ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ 8 ವರ್ಷದ ಮೊಮ್ಮಗಳು ಪಟಾಕಿಯ ಬೆಂಕಿ ತಗುಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.
ಟೆರೇಸ್‌ನಲ್ಲಿ ಆಟವಾಡುವಾಗ ಬಟ್ಟೆಗೆ ಬೆಂಕಿ ತಗುಲಿತ್ತು..
ರೀಟಾ ಬಹುಗುಣ ಜೋಶಿ, ಪ್ರಯಾಗ್‌ರಾಜ್ ಕ್ಷೇತ್ರದ ಸಂಸದೆಯಾಗಿದ್ದು, ರೀಟಾ ಬಹುಗುಣ ಅವರ ಮಗ ಮಯಾಂಕ್ ಜೋಶಿಯವರ ಮಗಳು ಈ ಅವಘಡದಲ್ಲಿ ಮೃತಪಟ್ಟಿದ್ದಾಳೆ. ರೀಟಾ ಬಹುಗುಣ ಅವರ ಮೊಮ್ಮಗಳು ಮನೆಯ ಟೆರೇಸ್‌ನಲ್ಲಿ ಆಟವಾಡುವಾಗ ಬಟ್ಟೆಗೆ ಬೆಂಕಿ ತಗುಲಿತ್ತು. ಬೆಂಕಿ ತಗುಲಿದ ಕೂಡಲೇ ಬಾಲಕಿ ಕಿರುಚಾಡಿದ್ದಾಳೆ. ಆದರೆ ಪಟಾಕಿ ಸದ್ದಿನಲ್ಲಿ ಬಾಲಕಿಯ ಕಿರುಚಾಟ ಯಾರಿಗೂ ಕೇಳಿಸಿರಲಿಲ್ಲ.
ಹೀಗಾಗಿ ಈ ಬೆಂಕಿ ಅವಘಡದಲ್ಲಿ ಬಾಲಕಿಗೆ ಶೇಕಡಾ 60 ರಷ್ಟು ಸುಟ್ಟಗಾಯಗಳಾಗಿದ್ದವು. ಕೂಡಲೇ ಬಾಲಕಿಯನ್ನು ಏರ್ ಆ್ಯಂಬುಲೆನ್ಸ್‌ನಲ್ಲಿ ದೆಹಲಿಯ ಏಮ್ಸ್‌ಗೆ ಶಿಫ್ಟ್ ಮಾಡಿದ್ದಾರೆ. ಆದರೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ.