2 ಕೋಣೆಯಿರುವ ಮನೇಲಿರ್ತೀನಿ ಎಂದಿದ್ದ ಕೇಜ್ರಿವಾಲ್ ಈಗ ಬಂಗಲೆಯ ನವೀಕರಣಕ್ಕೆ 45 ಕೋಟಿ ರೂ. ಖರ್ಚು ಮಾಡಿದ್ದಾರೆ: ಬಿಜೆಪಿ

ಎರಡು ಕೋಣೆಯ ಮನೆಯಲ್ಲಿರ್ತೀವಿ ಎಂದು ಹೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಇದೀಗ ತಮ್ಮ ಬಂಗಲೆಯನ್ನು ರಿನೋವೇಟ್ ಮಾಡಲು 44 ಕೋಟಿ 78 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಬಿಜೆಪಿ ದೂರಿದೆ.

2 ಕೋಣೆಯಿರುವ ಮನೇಲಿರ್ತೀನಿ ಎಂದಿದ್ದ  ಕೇಜ್ರಿವಾಲ್ ಈಗ ಬಂಗಲೆಯ ನವೀಕರಣಕ್ಕೆ 45 ಕೋಟಿ ರೂ. ಖರ್ಚು ಮಾಡಿದ್ದಾರೆ: ಬಿಜೆಪಿ
ಅರವಿಂದ್ ಕೇಜ್ರಿವಾಲ್ ನಿವಾಸ ನವೀಕರಣ
Follow us
ನಯನಾ ರಾಜೀವ್
|

Updated on: Apr 26, 2023 | 12:51 PM

ಎರಡು ಕೋಣೆಯ ಮನೆಯಲ್ಲಿರ್ತೀವಿ ಎಂದು ಹೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಇದೀಗ ತಮ್ಮ ಬಂಗಲೆಯನ್ನು ನವೀಕರಿಸಲು  44 ಕೋಟಿ 78 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಬಿಜೆಪಿ ದೂರಿದೆ. ಟೈಮ್ಸ್​ ನೌ ನವಭಾರತದ ಆಪರೇಷನ್ ಶೀಶ್ ಮಹಲ್ ಮೂಲಕ ಇದು ಬಹಿರಂಗಗೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ಬಂದಾಗ 2 ಕೊಠಡಿಯ ಮನೆಯಲ್ಲಿ ವಾಸಿಸುತ್ತೇನೆ ಎಂದು ಹೇಳುತ್ತಿದ್ದ ಕೇಜ್ರಿವಾಲ್ ಈಗ ಮನೆಯ ರಿನೋವೇಷನ್​ಗೆ ಕೋಟಿಗಟ್ಟಲೆ ವೆಚ್ಚ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ರಾಮ್​ವೀರ್ ಸಿಂಗ್ ಬಿಧುರಿ ಹೇಳಿದ್ದಾರೆ.

ಭದ್ರತಾ ಸಿಬ್ಬಂದಿಗಳು ಇರುವುದಿಲ್ಲ, ಐಷಾರಾಮಿ ಕಾರಿನಲ್ಲಿ ಓಡಾಡುವುದಿಲ್ಲ ಎಂದು ಹೇಳಿ ಈಗ ಮನೆಯ ನವೀಕರಣಕ್ಕೆ 45 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದಿದ್ದಾರೆ. ಅವರು ಮನೆಯಿಂದ ಹೊರಡುವಾಗ 28 ಬೆಂಗಾವಲು ವಾಹನಗಳು ಚಲಿಸುತ್ತವೆ, ಪಂಜಾಬ್ ಪೊಲೀಸರೂ ಭದ್ರತೆ ನೀಡುತ್ತಿದ್ದಾರೆ, ಅವರ ಬಳಿ 50 ಲಕ್ಷಕ್ಕೂ ಅಧಿಕ ಮೌಲ್ಯದ ಕಾರು ಇದೆ ಎಂದಿದ್ದಾರೆ.

ಕೇಜ್ರಿವಾಲ್ ಅವರು ಕಟ್ಟಡದ ಬೈಲಾ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ನಾನು ಈಗಾಗಲೇ ಹೇಳಿದ್ದೇನೆ ಎಂದು ಬಿಧುರಿ ಹೇಳಿದರು. ಜನರು ಕರೋನಾದಿಂದ ಬಳಲುತ್ತಿರುವಾಗ, ಅವರಿಗೆ ಹಾಸಿಗೆಗಳು ಮತ್ತು ಆಮ್ಲಜನಕದ ವ್ಯವಸ್ಥೆಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಬಂಗಲೆಗೆ ಭಾರಿ ಹಣವನ್ನು ಖರ್ಚು ಮಾಡಿದ್ದರು.

ಮತ್ತಷ್ಟು ಓದಿ: ಅರವಿಂದ ಕೇಜ್ರಿವಾಲ್‌ಗೆ ಸಹಾನುಭೂತಿ ತೋರಿಸಬೇಡಿ: ಅಜಯ್ ಮಾಕೆನ್

ಅಧಿಕೃತ ಬಂಗಲೆಯನ್ನು ನವೀಕರಿಸಲು 44 ಕೋಟಿ 78 ಲಕ್ಷ ರೂ. ಖರ್ಚು ಮಾಡಿದ್ದಾರೆ ಸಿಎಂ ನಿವಾಸದಲ್ಲಿ ತಲಾ 8 ಲಕ್ಷ ರೂ.ಗಳ ಕರ್ಟನ್ ಅಳವಡಿಸಲಾಗಿದೆ. ಸದನದಲ್ಲಿ ಅಳವಡಿಸಿದ್ದ ಒಟ್ಟು ಪರದೆಗಳಿಗೆ ಒಂದು ಕೋಟಿ ರೂ. ಸರ್ಕಾರಿ ಮನೆಯ ಮೇಲೆ ಅಳವಡಿಸಲಾದ ಮಾರ್ಬಲ್ ಅನ್ನು ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳಲಾಗಿದೆ.

ಈ ಡಿಯರ್ ಪರ್ಲ್ ಮಾರ್ಬಲ್ ನ ಬೆಲೆ ಒಂದು ಕೋಟಿ 15 ಲಕ್ಷ ರೂಪಾಯಿ. ಈ ಅಮೃತಶಿಲೆಯ ಅಳವಡಿಕೆಯನ್ನು ಸಹ ವಿಭಿನ್ನ ರೀತಿಯಲ್ಲಿ ಮಾಡಲಾಗುತ್ತದೆ ಎಂದಿದ್ದಾರೆ.

ಕೇಜ್ರಿವಾಲ್ ವಾಸಿಸುವ ಮನೆಯನ್ನು 1942 ರಲ್ಲಿ ನಿರ್ಮಿಸಲಾಗಿದೆ ಎಂದು ಎಎಪಿ ಸಂಸದ ಮತ್ತು ಪಕ್ಷದ ವಕ್ತಾರ ರಾಘವ್ ಚಡ್ಡಾ ಹೇಳಿದ್ದಾರೆ. 80 ವರ್ಷ ವಯಸ್ಸಾಗಿತ್ತು. ಮನೆಯ ಒಳಗಿನಿಂದ ಮಲಗುವ ಕೋಣೆಯವರೆಗೂ ಸೀಲಿಂಗ್‌ನಿಂದ ನೀರು ಜಿನುಗುತ್ತಿತ್ತು ಎಂದಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್