ಗುಜರಾತ್​ ಕರಾವಳಿಯಲ್ಲಿ ಪಾಕಿಸ್ತಾನದ ಯಾಸೀನ್​ ಬೋಟ್​ ವಶ; ಅದರಲ್ಲಿದ್ದುದು 10 ಜನರು, 2 ಟನ್​ ಮೀನು

ಇಂದು ಗುಜರಾತ್​ ಕರಾವಳಿ ತೀರ(Gujarat Coast)ದಲ್ಲಿ ಸರಹದ್ದು ದಾಟಿ ಭಾರತದ ಕಡೆಗೆ ಸುಮಾರು 6-7 ಮೈಲುಗಳಷ್ಟು ದೂರ ಬಂದ ಪಾಕಿಸ್ತಾನ್​ ಬೋಟ್​​ವೊಂದನ್ನು ಭಾರತೀಯ ಕರಾವಳಿ ರಕ್ಷಕ ಪಡೆ (ICG) ವಶಕ್ಕೆ ಪಡೆದಿದೆ. ಈ ದೋಣಿಯಲ್ಲಿ ಪಾಕಿಸ್ತಾನದ 10 ಮಂದಿ ಇದ್ದರು. ವಿಚಾರಣೆಗಾಗಿ ಅವರನ್ನೆಲ್ಲ ಪೋರ್​ಬಂದರ್​ಗೆ ಕರೆತರಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ಈ ಬೋಟ್​​ನ ಹೆಸರು ಯಾಸೀನ್​. ಶನಿವಾರ  ಭಾರತೀಯ ಕರಾವಳಿ ರಕ್ಷಕ ಪಡೆ ಹಡಗು ಅಂಕಿತ್​​ ಗಸ್ತು ತಿರುಗುತ್ತಿತ್ತು. ಈ ವೇಳೆ ಭಾರತದ […]

ಗುಜರಾತ್​ ಕರಾವಳಿಯಲ್ಲಿ ಪಾಕಿಸ್ತಾನದ ಯಾಸೀನ್​ ಬೋಟ್​ ವಶ; ಅದರಲ್ಲಿದ್ದುದು 10 ಜನರು, 2 ಟನ್​ ಮೀನು
ಗುಜರಾತ್​ ಕರಾವಳಿಯಲ್ಲಿ ಸೆರೆ ಸಿಕ್ಕ ಪಾಕ್​ ಬೋಟ್​
Follow us
TV9 Web
| Updated By: Lakshmi Hegde

Updated on: Jan 09, 2022 | 3:48 PM

ಇಂದು ಗುಜರಾತ್​ ಕರಾವಳಿ ತೀರ(Gujarat Coast)ದಲ್ಲಿ ಸರಹದ್ದು ದಾಟಿ ಭಾರತದ ಕಡೆಗೆ ಸುಮಾರು 6-7 ಮೈಲುಗಳಷ್ಟು ದೂರ ಬಂದ ಪಾಕಿಸ್ತಾನ್​ ಬೋಟ್​​ವೊಂದನ್ನು ಭಾರತೀಯ ಕರಾವಳಿ ರಕ್ಷಕ ಪಡೆ (ICG) ವಶಕ್ಕೆ ಪಡೆದಿದೆ. ಈ ದೋಣಿಯಲ್ಲಿ ಪಾಕಿಸ್ತಾನದ 10 ಮಂದಿ ಇದ್ದರು. ವಿಚಾರಣೆಗಾಗಿ ಅವರನ್ನೆಲ್ಲ ಪೋರ್​ಬಂದರ್​ಗೆ ಕರೆತರಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ಈ ಬೋಟ್​​ನ ಹೆಸರು ಯಾಸೀನ್​. ಶನಿವಾರ  ಭಾರತೀಯ ಕರಾವಳಿ ರಕ್ಷಕ ಪಡೆ ಹಡಗು ಅಂಕಿತ್​​ ಗಸ್ತು ತಿರುಗುತ್ತಿತ್ತು. ಈ ವೇಳೆ ಭಾರತದ ಕಡೆಗೆ ಪ್ರವೇಶಿಸಿದ ಪಾಕಿಸ್ತಾನಿ ಯಾಸೀನ್​ ಬೋಟ್​​ನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದೆ.

ಭಾರತದ ಭಾಗದ ನೀರನ್ನು ಪ್ರವೇಶಿಸಿದ ಪಾಕಿಸ್ತಾನದ ಯಾಸೀನ್ ಬೋಟ್​​ನಲ್ಲಿ ಸುಮಾರು 2 ಟನ್​  ಮೀನುಗಳಿದ್ದವು, 600 ಲೀಟರ್​ ಇಂಧನವಿತ್ತು.ಅವೆಲ್ಲವನ್ನೂ ಭಾರತೀಯ ರಕ್ಷಣಾ ಪಡೆ ವಶಪಡಿಸಿಕೊಂಡಿದೆ. ಇವು ಬಿಟ್ಟರೆ ಮತ್ತೇನೂ ಮಹತ್ವದ ದಾಖಲೆಗಳಾಗಲಿ, ವಸ್ತುಗಳಾಗಲಿ ಸಿಕ್ಕಿಲ್ಲ ಎಂದು ಹೇಳಲಾಗಿದೆ. 2021ರ ಸೆಪ್ಟೆಂಬರ್​ 15ರಂದು ಇಂಥದ್ದೇ ಒಂದು ಘಟನೆ ನಡೆದಿತ್ತು. ಸುಮಾರು 12 ಸಿಬ್ಬಂದಿಯಿದ್ದ ಪಾಕಿಸ್ತಾನದ ಬೋಟ್​ವೊಂದು ಗುಜರಾತ್​ ಕರಾವಳಿಯಲ್ಲಿ ಭಾರತದ ಒಳಗೆ ಬಂದಿತ್ತು.  ಇನ್ನು ಡಿಸೆಂಬರ್​ 20ರಂದು ಪಾಕಿಸ್ತಾನದ ಮೀನುಗಾರಿಕಾ ಬೋಟ್​ವೊಂದು ಭಾರತದ ಕರಾವಳಿ ರಕ್ಷಕ ಪಡೆಯ ಬಳಿ ಸಿಕ್ಕಿಬಿದ್ದಿತ್ತು. ಅದರಲ್ಲಿ ಸುಮಾರು 400 ಕೋಟಿ ರೂ.ಮೌಲ್ಯದ, 77 ಕೆಜಿಗಳಷ್ಟು ಪ್ರಮಾಣದ ಹೆರೋಯಿನ್​ ಇತ್ತು.  ಹೀಗೆ ಅಕ್ರಮವಾಗಿ ನುಸುಳುವ ಬೋಟ್​ಗಳು ಮಾದಕ ದ್ರವ್ಯ ಸಾಗಣೆ ಮಾಡುತ್ತಿವೆ ಎಂದು ಹೇಳಲಾಗಿದ್ದು, ದೇಶದ ಉಗ್ರ ವಿರೋಧಿ ಪಡೆಗಳು, ಕರಾವಳಿ ರಕ್ಷಕ ಪಡೆಗಳು ಜಂಟಿಯಾಗಿಯೇ ಕಾರ್ಯಾಚರಣೆ ನಡೆಸುತ್ತಿವೆ.

ಇದನ್ನೂ ಓದಿ:‘ನೆಲ,ಜಲ, ಭಾಷೆಗೆ ಧಕ್ಕೆಯಾದಾಗ ರಾಜ್​ಕುಮಾರ್ ಮೊದಲು ಮುಂದೆ ಬರುತ್ತಿದ್ದರು’; ಜಯಮಾಲಾ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್