ಭುವನೇಶ್ವರ: ಒಡಿಶಾದ (Odisha) ಪುರಿ (Puri) ಜಿಲ್ಲೆಯಲ್ಲಿ ನಡೆಯುತ್ತಿರುವ ಝಮು ಜಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ (Sambit Patra) ಕೆಂಡದ ಮೇಲೆ ನಡೆದಿದ್ದಾರೆ. ಪಾತ್ರಾ ಮಂಗಳವಾರ ಸುಡುವ ಕಲ್ಲಿದ್ದಲಿನ ಕೆಂಡದ ಮೇಲೆ ಸುಮಾರು 10 ಮೀಟರ್ ನಡೆದಿದ್ದಾರೆ. ಇದಾದ ನಂತರ ಟ್ವೀಟ್ ಮಾಡಿದ ಪಾತ್ರಾ, ಇಂದು, ನಾನು ಪುರಿ ಜಿಲ್ಲೆಯ ಸಮಂಗ್ ಪಂಚಾಯತ್‌ನ ರೆಬಾಟಿ ರಾಮನ್ ಗ್ರಾಮದ ಯಾತ್ರೆಯಲ್ಲಿ ಭಾಗವಹಿಸಿದ್ದೇನೆ, ನನ್ನ ತಾಯಿಗೆ ಬೆಂಕಿಯ ಮೇಲೆ ನಡೆದಾಡುವ ಮೂಲಕ ಪೂಜೆ ಸಲ್ಲಿಸಿದ್ದೇನೆ. ಅವರ ಆಶೀರ್ವಾದವನ್ನು ಪಡೆದುಕೊಂಡಿದ್ದೇನೆ ಗ್ರಾಮಸ್ಥರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ಹಾರೈಸುತ್ತೇನೆ ಎಂದಿದ್ದಾರೆ.
ಈ ಯಾತ್ರೆಯಲ್ಲಿ, ನಾನು ಬೆಂಕಿಯ ಮೇಲೆ ನಡೆಯುವ ಮೂಲಕ ಮತ್ತು ತಾಯಿಯ (ದೇವತೆ ದುಲನ್) ಆಶೀರ್ವಾದವನ್ನು ಪಡೆದಿದ್ದೇನೆ ಎಂದು ಪಾತ್ರಾ ಹೇಳಿದ್ದಾರೆ.
शक्ति पूजा हमारी सनातन संस्कृति एवं परंपरा का अहम हिस्सा है, पुरी जिले के समंग पंचायत के रेबती रमण गांव में आयोजित यह दण्ड और झामू यात्रा इसी प्राचीन परंपरा का प्रतीक है।
इस तीर्थयात्रा में अग्नि पर चलकर मां की पूजा-अर्चना एवं आशीर्वाद प्राप्त कर, खुद को धन्य अनुभव कर रहा हूँ।… pic.twitter.com/oTciqW61Gj
— Sambit Patra (@sambitswaraj) April 11, 2023
ಸುದ್ದಿಗಾರರೊಂದಿಗೆ ಮಾತನಾಡಿದ ಪಾತ್ರಾ, ಜನರ ಕಲ್ಯಾಣ ಮತ್ತು ಕ್ಷೇತ್ರದಲ್ಲಿ ಶಾಂತಿಗಾಗಿ ಬೆಂಕಿಯ ಮೇಲೆ ನಡೆಯುವ ಕಾರ್ಯವನ್ನು ಮಾಡಿರುವುದಾಗಿ ಹೇಳಿದ್ದಾರೆ.
ಪಾತ್ರಾ ಅವರು ದುಲನ್ಗೆ ಜೈಕಾರ ಕೂಗುತ್ತಿರುವ ಗ್ರಾಮಸ್ಥರ ನಡುವೆ ಕೆಂಡದ ಮೇಲೆ ನಡೆಯುತ್ತಿರುವ ವಿಡಿಯೊವನ್ನು ಶೇರ್ ಮಾಡಿದ್ದಾರೆ,
ಪಾತ್ರಾ 2019 ರ ಲೋಕಸಭೆ ಚುನಾವಣೆಯಲ್ಲಿ ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಲ್ಲಿ ಅವರು ಬಿಜು ಜನತಾ ದಳದ (ಬಿಜೆಡಿ) ಪಿನಾಕಿ ಮಿಶ್ರಾ ವಿರುದ್ಧ 10,000 ಮತಗಳಿಂದ ಸೋತರು.
ಇದನ್ನೂ ಓದಿ: ಏಪ್ರಿಲ್ 14ರಂದು ಅಸ್ಸಾಂಗೆ ಪ್ರಧಾನಿ ಮೋದಿ ಭೇಟಿ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಸಂಪ್ರದಾಯದ ಪ್ರಕಾರ, ಝಮು ಜಾತ್ರೆ ಒಂದು ತಪಸ್ಸು. ಭಕ್ತರು ತಮ್ಮ ಆಗ್ರಹಗಳನ್ನು ಈಡೇರಿಸಲು ದೇವತೆ ದುಲನ್ ಅನ್ನು ಸಮಾಧಾನಪಡಿಸಲು ಬೆಂಕಿಯ ಮೇಲೆ ನಡೆಯುವುದರ ಮೂಲಕ ಅಥವಾ ಮೊಳೆ ಚುಚ್ಚುವ ಮೂಲಕ ತಮ್ಮ ದೇಹಕ್ಕೆ ನೋವನ್ನು ಉಂಟುಮಾಡುತ್ತಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:17 pm, Wed, 12 April 23