ಬಸ್ ಆಜ್ ಕೀ ರಾತ್ ಹೈ ಜಿಂದಗೀ ಹಾಡಿಗೆ ನೃತ್ಯ ಮಾಡುತ್ತಾ ಪ್ರಾಣ ಬಿಟ್ಟ ಸರ್ಕಾರಿ ನೌಕರ
ಬಸ್ ಆಜ್ ಕೀ ರಾತ್ ಹೈ ಜಿಂದಗೀ, ಕಲ್ ಹಮ್ ಕಹಾ ತುಮ್ ಕಹಾ ನೃತ್ಯ ಮಾಡುತ್ತಾ ಸರ್ಕಾರಿ ನೌಕರರೊಬ್ಬರು ಹೃದಯಾಘಾತ(Heart Attack)ದಿಂದ ಸಾವನ್ನಪ್ಪಿರುವ ಘಟನೆ ಭೋಪಾಲ್‌ನಲ್ಲಿ ನಡೆದಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಸ್ ಆಜ್ ಕೀ ರಾತ್ ಹೈ ಜಿಂದಗೀ ಕಲ್ ಹಮ್ ಕಹಾ ತುಮ್ ಕಹಾ ನೃತ್ಯ ಮಾಡುತ್ತಾ ಸರ್ಕಾರಿ ನೌಕರರೊಬ್ಬರು ಹೃದಯಾಘಾತ(Heart Attack)ದಿಂದ ಸಾವನ್ನಪ್ಪಿರುವ ಘಟನೆ ಭೋಪಾಲ್‌ನಲ್ಲಿ ನಡೆದಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 34ನೇ ಅಖಿಲ ಭಾರತ ಅಂಚೆ ಹಾಕಿ ಪಂದ್ಯಾವಳಿಯನ್ನು ಅಂಚೆ ಇಲಾಖೆಯು ಮಾರ್ಚ್ 20 ರಂದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಆಯೋಜಿಸಿತ್ತು. ಅಂತಿಮ ಕಾರ್ಯಕ್ರಮಕ್ಕೂ ಮುನ್ನ ಮಾ.16ರಂದು ಇಲಾಖಾ ಕಚೇರಿಯ ನೌಕರರು ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದ್ದರು.
ಸಂತೋಷಕರ ವಾತಾವರಣವು ಶೋಕಸಾಗರವಾಗಿ ಬದಲಾಗಿತ್ತು. ಈ ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಧ್ಯಪ್ರದೇಶ ಅಂಚೆ ವೃತ್ತದ ಸಹಾಯಕ ನಿರ್ದೇಶಕ ಟೆಕ್ನಿಕಲ್ ಸುರೇಂದ್ರ ಕುಮಾರ್ ದೀಕ್ಷಿತ್ ತಮ್ಮ ಸ್ನೇಹಿತರೊಂದಿಗೆ ನೃತ್ಯ ಮಾಡುತ್ತಿದ್ದರು. ಸುರೇಂದ್ರ ಕುಮಾರ್ ದೀಕ್ಷಿತ್ ಮತ್ತು ಅವರ ಸಂಗಡಿಗರು ಬಹಳ ಹೊತ್ತು ನೃತ್ಯ ಮಾಡುತ್ತಿದ್ದರು.
कल हम कहां तुम कहां”… गाने पर डांस करते हुए जिंदगी से विदा हो गए मध्य प्रदेश डाक परिमंडल के तकनीकी असिस्टेंट डायरेक्टर*.@ABPNews @abplive pic.twitter.com/iViENoYFBA
— Nitinthakur (@Nitinreporter5) March 20, 2023
ಈ ವೇಳೆ ಅವರು ಬಸ್ ಆಜ್ ಕಿ ರಾತ್ ಹೈ ಜಿಂದಗಿ ಕಲ್ ಹಮ್ ಕಹಾಂ ತುಮ್ ಕಹಾ ಹಾಡಿಗೆ ನೃತ್ಯ ಮಾಡುತ್ತಿದ್ದಾಗ, ನಗುತ್ತಾ ಇದ್ದಕ್ಕಿದ್ದಂತೆ ನೆಲದ ಮೇಲೆ ಬಿದ್ದರು. ಮೊದಲಿಗೆ ಯಾರಿಗೂ ಏನೂ ಅರ್ಥವಾಗಲಿಲ್ಲ, ಆದರೆ ಸ್ನೇಹಿತರು ಅವರನ್ನು ಎಬ್ಬಿಸಲು ಪ್ರಯತ್ನಿಸಿದಾಗ ಅವರು ಮೃತಪಟ್ಟಿರುವುದು ತಿಳಿದುಬಂದಿತು.
ಮತ್ತಷ್ಟು ಓದಿ: ಶಸ್ತ್ರಚಿಕಿತ್ಸೆಯ ನಂತರ ಆಂಬ್ಯುಲೆನ್ಸ್‌ನಲ್ಲಿ ಮಲಗಿಕೊಂಡು ಪರೀಕ್ಷೆ ಬರೆದ ಎಸೆಸೆಲ್ಸಿ ವಿದ್ಯಾರ್ಥಿನಿ
ಮಾರ್ಚ್ 17 ರಂದು ರಾಜಧಾನಿ ಭೋಪಾಲ್‌ನ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ತಂಡಗಳ ನಡುವೆ ಫೈನಲ್ ಪಂದ್ಯವನ್ನು ಆಯೋಜಿಸಲಾಗಿತ್ತು, ಈ ಕಾರಣದಿಂದಾಗಿ ಈ ಸಂಭ್ರಮಾಚರಣೆ ಪಾರ್ಟಿಯನ್ನು ಹಿಂದಿನ ರಾತ್ರಿ ಆಯೋಜಿಸಲಾಗಿತ್ತು.
ಅಂತಿಮ ಪಂದ್ಯಕ್ಕೂ ಮುನ್ನ ಇಲಾಖೆಯ ಎಲ್ಲಾ ನೌಕರರು ಮತ್ತು ಅಧಿಕಾರಿಗಳು ಸುಭಾಷ್ ನಗರ ವಿಶ್ರಾಮ್ ಘಾಟ್‌ಗೆ ಆಗಮಿಸಿ ದೀಕ್ಷಿತ್ ಅವರಿಗೆ ಅಂತಿಮ ವಿದಾಯ ಹೇಳಿದರು. ಮಾಹಿತಿಯ ಪ್ರಕಾರ, ಸುರೇಂದ್ರ ಕುಮಾರ್ ದೀಕ್ಷಿತ್ ಅವರಿಗೆ ಕೇವಲ 55 ವರ್ಷ ವಯಸ್ಸಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:18 pm, Tue, 21 March 23