AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋವಾ ವಿಧಾನಸಭೆ ಚುನಾವಣೆ 2022; 10 ಅಭ್ಯರ್ಥಿಗಳ ಹೆಸರಿರುವ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಆಮ್​ ಆದ್ಮಿ ಪಕ್ಷ

ಗೋವಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ಅಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತೇವೆ. ಆದರೆ ನಾನು ಅಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಲ್ಲ ಎಂದು ಅರವಿಂದ್ ಕೇಜ್ರಿವಾಲ್​ ಈಗಾಗಲೇ ಘೋಷಿಸಿದ್ದಾರೆ.

ಗೋವಾ ವಿಧಾನಸಭೆ ಚುನಾವಣೆ 2022; 10 ಅಭ್ಯರ್ಥಿಗಳ ಹೆಸರಿರುವ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಆಮ್​ ಆದ್ಮಿ ಪಕ್ಷ
ಅತಿಶಿ, ಆಪ್​ ಗೋವಾ ಉಸ್ತುವಾರಿ
TV9 Web
| Updated By: Lakshmi Hegde|

Updated on: Jan 09, 2022 | 4:11 PM

Share

ಐದು ರಾಜ್ಯಗಳ ಚುನಾವಣೆ (Assembly Elections 2022) ಬರುವ ತಿಂಗಳಿಂದ ವಿವಿಧ ಹಂತದಲ್ಲಿ ನಡೆಯಲಿದೆ. ಅದರಲ್ಲಿ ಪಂಜಾಬ್​, ಗೋವಾ ಮತ್ತು ಉತ್ತರಾಖಂಡ ಚುನಾವಣೆಗಳನ್ನು ಆಮ್​ ಆದ್ಮಿ ಪಕ್ಷ (Aam Aadmi Party) ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಆಪ್​ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್​ ಆ ರಾಜ್ಯಗಳ ಪ್ರವಾಸ ಮಾಡಿದ್ದಾರೆ. ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿ, ಅಭಿವೃದ್ಧಿಯ ಭರವಸೆ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್​ ಅವರು​ ಈಗಾಗಲೇ ಪಂಜಾಬ್​ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇಂದು ಗೋವಾ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡು ದಿನಗಳ ಹಿಂದಷ್ಟೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿತ್ತು.

ಗೋವಾದ ಆಪ್​ ಉಸ್ತುವಾರಿ ಅತಿಶಿ ಇಂದು 10 ಹೆಸರುಳ್ಳ ಎರಡನೇ ಲಿಸ್ಟ್​ ಬಿಡುಗಡೆ ಮಾಡಿದ್ದು, ಅದರಲ್ಲಿ ಆಮ್​ ಆದ್ಮಿ ಪಕ್ಷದ ಗೋವಾ ಸಂಚಾಲಯ ರಾಹುಲ್​ ಮಾಂಬ್ರೆ ಹೆಸರಿದೆ. ಅವರು ನಮ್ಮ ತವರಾದ ಮಪುಸಾದಿಂದ ಸ್ಪರ್ಧಿಸಲಿದ್ದಾರೆ. ಹಾಗೇ, 2017ರ ಚುನಾವಣೆಯಲ್ಲಿ ವೇಲಿಮ್​ನಿಂದ ಸ್ಪರ್ಧೆ ಮಾಡಿದ್ದ ಕ್ರೂಜ್​ ಸಿಲ್ವಾ ಮತ್ತು ಟೆಲಿಗಾಂವ್​ನಿಂದ ಸ್ಪರ್ಧೆ ಮಾಡಿದ್ದ ರೋಡ್ರಿಗಸ್​ ಹೆಸರುಗಳೂ ಇವೆ. ಗೋವಾ ಚುನಾವಣೆಯಲ್ಲಿ ಗೆದ್ದು, ಇಲ್ಲಿ ಸಂಪೂರ್ಣ ಬದಲಾವಣೆ ತರಲು ನಮ್ಮ ಪಕ್ಷ ಸಜ್ಜಾಗಿದೆ. ನಾವು ತರಲಿಚ್ಛಿಸಿರುವ ರಾಜಕೀಯ ಪರಿವರ್ತನೆ ಮುನ್ನಡೆಸಲಿರುವ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಲು ನನಗೆ ಖುಷಿಯಾಗುತ್ತಿದೆ ಎಂದು ಅತಿಶಿ ಇಂದು ಹೇಳಿದರು. ಎರಡು ದಿನಗಳ ಹಿಂದೆ ಬಿಡುಗಡೆ ಮಾಡಲಾದ ಮೊದಲ ಪಟ್ಟಿಯಲ್ಲಿ ಬಿಜೆಪಿಯ ಮಾಜಿ ಸಚಿವರಾದ ಅಲೀನಾ ಸಲ್ಡಾನ್ಹಾ ಮತ್ತು ಮಹಾದೇವ ನಾಯಕ್ ಹೆಸರೂ ಇದೆ.

ಗೋವಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ಅಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತೇವೆ. ಆದರೆ ನಾನು ಅಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಲ್ಲ ಎಂದು ಅರವಿಂದ್ ಕೇಜ್ರಿವಾಲ್​ ಈಗಾಗಲೇ ಘೋಷಿಸಿದ್ದಾರೆ. ಮೊದಲು ಆಪ್​ ಪಕ್ಷ ಯಾವುದಾದರೂ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಯೋಜನೆ ರೂಪಿಸಿತ್ತು. ಆದರೆ ನಂತರ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧಾರ ಮಾಡಿದೆ. ಗೋವಾದಲ್ಲಿ ಫೆಬ್ರವರಿ 14ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. 11.6 ಲಕ್ಷ ಮತದಾರರು ಇರುವ ಗೋವಾದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಇದನ್ನೂ ಓದಿ: ಶಿವಮೊಗ್ಗ, ಮಂಡ್ಯದಲ್ಲಿ ಕೊರೊನಾ ಹೆಚ್ಚಳ; ವೀಕೆಂಡ್​ ಕರ್ಫ್ಯೂ ಉಲ್ಲಂಘಿಸಿ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿದ ರೇಣುಕಾಚಾರ್ಯ