ಜಾನುವಾರುಗಳ ಅಕ್ರಮ ಸಾಗಣೆ ತಡೆಯಲು ಹೋದ ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ; 12 ಪೊಲೀಸ್​ ಸಿಬ್ಬಂದಿಗೆ ಗಾಯ, ಆಸ್ಪತ್ರೆಗೆ ದಾಖಲು

ಜಾನುವಾರುಗಳ ಅಕ್ರಮ ಸಾಗಣೆ ತಡೆಯಲು ಹೋದ ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ; 12 ಪೊಲೀಸ್​ ಸಿಬ್ಬಂದಿಗೆ ಗಾಯ, ಆಸ್ಪತ್ರೆಗೆ ದಾಖಲು
ಪ್ರಾತಿನಿಧಿಕ ಚಿತ್ರ

ಪೊಲೀಸರನ್ನು ಕಾಣುತ್ತಿದ್ದಂತೆ ಜಾನುವಾರು ಕಳ್ಳಸಾಗಣೆದಾರರು ಮೊದಲು ಕಲ್ಲು ಹೊಡೆಯಲು ಶುರು ಮಾಡಿದರು. ಅದಾದ ಬಳಿಕ ಬಾಂಬೂ ಕೋಲುಗಳನ್ನು ತೆಗೆದುಕೊಂಡು ಹೊಡೆದರು ಎಂದು ಹೇಳಲಾಗಿದೆ.

TV9kannada Web Team

| Edited By: Lakshmi Hegde

Jan 09, 2022 | 3:26 PM

ಪಶುಗಳ ಅಕ್ರಮ ಸಾಗಣೆದಾರರು ಪೊಲೀಸರ ಮೇಲೆ ಹಲ್ಲೆ ನಡೆಸಿದ ಪರಿಣಾಮ 12 ಪೊಲೀಸ್​ ಸಿಬ್ಬಂದಿ ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಕೂಚ್​ ಬೇಹರ್​​​ನಲ್ಲಿ ಶನಿವಾರ ರಾತ್ರಿ ನಡೆದಿದೆ.  ಭಾರತ-ಬಾಂಗ್ಲಾದೇಶ ಗಡಿ ಸಮೀಪ ಇರುವ, ಮೇಖಾಲಿಗಂಜ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಹಲ್ಲೆ ನಡೆದಿದ್ದಾಗಿ ವರದಿಯಾಗಿದೆ. ಇಲ್ಲಿ ಒಂದಷ್ಟು ಮಂದಿ ಜಾನುವಾರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಅದರಂತೆ ಸಾಗಣೆದಾರರನ್ನು ಸೆರೆಹಿಡಿಯಲು ಪೊಲೀಸರು ಹೊಂಚು ಹಾಕಿದ್ದರು. ಆದರೆ ಅವರು ಪೊಲೀಸರ ಮೇಲೆಯೇ ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದಾರೆ. ಈ ಕಳ್ಳಸಾಗಣೆದಾರರಲ್ಲಿ ಮಹಿಳೆಯರೂ  ಇದ್ದಾರೆ, ಈ ಮಹಿಳೆಯರೂ ನಮ್ಮ ಮೇಲೆ ದಾಳಿಗೆ ಬಂದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಪೊಲೀಸರನ್ನು ಕಾಣುತ್ತಿದ್ದಂತೆ ಜಾನುವಾರು ಕಳ್ಳಸಾಗಣೆದಾರರು ಮೊದಲು ಕಲ್ಲು ಹೊಡೆಯಲು ಶುರು ಮಾಡಿದರು. ಅದಾದ ಬಳಿಕ ಬಾಂಬೂ ಕೋಲುಗಳನ್ನು ತೆಗೆದುಕೊಂಡು ಹೊಡೆದರು ಎಂದು ಹೇಳಲಾಗಿದೆ. ಸದ್ಯ ಗಾಯಗೊಂಡ ಪೊಲೀಸರನ್ನು ಮೆಖಾಲಿಗಂಜ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗಿದ್ದಾಗ್ಯೂ ಪೊಲೀಸರು ಸುಮ್ಮನೆ ಬರಲಿಲ್ಲ. ನಾಲ್ವರು ಮಹಿಳೆಯರು ಸೇರಿ, ಆರು ಸ್ಮಗ್ಲರ್​ಗಳನ್ನು ಬಂಧಿಸಿದ್ದಾರೆ. ಆ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣವಿದ್ದು, ಅಲ್ಲಿ ಹೆಚ್ಚಿನ ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರು ಜಾನುವಾರುಗಳನ್ನು ಗಡಿಯಾಚೆಗೆ ಅಕ್ರಮವಾಗಿ ಸಾಗಿಸುತ್ತಿದ್ದರು. ಒಟ್ಟು 34 ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ನಿನ್ನೆ ಮಾಲ್ಡಾದಲ್ಲಿ ಗಡಿ ಭದ್ರತಾ ಪಡೆಯ ಸೈನಿಕರು  ಇಬ್ಬರು ಜಾನುವಾರು ಸ್ಮಗ್ಲರ್​ಗಳನ್ನು ಅರೆಸ್ಟ್ ಮಾಡಿದ್ದರು.

ಇದನ್ನೂ ಓದಿ: ಇಬ್ಬರು ವಿಕೆಟ್ ಕೀಪರ್​ಗೆ ಗಾಯ: ಬದಲಿ ಆಟಗಾರನಾಗಿ ಕಣಕ್ಕಿಳಿದು ದಾಖಲೆ ಬರೆದ ಯುವ ಆಟಗಾರ

Follow us on

Related Stories

Most Read Stories

Click on your DTH Provider to Add TV9 Kannada