ಬಿಜೆಪಿ ಸಂಸದ ವರುಣ್​ ಗಾಂಧಿಗೆ ಕೊವಿಡ್ 19 ಸೋಂಕು; ಗಂಭೀರ ಸ್ವರೂಪದ ಲಕ್ಷಣಗಳಿವೆ ಎಂದು ಟ್ವೀಟ್​

| Updated By: Lakshmi Hegde

Updated on: Jan 09, 2022 | 2:05 PM

ದೇಶದ 5 ರಾಜ್ಯಗಳಾದ ಗೋವಾ, ಉತ್ತರಪ್ರದೇಶ, ಉತ್ತರಾಖಂಡ್​, ಮಣಿಪುರ, ಪಂಜಾಬ್​ಗಳಲ್ಲಿ ಮುಂದಿನ ತಿಂಗಳಿಂದ ವಿಧಾನಸಭೆ ಚುನಾವಣೆ ನಡೆಯಲಿದೆ. ಫೆ.10ರಿಂದ ವಿವಿಧ ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್​ 10ರಂದು ಫಲಿತಾಂಶ ಹೊರಬೀಳಲಿದೆ.

ಬಿಜೆಪಿ ಸಂಸದ ವರುಣ್​ ಗಾಂಧಿಗೆ ಕೊವಿಡ್ 19 ಸೋಂಕು; ಗಂಭೀರ ಸ್ವರೂಪದ ಲಕ್ಷಣಗಳಿವೆ ಎಂದು ಟ್ವೀಟ್​
ವರುಣ್​ ಗಾಂಧಿ
Follow us on

ಉತ್ತರಪ್ರದೇಶದ ಪಿಲಿಭಿತ್​ ಬಿಜೆಪಿ ಸಂಸದ ವರುಣ್​ ಗಾಂಧಿ (BJP MP Varun Gandhi) ಕೊವಿಡ್​ 19 ಸೋಂಕಿಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ, ಸೋಂಕಿನ ಗಂಭೀರ ಸ್ವರೂಪ ಕಾಣಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ವರುಣ್​ ಗಾಂಧಿ,  ನನ್ನ ಕ್ಷೇತ್ರವಾದ ಪಿಲಿಭಿತ್​ನಲ್ಲಿ ಮೂರು ದಿನಗಳ ಕಾಲ ಇದ್ದು, ಚುನಾವಣಾ ಕಾರ್ಯ ನಡೆಸಿದೆ. ಇದೀಗ ನನಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಲಕ್ಷಣಗಳು ತುಸು ಗಂಭೀರಸ್ವರೂಪದಲ್ಲಿಯೇ ಇವೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು, ಸಕ್ರಿಯವಾಗಿ ಪಾಲ್ಗೊಳ್ಳುವ ರಾಜಕೀಯ ನಾಯಕರ ಆರೋಗ್ಯ ಸುರಕ್ಷತೆಗಾಗಿ ಕೂಡ ಕೆಲವು ಕ್ರಮಗಳನ್ನು ಚುನಾವಣಾ ಆಯೋಗ ಘೋಷಿಸಬೇಕು ಎಂದು ವರುಣ್ ಗಾಂಧಿ ಒತ್ತಾಯಿಸಿದ್ದಾರೆ. 

ದೇಶದ 5 ರಾಜ್ಯಗಳಾದ ಗೋವಾ, ಉತ್ತರಪ್ರದೇಶ, ಉತ್ತರಾಖಂಡ್​, ಮಣಿಪುರ, ಪಂಜಾಬ್​ಗಳಲ್ಲಿ ಮುಂದಿನ ತಿಂಗಳಿಂದ ವಿಧಾನಸಭೆ ಚುನಾವಣೆ ನಡೆಯಲಿದೆ. ಫೆ.10ರಿಂದ ವಿವಿಧ ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್​ 10ರಂದು ಫಲಿತಾಂಶ ಹೊರಬೀಳಲಿದೆ. ಈ ಸಂಬಂಧ ನಿನ್ನೆ ಸುದ್ದಿಗೋಷ್ಠಿ ನಡೆಸಿದರುವ ಚುನಾವಣಾ ಆಯೋಗದ ಮುಖ್ಯ ಆಯುಕ್ತರು, ಹಲವು ನಿಯಮಗಳನ್ನು ಘೋಷಿಸಿದ್ದಾರೆ. ಕೊವಿಡ್​ 19 ಇರುವುದರಿಂದ ಮತದಾನದ ಸಮಯವನ್ನು ಒಂದು ತಾಸುಗಳು ಕಾಲ ವಿಸ್ತರಿಸಲಾಗಿದೆ. ರೋಡ್​ ಶೋ, ಸಾರ್ವಜನಿಕ ಸಭೆ, ಪ್ರಚಾರ ಸಭೆ ಸೇರಿ ಜನರನ್ನು ಗುಂಪುಗೂಡಿಸುವಂಥ ಯಾವುದೇ ಸಭೆಗಳಿಗೆ ಜ.15ರವರೆಗೆ ನಿರ್ಬಂಧ ಇರಲಿದೆ. ರಾಜಕೀಯ ನಾಯಕರು ವರ್ಚ್ಯುವಲ್​ ರ್ಯಾಲಿ ನಡೆಸಬಹುದು ಎಂದು ಹೇಳಿದೆ.  ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ನಿನ್ನೆಯಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಸಿಬ್ಬಂದಿ ಎರಡೂ ಡೋಸ್ ಕೊರೊನಾ ಲಸಿಕೆ ಪಡೆದಿರಬೇಕು ಎಂದೂ ಚುನಾವಣಾ ಆಯೋಗ ಘೋಷಿಸಿದೆ.

ನಿನ್ನೆ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿ, ಚುನಾವಣೆ ದಿನಾಂಕ ಘೋಷಣೆ ಮಾಡುವುದಕ್ಕೂ ಮೊದಲು ಆರೋಗ್ಯ ಇಲಾಖೆ ಮುಖ್ಯಕಾರ್ಯದರ್ಶಿ, ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿತ್ತು. ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕೊವಿಡ್ 19 ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಮಾಹಿತಿ ಪಡೆದಿತ್ತು. ಅಲ್ಲಿ ಲಸಿಕೆ ವೇಗ ಹೆಚ್ಚಿಸಿ ಎಂಬ ಸಲಹೆಯನ್ನೂ ನೀಡಿದೆ. ಇನ್ನು ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್​ ಡೋಸ್​ ನೀಡುವಿಕೆಯನ್ನೂ ಸಾಧ್ಯವಾದಷ್ಟು ವೇಗವಾಗಿ ಪೂರ್ಣಗೊಳಿಸಿ ಎಂದು ಹೇಳಿತ್ತು.

ಇದನ್ನೂ ಓದಿ: Viral Video: ಪೊಲೀಸ್ ವ್ಯಾನ್​ನಲ್ಲಿ ಕರೆದೊಯ್ಯುತ್ತಿರುವಾಗಲೇ ಕೈಕೋಳ ತೊಡಿಸಿದ್ದ ಖೈದಿ ಎಸ್ಕೇಪ್; ಇಲ್ಲಿದೆ ವೈರಲ್ ವಿಡಿಯೋ

Published On - 2:05 pm, Sun, 9 January 22