AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿ ಭಾರತದ ಇಂದಿನ ಮೀರ್ ಜಾಫರ್: ಸಂಬಿತ್ ಪಾತ್ರಾ ವಾಗ್ದಾಳಿ

ಸಂಸತ್ತಿನ ಚರ್ಚೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದನ್ನು ಪ್ರಸ್ತಾಪಿಸಿದ ಪಾತ್ರಾ, "ಚರ್ಚೆ ಪ್ರಜಾಪ್ರಭುತ್ವದ ಆತ್ಮ. ಆದರೆ ರಾಹುಲ್ ಗಾಂಧಿ 2019 ರಿಂದ ಕೇವಲ ಆರು ಬಾರಿ ಮಾತ್ರ ಭಾಗವಹಿಸಿದ್ದರು. ಅವರು ಚರ್ಚೆಯಲ್ಲಿ ಭಾಗವಹಿಸುತ್ತಿಲ್ಲ ಎಂದಿದ್ದಾರೆ

ರಾಹುಲ್ ಗಾಂಧಿ ಭಾರತದ ಇಂದಿನ ಮೀರ್ ಜಾಫರ್: ಸಂಬಿತ್ ಪಾತ್ರಾ ವಾಗ್ದಾಳಿ
ಸಂಬಿತ್ ಪಾತ್ರಾ
ರಶ್ಮಿ ಕಲ್ಲಕಟ್ಟ
|

Updated on:Mar 21, 2023 | 12:59 PM

Share

ಇತ್ತೀಚೆಗಷ್ಟೇ ಬ್ರಿಟನ್ ಭೇಟಿಯ ವೇಳೆ ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಬಿಜೆಪಿ (BJP) ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ಕ್ಷಮೆಯಾಚಿಸುವ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ (Sambit Patra) ರಾಹುಲ್ ಅವರನ್ನು ಭಾರತದ ರಾಜಕೀಯದ ಇಂದಿನ ಮೀರ್ ಜಾಫರ್ ಎಂದು ಕರೆದಿದ್ದಾರೆ.ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕ್ಷಮೆ ಯಾಚಿಸಬೇಕು. ಅವರು ಯಾವಾಗಲೂ ರಾಷ್ಟ್ರವನ್ನು ದೂಷಿಸುತ್ತಾರೆ. ಅವರು ಭಾರತದ ಇಂದಿನ ಮೀರ್ ಜಾಫರ್. ಅವರು ದೇಶವನ್ನು ಅವಮಾನಿಸಿ ವಿದೇಶಿ ಶಕ್ತಿಯು ದೇಶದಲ್ಲಿ ಮಧ್ಯಪ್ರವೇಶಿಸುವಂತೆ ಕೇಳಿದರು. ಇದು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ನಿರಂತರ ‘ಪಿತೂರಿ’. ಸಂಸತ್ತಿನಲ್ಲಿ ಅವರ ಭಾಗವಹಿಸುವಿಕೆ ಕಡಿಮೆ ಆಗಿದ್ದರೂ, ಅಲ್ಲಿ ಯಾರೂ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳುತ್ತಾರೆ ಎಂದು ಪಾತ್ರಾ ಮಂಗಳವಾರ ಸಂಸತ್ತಿನ ಅಧಿವೇಶನ ಪ್ರಾರಂಭವಾಗುವ ಮೊದಲು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

“ಇದು ಮೀರ್ ಜಾಫರ್ ಮಾಡಿದ್ದಕ್ಕಿಂತ ಭಿನ್ನವೇನಲ್ಲ. ನವಾಬನಾಗಲು ಮೀರ್ ಜಾಫರ್ ಏನು ಮಾಡಿದ್ದಾನೆ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಅವನಿಗೆ ಯಾವಾಗಲೂ ಆಳುವ ಆಸೆ ಇತ್ತು. ಹಾಗೆ ಮಾಡಲು ಆತ ಈಸ್ಟ್ ಇಂಡಿಯಾ ಕಂಪನಿಯ ಸಹಾಯವನ್ನು ತೆಗೆದುಕೊಂಡನು. ನಂತರ ದೇಶವನ್ನು ಬ್ರಿಟಿಷರು ಆಳಿದರು.

ಸಂಸತ್ತಿನ ಚರ್ಚೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದನ್ನು ಪ್ರಸ್ತಾಪಿಸಿದ ಪಾತ್ರಾ, “ಚರ್ಚೆ ಪ್ರಜಾಪ್ರಭುತ್ವದ ಆತ್ಮ. ಆದರೆ ರಾಹುಲ್ ಗಾಂಧಿ 2019 ರಿಂದ ಕೇವಲ ಆರು ಬಾರಿ ಮಾತ್ರ ಭಾಗವಹಿಸಿದ್ದರು. ಅವರು ಚರ್ಚೆಯಲ್ಲಿ ಭಾಗವಹಿಸುತ್ತಿಲ್ಲ ಎಂದಿದ್ದಾರೆ . “ದುರದೃಷ್ಟವಶಾತ್ ನಾನು ಸಂಸದನಾಗಿದ್ದೇನೆ” ಎಂದು ಹೇಳುವ ಗಾಂಧಿಯವರ ಹೇಳಿಕೆ ಬಗ್ಗೆ ವಾಗ್ದಾಳಿ ನಡೆಸಿದ ಪಾತ್ರಾ, “ರಾಹುಲ್ ಗಾಂಧಿಗೆ ಏನು ಹೇಳಬೇಕೆಂದು ತಿಳಿದಿಲ್ಲ. ಅವರು ಜೈರಾಮ್ ರಮೇಶ್ ಅವರ ಸಹಾಯದಿಂದ ಮಾತ್ರ ಮಾತನಾಡುತ್ತಾರೆ. ದುರದೃಷ್ಟವಶಾತ್ ನಾನು ಸಂಸದನಾಗಿದ್ದೇನೆ ಎಂದು ಅವರೇ ಹೇಳಿದ್ದಾರೆ.

ಇತ್ತೀಚೆಗೆ ಲಂಡನ್‌ನ ಚಾಥಮ್ ಹೌಸ್‌ನಲ್ಲಿ ಸಂವಾದದ ವೇಳೆ, ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರ ಮೈಕ್‌ಗಳನ್ನು ಆಗಾಗ್ಗೆ ಮ್ಯೂಟ್ ಮಾಡಲಾಗುತ್ತದೆ ಎಂದಿದ್ದ ರಾಹುಲ್, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಹಲವು ಆರೋಪಗಳನ್ನು ಮಾಡಿದ್ದರು. ದೇಶದ ವಿವಿಧ ಸಂಸ್ಥೆಗಳಿಗೆ ಬೆದರಿಕೆ ಇದೆ ಎಂದು ರಾಹುಲ್ ಆರೋಪಿಸಿದ್ದಾರೆ. ಆರ್‌ಎಸ್‌ಎಸ್ ಅನ್ನು “ಮೂಲಭೂತವಾದಿ” ಮತ್ತು “ಫ್ಯಾಸಿಸ್ಟ್” ಸಂಘಟನೆ ಎಂದು ಹೇಳಿದ ರಾಹುಲ್ ಅದು ಭಾರತದ ಎಲ್ಲಾ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Tue, 21 March 23