ಜನರ ಆಶೀರ್ವಾದ ಕೇಳಲು ಹೊರಡುತ್ತಿದ್ದಾರೆ ಕೇಂದ್ರ ಸಚಿವರು; ಆಗಸ್ಟ್​ 16ರಿಂದ ಪ್ರಾರಂಭ ಬಿಜೆಪಿ ಜನಾಶೀರ್ವಾದ ಯಾತ್ರೆ

| Updated By: Lakshmi Hegde

Updated on: Aug 12, 2021 | 4:50 PM

BJP Jan Ashirwad Yatra: ಸ್ವಾತಂತ್ರ್ಯೋತ್ಸವದ ಮರುದಿನ ಅಂದರೆ ಅಗಸ್ಟ್​ 16ರಿಂದ ಈ ಜನಾಶೀರ್ವಾದ ಯಾತ್ರೆ ಶುರುವಾಗಲಿದೆ. ಈ ಱಲಿಯನ್ನು ಕೇಂದ್ರ ಇಲಾಖೆ ರಾಜ್ಯ ಸಚಿವರುಗಳು ಪ್ರಾರಂಭಿಸಲಿದ್ದು, ಅದರಲ್ಲಿ ಕ್ಯಾಬಿನೆಟ್ ದರ್ಜೆಯ ಹೊಸ ಸಚಿವರುಗಳು ಪಾಲ್ಗೊಳ್ಳಲಿದ್ದಾರೆ.

ಜನರ ಆಶೀರ್ವಾದ ಕೇಳಲು ಹೊರಡುತ್ತಿದ್ದಾರೆ ಕೇಂದ್ರ ಸಚಿವರು; ಆಗಸ್ಟ್​ 16ರಿಂದ ಪ್ರಾರಂಭ ಬಿಜೆಪಿ ಜನಾಶೀರ್ವಾದ ಯಾತ್ರೆ
ಬಿಜೆಪಿ
Follow us on

ಭಾರತೀಯ ಜನತಾ ಪಕ್ಷ (ಬಿಜೆಪಿ -BJP) ಜನರನ್ನು ತಲುಪುವ ನಿಟ್ಟಿನಲ್ಲಿ ಇದೀಗ ಜನಾಶೀರ್ವಾದ ಯಾತ್ರೆಯನ್ನು ಪ್ರಾರಂಭಿಸಲು ಮುಂದಾಗಿದೆ. ಇದು ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರ ಸಂಪುಟ ಸೇರ್ಪಡೆಯಾದ 39 ಹೊಸ ಸಚಿವರ ಜನಾಶೀರ್ವಾದ ಯಾತ್ರೆಯಾಗಿದೆ. ದೊಡ್ಡ ಮಟ್ಟದ ಱಲಿ ಮೂಲಕ ಜನರನ್ನು ತಲುಪುವ ಹೊಸ ಯೋಜನೆಯಾಗಿದೆ.

ಸ್ವಾತಂತ್ರ್ಯೋತ್ಸವದ ಮರುದಿನ ಅಂದರೆ ಅಗಸ್ಟ್​ 16ರಿಂದ ಈ ಜನಾಶೀರ್ವಾದ ಯಾತ್ರೆ ಶುರುವಾಗಲಿದೆ. ಈ ಱಲಿಯನ್ನು ಕೇಂದ್ರ ಇಲಾಖೆ ರಾಜ್ಯ ಸಚಿವರುಗಳು ಪ್ರಾರಂಭಿಸಲಿದ್ದು, ಅದರಲ್ಲಿ ಕ್ಯಾಬಿನೆಟ್ ದರ್ಜೆಯ ಹೊಸ ಸಚಿವರುಗಳು ಪಾಲ್ಗೊಳ್ಳಲಿದ್ದಾರೆ. ಆಗಸ್ಟ್​ 16ರಿಂದ ಶುರುವಾಗುವ ಈ ಜನಾಶೀರ್ವಾದ ಯಾತ್ರೆ ಸುಮಾರು 22 ರಾಜ್ಯಗಳಿಂದ, ಒಟ್ಟು 19,567 ಕಿಮೀಗಳಷ್ಟು ದೂರ ಸಂಚರಿಸಲಿದೆ. 22 ರಾಜ್ಯಗಳ, 265 ಜಿಲ್ಲೆಗಳು ಮತ್ತು 212 ಲೋಕಸಭಾ ಕ್ಷೇತ್ರಗಳ ಮೂಲಕ ಈ ನೂತನ ಸಚಿವರ ಜನಾಶೀರ್ವಾದ ಯಾತ್ರೆ ಸಂಚಾರ ಮಾಡಲಿದೆ.

ಕಳೆದ ವಾರ ಈ ಬಗ್ಗೆ ಮಾತನಾಡಿದ್ದ ಬಿಜೆಪಿಯ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಇತ್ತೀಚೆಗೆ ಸಂಪುಟ ಸೇರ್ಪಡೆಯಾದ ಹೊಸ ಸಚಿವರು, ಜನರ ಆಶಿರ್ವಾದ ಪಡೆಯಲು ಯಾತ್ರೆ ಹೊರಡಲಿದ್ದಾರೆ. ಸಮಾಜದ ದುರ್ಬಲ ವರ್ಗಗಳು ಮತ್ತು ವಿವಿಧ ಬಡ ಸಮುದಾಯಗಳ ಏಳ್ಗೆಗೆ ಬಿಜೆಪಿ ನೇತೃತ್ವದ ಸರ್ಕಾರ ಪ್ರಾತಿನಿಧ್ಯ ನೀಡಲಿದೆ ಎಂಬ ಸಂದೇಶವನ್ನು ಹೊತ್ತು ಈ ಯಾತ್ರೆ ಸಂಚಾರ ಮಾಡಲಿದೆ ಎಂದಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನ ಆಗಸ್ಟ್​ 11ರಂದೇ ಮುಕ್ತಾಯವಾಗಿದ್ದು, ಇನ್ನು ಸ್ವಾತಂತ್ರ್ಯೋತ್ಸವ ಮುಗಿಯುತ್ತಿದ್ದಂತೆ ಬಿಜೆಪಿ ಜನಾಶೀರ್ವಾದ ಯಾತ್ರೆ ಶುರುವಾಗಲಿದೆ. ಈ ಮಧ್ಯೆ ಕೊರೊನಾ ಮೂರನೇ ಅಲೆಯೂ ಎದ್ದಿದೆ..!

ಇದನ್ನೂ ಓದಿ: ‘ದುಡ್ಡು ಕೊಟ್ಟರೆ ಮಾತ್ರ ಬಾಗಿಲು ತೆಗಿತೀನಿ’; ಸಲ್ಮಾನ್​ ಖಾನ್​ ತಮ್ಮನನ್ನೇ ಹೊರಗೆ ನಿಲ್ಲಿಸಿ, ವಾಪಸ್​​ ಕಳಿಸಿದ ಭೂಪ

Gehana Vasisth: ಅಶ್ಲೀಲ ಸಿನಿಮಾ ದಂಧೆ ಪ್ರಕರಣದಲ್ಲಿ ನಟಿ ಗೆಹನಾಗೆ ಮತ್ತೊಂದು ಸಂಕಷ್ಟ; ಬಂಧನದ ಭೀತಿ

Published On - 4:46 pm, Thu, 12 August 21