ಚೆನ್ನೈನ ಕಿಲ್ಪಾಕ್​​ ಸಮೀಪದ ದೇವಾಲಯದ ಉತ್ಸವದಲ್ಲಿ ಭಾಗಿಯಾದ 20 ಮಂದಿಗೆ ಕೊವಿಡ್, ಮಹಿಳೆ ಸಾವು

Covid 19: ಬುಧವಾರ ಜಿಸಿಸಿ ಐಪಿಸಿ ಸೆಕ್ಷನ್ 188 ಮತ್ತು ಕೊವಿಡ್ -19 ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ದೊಡ್ಡ ಕೂಟಗಳನ್ನು ತಪ್ಪಿಸುವ ದೃಷ್ಟಿಯಿಂದ ಸರ್ಕಾರವು ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿದೆ

ಚೆನ್ನೈನ ಕಿಲ್ಪಾಕ್​​ ಸಮೀಪದ ದೇವಾಲಯದ ಉತ್ಸವದಲ್ಲಿ ಭಾಗಿಯಾದ 20 ಮಂದಿಗೆ ಕೊವಿಡ್, ಮಹಿಳೆ ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 12, 2021 | 3:52 PM

ಚೆನ್ನೈ: ಚೆನ್ನೈನ ಕಿಲ್ಪಾಕ್ ಬಳಿಯ ವರದಮ್ಮಾಲ್ ಗಾರ್ಡನ್ ಸ್ಟ್ರೀಟ್‌ನಲ್ಲಿ ಆಗಸ್ಟ್ 2 ರಂದು ದೇವಾಲಯದ ಉತ್ಸವದಲ್ಲಿ ಪಾಲ್ಗೊಂಡಿದ್ದ 20 ಜನರಿಗೆ ಕೊವಿಡ್ ದೃಢಪಟ್ಟಿದೆ.  ವರದಿಯ ಪ್ರಕಾರ ದೇವಾಲಯದಲ್ಲಿ  ವಾರ್ಷಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 300 ಜನರು ಭಾಗವಹಿಸಿದ್ದರು. ಈ ಪೈಕಿ 47 ವರ್ಷದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಆಕೆಗೆ ಸಕ್ಕರೆ ಕಾಯಿಲೆ ಇತ್ತು, ಕೊವಿಡ್ ಲಸಿಕೆ ಹಾಕಿರಲಿಲ್ಲ. ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಿಗೆ ಕೊವಿಡ್ ದೃಢಪಟ್ಟ ನಂತಕ ಕೊವಿಡ್ -19 ಕ್ಲಸ್ಟರ್ ಅನ್ನು ಗುರುತಿಸಿದ ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ), ಹರಡುವುದನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರೊಂದಿಗೆ ನಿಕಟ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚುವುದು ಮತ್ತು ಪರೀಕ್ಷಿಸುವುದನ್ನು ಕಾರ್ಪೊರೇಷನ್ ಮಾಡಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಜನರ ಮಾದರಿಗಳನ್ನು ಆಗಸ್ಟ್ 7, 8 ಮತ್ತು 9 ರಂದು ತೆಗೆದುಕೊಳ್ಳಲಾಗಿದೆ ಮತ್ತು ಅವರು ಮತ್ತೆ ಕೆಲವು ದಿನಗಳಲ್ಲಿ ಮಾದರಿಯನ್ನು ತೆಗೆದುಕೊಳ್ಳುತ್ತಾರೆ ಎಂದು ಕಾರ್ಪೊರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ ಸೋಂಕಿತ ಜನರು ಸ್ಥಿರವಾಗಿದ್ದು ಇಎಸ್‌ಐ, ನಗರದ ಕೆಎಂಸಿ ಆಸ್ಪತ್ರೆಗಳಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ದೇವಾಲಯದ ಪಕ್ಕದಲ್ಲಿರುವ ಬೀದಿಗಳನ್ನು ಯಾವುದೇ ಸಾರ್ವಜನಿಕ ಸಂಚಾರವನ್ನು ತಪ್ಪಿಸಲು ಬ್ಯಾರಿಕೇಡ್ ಇರಿಸಲಾಗಿದೆ.

ಬುಧವಾರ ಜಿಸಿಸಿ ಐಪಿಸಿ ಸೆಕ್ಷನ್ 188 ಮತ್ತು ಕೊವಿಡ್ -19 ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ದೊಡ್ಡ ಕೂಟಗಳನ್ನು ತಪ್ಪಿಸುವ ದೃಷ್ಟಿಯಿಂದ ಸರ್ಕಾರವು ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿದೆ ಎಂದು ಅದು ಹೇಳಿದೆ. ಚೆನ್ನೈನಲ್ಲಿ ಈವೆಂಟ್‌ನ ಆಯೋಜಕರಿಂದ ವಿವರಣೆ ಕೇಳಲಾಗಿದೆ ಎಂದು ಅದು ಹೇಳಿದೆ.

ಸರ್ಕಾರ ಸೂಚಿಸಿದ ಕೊವಿಡ್ -19 ಮಾರ್ಗಸೂಚಿ ಉಲ್ಲಂಘಿಸಿದ ಸುಮಾರು 2,812 ಮದುವೆ ಸಭಾಂಗಣ, 60 ಹೋಟೆಲ್‌ಗಳು ಪತ್ತೆಯಾಗಿವೆ ಮತ್ತು 2.29 ಲಕ್ಷ ರೂ.ಗಳನ್ನು ದಂಡವಾಗಿ ಸಂಗ್ರಹಿಸಲಾಗಿದೆ ಎಂದು ಜಿಸಿಸಿ ಹೇಳಿದೆ.

ನಾಗರಿಕ ಸಂಸ್ಥೆಯ ಪ್ರಕಾರ, ಮೇ 2021 ರಿಂದ ಇಲ್ಲಿಯವರೆಗೆ, ಕೊವಿಡ್ -19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ರೂ 3.70 ಕೋಟಿ ದಂಡವನ್ನು ಸಂಗ್ರಹಿಸಲಾಗಿದೆ.  ಚೆನ್ನೈನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಆರೋಗ್ಯ ಕಾರ್ಯದರ್ಶಿ ಜೆ ರಾಧಾಕೃಷ್ಣನ್, ಪಾಸಿಟಿವ್ ಪರೀಕ್ಷೆ ಮಾಡಿದ ಯಾರಿಗೂ ಲಸಿಕೆ ಹಾಕಿಲ್ಲ. ಇನ್ನೂ ಲಸಿಕೆ ತೆಗೆದುಕೊಳ್ಳದ ನಿವಾಸಿಗಳಿಗೆ ಲಸಿಕೆ ಹಾಕಲು ಅಧಿಕಾರಿಗಳು ಈಗ ಈ ಪ್ರದೇಶದಲ್ಲಿ ಶಿಬಿರಗಳನ್ನು ಸ್ಥಾಪಿಸಿದ್ದಾರೆ.

ಜನರು ತಮ್ಮ ಸುರಕ್ಷತೆಯನ್ನು ಕಡಿಮೆ ಮಾಡಬಾರದು ಮತ್ತು ಮಾಸ್ಕ್ ಧರಿಸುವುದು, ಸಾಮಾಜಿಕ ದೂರವನ್ನು ಕಾಯ್ದುಕೊಳ್ಳುವುದು ಮತ್ತು ಶೂನ್ಯ ಪ್ರಕರಣಗಳನ್ನು ಸಾಧಿಸಲು ಇತರ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂದಿದ್ದಾರೆ ರಾಧಾಕೃಷ್ಣನ್.

ಚೆನ್ನೈ, ಈರೋಡ್, ಕೊಯಮತ್ತೂರು ಪ್ರದೇಶಗಳಲ್ಲಿ ಕಳೆದ ಎರಡು ವಾರಗಳಲ್ಲಿ ಕೊವಿಡ್ ಉಲ್ಬಣವಾಗಿದೆ. “ನಾವು ದಿನಕ್ಕೆ 10-20 ಕ್ಲಸ್ಟರ್‌ಗಳನ್ನು ಗುರುತಿಸುತ್ತಿದ್ದೇವೆ ಮತ್ತು ನಾವು ಅವುಗಳನ್ನು ನಿಯಂತ್ರಿಸುತ್ತೇವೆ. ಇಲ್ಲಿ ಹಬ್ಬದ ಸಮಯವಾದ್ದರಿಂದ ಆರೋಗ್ಯ ತಜ್ಞರು ನಿರಂತರ ಭಯದಲ್ಲಿದ್ದಾರೆ ಎಂದು ರಾಧಾಕೃಷ್ಣನ್ ಹೇಳಿದರು. ಆಗಸ್ಟ್ 11 ರಂದು, ಚೆನ್ನೈ 243 ಪ್ರಕರಣಗಳನ್ನು ದಾಖಲಿಸಿದ್ದು, ನಗರದಲ್ಲಿ ಒಟ್ಟು ಪ್ರಕರಣಗಳು 54,03,00 ಕ್ಕೆ ತಲುಪಿದೆ.

ಇದನ್ನೂ ಓದಿ:  Coronavirus cases in India: ದೇಶದಲ್ಲಿ 41,195 ಹೊಸ ಕೊವಿಡ್ ಪ್ರಕರಣ ಪತ್ತೆ, 490 ಮಂದಿ ಸಾವು

ಇದನ್ನೂ ಓದಿ:  National Anthem: ರಾಷ್ಟ್ರಗೀತೆ ಹೇಗೆ ಹಾಡಬೇಕು? ಹಾಡುವಾಗ ಪಾಲಿಸಬೇಕಾದ ನಿಯಮಗಳೇನು?

(Tamil Nadu 20 tested positive for Covid-19 1 dead at Kilpauk after participated in the annual religious event)

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ