AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NEET-PG Counselling: ಜನವರಿ 12ರಿಂದ ನೀಟ್​-ಪಿಜಿ ಕೌನ್ಸಿಲಿಂಗ್​ ಪ್ರಾರಂಭ; ಆರೋಗ್ಯ ಸಚಿವರಿಂದ ಘೋಷಣೆ

ನೀಟ್​ ಪಿಜಿ ಕೌನ್ಸಿಲಿಂಗ್​​ನಲ್ಲಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ದೇಶಾದ್ಯಂತ ಹಲವು ರೆಸಿಡೆಂಟ್​ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಕೌನ್ಸಿಲಿಂಗ್​ ದಿನಾಂಕ ಪ್ರಕಟವಾಗಿದ್ದು ಅವರಿಗೆ  ಅನುಕೂಲವಾಗಲಿದೆ.

NEET-PG Counselling: ಜನವರಿ 12ರಿಂದ ನೀಟ್​-ಪಿಜಿ ಕೌನ್ಸಿಲಿಂಗ್​ ಪ್ರಾರಂಭ; ಆರೋಗ್ಯ ಸಚಿವರಿಂದ ಘೋಷಣೆ
ಸಾಂಕೇತಿಕ ಚಿತ್ರ
TV9 Web
| Edited By: |

Updated on:Jan 09, 2022 | 2:47 PM

Share

2021-2022 ನೇ ಶೈಕ್ಷಣಿಕ ವರ್ಷದ ನೀಟ್​-ಪಿಜಿ (NEET-PG) ಕೌನ್ಸಿಲಿಂಗ್​ ಜನವರಿ 12ರಿಂದ ಪ್ರಾರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ತಿಳಿಸಿದ್ದಾರೆ. ನೀಟ್ ಸ್ನಾತಕೋತ್ತರ ಕೌನ್ಸಿಲಿಂಗ್ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​​ ವಿಚಾರಣೆ ನಡೆಸುತ್ತಿತ್ತು. ಶುಕ್ರವಾರ ತೀರ್ಪು ಹೊರಹಾಕಿದ್ದ ಸುಪ್ರೀಂಕೋರ್ಟ್​, ಸದ್ಯ ಇರುವಂತೆ ಆಲ್​ ಇಂಡಿಯಾ ಕೋಟಾ ಸೀಟ್​​ಗಳಲ್ಲಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಶೇ.27 ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ (EWS) ಶೇ.10ರಂತೆ ಮೀಸಲಾತಿ ಇರಬೇಕು ಎಂದು ಹೇಳಿ, ನೀಟ್​ ಪಿಜಿ ಕೌನ್ಸಿಲಿಂಗ್​​ ಪ್ರಾರಂಭಕ್ಕೆ ಅನುವು ಮಾಡಿಕೊಟ್ಟಿತ್ತು. ಅದಾದ ಎರಡೇ ದಿನದಲ್ಲಿ ಆರೋಗ್ಯ ಸಚಿವರು ಟ್ವೀಟ್​ ಮಾಡಿ, ನೀಟ್​ ಪಿಜಿ ಕೌನ್ಸಿಲಿಂಗ್​​ ದಿನಾಂಕ ಘೋಷಣೆ ಮಾಡಿದ್ದಾರೆ. 

ನೀಟ್​ ಪಿಜಿ ಕೌನ್ಸಿಲಿಂಗ್​​ನಲ್ಲಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ದೇಶಾದ್ಯಂತ ಹಲವು ರೆಸಿಡೆಂಟ್​ ವೈದ್ಯರು ಪ್ರತಿಭಟನೆ ನಡೆಸುದ್ದರು. ಇತ್ತೀಚೆಗಷ್ಟೇ ಆರೋಗ್ಯ ಇಲಾಖೆ ನೀಡಿದ ಭರವಸೆ ಮೇರೆಗೆ ಅವರು ಪ್ರತಿಭಟನೆ ಕೈಬಿಟ್ಟಿದ್ದರು.ಎಂಎ ಇದೀಗ ಕೌನ್ಸಿಲಿಂಗ್​ ದಿನಾಂಕ ಪ್ರಕಟವಾಗಿದ್ದು ಅವರಿಗೆ  ಅನುಕೂಲವಾಗಲಿದೆ. ಈ ಬಗ್ಗೆ ಇಂದು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಮನ್​ಸುಖ್ ಮಾಂಡವಿಯಾ, ಸುಪ್ರೀಂಕೋರ್ಟ್​ ಆದೇಶವನ್ನು ಗೌರವಿಸಲಾಗುತ್ತದೆ. ಜನವರಿ 12ರಿಂದ ಕೌನ್ಸಿಲಿಂಗ್ ನಡೆಸುವುದಾಗಿ ಆರೋಗ್ಯ ಸಚಿವಾಲಯ ರೆಸಿಡೆಂಟ್​ ವೈದ್ಯರಿಗೆ ಭರವಸೆ ನೀಡುತ್ತಿದೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಟದಲ್ಲಿ ದೇಶಕ್ಕೆ ಇನ್ನಷ್ಟು ಶಕ್ತಿ ತುಂಬಲಾಗುವುದು ಎಂದು ತಿಳಿಸಿದ್ದಾರೆ. ಹಾಗೇ, ಕೌನ್ಸಿಲಿಂಗ್​​ ಎದುರಿಸಬೇಕಾದ  ಎಲ್ಲ ಅಭ್ಯರ್ಥಿಗಳಿಗೆ ಶುಭಾಶಯ ಎಂದೂ ಹೇಳಿದ್ದಾರೆ.

ಕೌನ್ಸಿಲಿಂಗ್​ಗೆ ಬೇಕಾಗುವ ದಾಖಲೆಗಳೇನು? ಪ್ರಸಕ್ತ ವರ್ಷ ನೀಟ್​ ಪಿಜಿ ಕೌನ್ಸಿಲಿಂಗ್, ಆನ್​ಲೈನ್ ವಿಧಾನದಲ್ಲಿ​ ನಾಲ್ಕು ಸುತ್ತುಗಳಲ್ಲಿ ನಡೆಯಲಿದೆ ಎಂದು ಈ ಹಿಂದೆಯೇ ವೈದ್ಯಕೀಯ ಕೌನ್ಸಿಲಿಂಗ್​ ಸಮಿತಿ (MCC) ಘೋಷಣೆ ಮಾಡಿದೆ.  ಇನ್ನು ನೀಟ್​ ಕೌನ್ಸಿಲಿಂಗ್​ಗೆ ಹಾಜರಾಗುವ ಅಭ್ಯರ್ಥಿಗಳಿಗೆ ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ. 1) 2021 ನೀಟ್​ ಪರೀಕ್ಷೆಯ ಪ್ರವೇಶ ಪತ್ರ 2)2021ನೇ ನೀಟ್ ಪರೀಕ್ಷೆಯ ಫಲಿತಾಂಶ ಪಟ್ಟಿ, ಯಾವುದೇ ರ್ಯಾಂಕ್​ ಬಂದಿದ್ದರೆ ಅದರ ಕಾರ್ಡ್​ 3)10ನೇ ತರಗತಿ ಪಾಸ್​ ಆಗಿರುವ ಪ್ರಮಾಣ ಪತ್ರ 4)12ನೇ ತರಗತಿ ಉತ್ತೀರ್ಣವಾಗಿರುವ ಸರ್ಟಿಫಿಕೇಟ್​ 5)ಸರ್ಕಾರ ಮಾನ್ಯ ಮಾಡಿರುವ ಐಡಿ ಕಾರ್ಡ್​ 6)ಪಾಸ್​ಪೋರ್ಟ್​ ಸೈಝ್​ ಫೋಟೋ 7)ಎಂಬಿಬಿಎಸ್​, ಬಿಡಿಎಸ್​ ಅಂಕಪಟ್ಟಿ 8)ಜಾತಿ ಪ್ರಮಾಣ ಪತ್ರ 9)ಇಂಟರ್ನ್​ಶಿಪ್​ ಲೆಟರ್​ 10)ಎಂಸಿಐನಿಂದ ನೀಡಲಾದ ನೋಂದಣಿ ಸರ್ಟಿಫಿಕೇಟ್​.

ಇದನ್ನೂ ಓದಿ: ನೀಟ್​ ಪಿಜಿ ಮತ್ತು ಯುಜಿ ಕೌನ್ಸೆಲಿಂಗ್ ಅಧಿಸೂಚನೆಗೆ ಅನುಗುಣವಾಗಿ ನಡೆಯಲಿದೆ: ಸುಪ್ರೀಂಕೋರ್ಟ್

 ಇಬ್ಬರು ವಿಕೆಟ್ ಕೀಪರ್​ಗೆ ಗಾಯ: ಬದಲಿ ಆಟಗಾರನಾಗಿ ಕಣಕ್ಕಿಳಿದು ದಾಖಲೆ ಬರೆದ ಯುವ ಆಟಗಾರ

Published On - 2:22 pm, Sun, 9 January 22

ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು