West Bengal Elections 2021: ಉಚಿತ ಕೊವಿಡ್ ಲಸಿಕೆ ನೀಡುವುದಾಗಿ ಬಿಜೆಪಿ ಭರವಸೆ, ಇದು ಜುಮ್ಲಾ ಎಂದ ಟಿಎಂಸಿ
Free Covid Vaccine: ಭಾರತೀಯ ಜುಮ್ಲೆಬಾಜ್ ಪಾರ್ಟಿ ಬಂಗಾಳದಲ್ಲಿ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದೆ. ಚುನಾವಣೆಗೆ ಮುಂಚಿತವಾಗಿ ಬಿಹಾರದಲ್ಲಿ ಜನರನ್ನು ಮರುಳು ಮಾಡಲು ಅವರು ಇದೇ ರೀತಿಯ ಭರವಸೆಯನ್ನು ನೀಡಿದ್ದರು. ಅದನ್ನು ಅವರು ಮರೆತಿದ್ದಾರೆ. ಬಂಗಾಳವನ್ನು ಮೋಸಗೊಳಿಸಲಾಗುವುದಿಲ್ಲ ಎಂದ ಟಿಎಂಸಿ.
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ರಾಜ್ಯದ ಎಲ್ಲ ಜನರಿಗೆ ಉಚಿತವಾಗಿ ಕೊವಿಡ್ ಲಸಿಕೆ ನೀಡುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದೆ.ಬಿಜೆಪಿಯ ಈ ವಾಗ್ದಾನದ ಬಗ್ಗೆ ಪ್ರತಿಕ್ರಿಯಿಸಿದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಕಳೆದ ವರ್ಷ ಬಿಹಾರದ ಚುನಾವಣೆ ಮುನ್ನ ಬಿಜೆಪಿ ಅಲ್ಲಿನ ಜನರಿಗೆ ನೀಡಿದ ಭರವಸೆಯನ್ನು ಮರೆತಿದೆ ಎಂದು ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಟಿಎಂಸಿ, ಭಾರತೀಯ ಜುಮ್ಲೆಬಾಜ್ ಪಾರ್ಟಿ ಬಂಗಾಳದಲ್ಲಿ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದೆ. ಚುನಾವಣೆಗೆ ಮುಂಚಿತವಾಗಿ ಬಿಹಾರದಲ್ಲಿ ಜನರನ್ನು ಮರುಳು ಮಾಡಲು ಅವರು ಇದೇ ರೀತಿಯ ಭರವಸೆಯನ್ನು ನೀಡಿದ್ದರು. ಅದನ್ನು ಅವರು ಮರೆತಿದ್ದಾರೆ. ಬಂಗಾಳವನ್ನು ಮೋಸಗೊಳಿಸಲಾಗುವುದಿಲ್ಲ ಎಂದಿದೆ.
Here comes the free vaccine JUMLA announcement from Bharatiya Jumlebaaz Party @BJP4Bengal!
Similar promise was made by them to fool people in Bihar before elections, which they have conveniently forgotten.
Bengal won’t be fooled.
DO NOT TRUST BJP! https://t.co/3tOYEVQ66l
— All India Trinamool Congress (@AITCofficial) April 23, 2021
ಟಿಎಂಸಿ ಸಂಸದ ಡೆರೆಕ್ ಒಬ್ರೇನ್ ಬಿಜೆಪಿಯ ಉಚಿತ ಲಸಿಕೆ ಜುಮ್ಲಾ ಬಗ್ಗೆ ಜನರು ಎಚ್ಚರದಿಂದ ಇರಿ ಎಂದಿದ್ದಾರೆ. ವಿಡಿಯೊ ಟ್ವೀಟ್ ಮಾಡಿದ ಅವರು ಬಿಜೆಪಿಯ ಉಚಿತ ಲಸಿಕೆ ಜುಮ್ಲಾ (ಸುಳ್ಳು ಭರವಸೆ) ಇದು. ಬಂಗಾಳದಲ್ಲಿ ಇನ್ನೆರಡು ಹಂತದ ಚುನಾವಣೆ ಹಾಕಿ ಇದೆ. ಬಿಹಾರದಲ್ಲಿ ಬಿಜೆಪಿ ಏನು ಮಾಡಿದೆ ಎಂದು ನೆನಪಿದೆಯೇ? ಅವರು ಚುನಾವಣೆಯ ಹೊತ್ತಲ್ಲಿ ಉಚಿತ ಲಸಿಕ ನೀಡುತ್ತೇವೆ ಎಂದು ಘೋಷಿಸಿದ್ದರು. ಏನೂ ಆಗಲಿಲ್ಲ. ಚುನಾವಣೆ ಮುಗಿದಿದೆ, ಅವರು ಮರೆತಿದ್ದಾರೆ. ಉಚಿತ ಲಸಿಕೆ ಜುಮ್ಲಾ, ಬಂಗಾಳದಲ್ಲಿ ಎಲ್ಲರಿಗೂ ಲಸಿಕೆಗಳು, ಬಿಜೆಪಿಯನ್ನು ನಂಬಬೇಡಿ, ಬಿಜೆಪಿಯನ್ನು ನಂಬಬೇಡಿ ಎಂದು ಹೇಳಿದ್ದಾರೆ.
Trinamool made the commitment yesterday.
BJP announces today.
There is one BIG difference between the two. #COVID19
Watch pic.twitter.com/CfEcKSKFGU
— Derek O’Brien | ডেরেক ও’ব্রায়েন (@derekobrienmp) April 23, 2021
ಮತದಾನದ ಇನ್ನೂ ಎರಡು ಹಂತಗಳು ಬಂಗಾಳದಲ್ಲಿ ಉಳಿದಿರುವಾಗ, ಟಿಎಂಸಿ ಗುರುವಾರ ಇದೇ ರೀತಿಯ ಭರವಸೆ ನೀಡಿದೆ. ಮೇ 5 ರ ನಂತರದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುವುದು ಎಂದು ಟಿಎಂಸಿ ಟ್ವೀಟ್ ಮಾಡಿದೆ.
ಈ ಟ್ವೀಟ್ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕೊವಿಡ್ ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ನೀಡಲಾಗುವುದು ಎಂದು ಬಿಜೆಪಿ ಟ್ವೀಟ್ ಮಾಡಿದೆ.
As soon as BJP government comes to power in West Bengal, COVID-19 vaccine will be provided free of cost to everyone. pic.twitter.com/gzxCOUMjpr
— BJP Bengal (@BJP4Bengal) April 23, 2021
ಕಳೆದ ವರ್ಷ ಅಕ್ಟೋಬರ್‌ನಲ್ಲಿ ದೇಶದಲ್ಲಿ ಕೊವಿಡ್ ಮೊದಲ ಅಲೆಯ ವಿರುದ್ಧ ಹೋರಾಡುತ್ತಿರುವಾಗ, ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಬಿಜೆಪಿ, ಉಚಿತ ಲಸಿಕೆಯ ಭರವಸೆ ನೀಡಿತ್ತು. ಬಿಜೆಪಿ-ಜೆಡಿಯು ಮೈತ್ರಿ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಸರ್ಕಾರವೂ ರಚನೆಯಾಗಿದೆ. ಬುಧವಾರ ಬಿಹಾರ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೊವಿಡ್ ಲಸಿಕೆ ನೀಡುವುದಾಗಿ ಘೋಷಿಸಿತ್ತು. ಮೇ 1 ರಿಂದ ರಾಜ್ಯ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆ ನೀಡಲಿದೆಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಇಲ್ಲಿಯವರೆಗೆ, ರಾಜ್ಯ ಸರ್ಕಾರವು 45 ವರ್ಷಕ್ಕಿಂತ ಮೇಲ್ಪಟ್ಟ ಸ್ಥಳೀಯರಿಗೆ ಸರ್ಕಾರಿ ಮತ್ತು ನಿರ್ದಿಷ್ಟ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡುತ್ತಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
(BJP promises Free Covid Vaccine if voted to power in West Bengal Poll 2021 TMC calls it free vaccine jumla)
ಇದನ್ನೂ ಓದಿ: West Bengal Assembly Elections 2021: ಪಶ್ಚಿಮ ಬಂಗಾಳದಲ್ಲಿ ದುಷ್ಕರ್ಮಿಗಳಿಂದ ಬಿಜೆಪಿ ಅಭ್ಯರ್ಥಿಗೆ ಗುಂಡು