ ಮತ್ತು ಸಚಿವರು ಮಾತನಾಡಲು ಸಿದ್ಧರಿಲ್ಲದಿದ್ದರೆ ನಾವು ಅಧಿಕಾರಿಗಳೊಂದಿಗೆ ಮಾತನಾಡಬೇಕಾಗುತ್ತದೆ. ಅಧಿಕಾರಿಗಳು ಸಹ ಕೇಳದಿದ್ದರೆ, ಸಹಜವಾಗಿ ನೀವು ಕೋಪಗೊಳ್ಳುತ್ತೀರಿ. ಅವರು ದೆಹಲಿ ನಿವಾಸಿಗಳಿಗೆ ವಿಷಪೂರಿತ ನೀರನ್ನು ನೀಡುತ್ತಿದ್ದರೆ, ನಾನು ಅಧಿಕಾರಿಗಳೊಂದಿಗೆ ಅಸಭ್ಯವಾಗಿ ಮಾತನಾಡುತ್ತೇನೆ. ನಾನು ಇದನ್ನು ನನಗಾಗಿ ಮಾಡುತ್ತಿಲ್ಲ, ದೆಹಲಿ ನಿವಾಸಿಗಳಿಗಾಗಿ ಮಾಡುತ್ತಿದ್ದೇನೆ ಎಂದಿದ್ದಾರೆ.

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್