AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಐಟಿ ವಿದ್ಯಾರ್ಥಿ ಸಾವು ಪ್ರಕರಣ: ಸಮಾಧಿಯಿಂದ ದೇಹವನ್ನು ಹೊರತೆಗೆದು ಮತ್ತೆ ಮರಣೋತ್ತರ ಪರೀಕ್ಷೆ ನಡೆಸಿ: ಕೋರ್ಟ್

ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದ ವಿದ್ಯಾರ್ಥಿಯ ಶವವನ್ನು ಮತ್ತೆ ಮರಣೋತ್ತರ ಪರೀಕ್ಷೆ ಒಳಪಡಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ನೀಡಿದೆ.

ಐಐಟಿ ವಿದ್ಯಾರ್ಥಿ ಸಾವು ಪ್ರಕರಣ: ಸಮಾಧಿಯಿಂದ ದೇಹವನ್ನು ಹೊರತೆಗೆದು ಮತ್ತೆ ಮರಣೋತ್ತರ ಪರೀಕ್ಷೆ ನಡೆಸಿ: ಕೋರ್ಟ್
ಫೈಜಾನ್ ಅಹ್ಮದ್
ಅಕ್ಷಯ್​ ಪಲ್ಲಮಜಲು​​
|

Updated on: Apr 26, 2023 | 1:29 PM

Share

ಕೋಲ್ಕತ್ತಾ: ಖರಗ್‌ಪುರದಲ್ಲಿ 2022 ಅಕ್ಟೋಬರ್ 14ರಂದು ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಐಐಟಿ ವಿದ್ಯಾರ್ಥಿಯ ಶವವನ್ನು ಮತ್ತೆ ಮರಣೋತ್ತರ ಪರೀಕ್ಷೆ ಒಳಪಡಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ನೀಡಿದೆ. ವಿದ್ಯಾರ್ಥಿಯ ದೇಹವನ್ನು ಸಮಾಧಿಯಿಂದ ಮತ್ತೆ ಹೊರಗೆ ತೆಗೆದು ಶವಪರೀಕ್ಷೆ ಮಾಡಬೇಕು ಎಂದು ಕೋರ್ಟ್​ ಆದೇಶದಲ್ಲಿ ಹೇಳಿದೆ. 23 ವರ್ಷದ ಫೈಜಾನ್ ಅಹ್ಮದ್ ಕಳೆದ ವರ್ಷ ಅಕ್ಟೋಬರ್ 14ರಂದು ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದು. ಕಾಲೇಜು ಅಧಿಕಾರಿಗಳು ಇದೊಂದು ಆತ್ಮಹತ್ಯೆ ಎಂದು ಹೇಳಿದ್ದರೂ, ಆದರೆ ಕುಟುಂಬದವರು ಆತನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಸುತ್ತಿರುವ ಕಾರಣ ಎರಡನೇ ಮರಣೋತ್ತರ ಪರೀಕ್ಷೆಯು ನಡೆಸಬೇಕು. ಈ ಪ್ರಕರಣದ ಸತ್ಯಾಸತ್ಯತೆಗಳ ಅತ್ಯಗತ್ಯ ಇದೆ ಎಂದು ಹೈಕೋರ್ಟ್ ಹೇಳಿದೆ.

ಅಸ್ಸಾಂನಲ್ಲಿ ಫೈಜಾನ್ ಅಹ್ಮದ್ ಅವರ ದೇಹವನ್ನು ಮುಸ್ಲಿಂ ವಿಧಿವಿಧಾನಗಳ ಪ್ರಕಾರ ಸಮಾಧಿ ಮಾಡಲಾಗಿದೆ. ಫೈಜಾನ್ ಅಹ್ಮದ್ ಅವರ ದೇಹವನ್ನು ಹೊರತೆಗೆಯಲು ಆದೇಶಿಸಲಾಗಿದೆ ಎಂದು ನ್ಯಾಯಮೂರ್ತಿ ರಾಜಶೇಖರ್ ಮಂಥಾ ಹೇಳಿದರು. ಈ ಬಗ್ಗೆ ತನಿಖಾಧಿಕಾರಿಗಳು ಅಸ್ಸಾಂ ಪೊಲೀಸರೊಂದಿಗೆ ಸಮನ್ವಯ ಸಾಧಿಸಬೇಕು. ಇದರ ಜತೆಗೆ ದೇಹ ಹೊರತೆಗೆಯುವ ಬಗ್ಗೆ ಅವರ ಕುಟುಂಬ ಮತ್ತು ಸಂಬಂಧಪಟ್ಟ ವ್ಯಕ್ತಿಗಳಲ್ಲಿ ಮಾತುಕತೆ ನಡೆಸಬೇಕು ಎಂದು ಹೇಳಿದೆ.

ಮೃತದೇಹ ಹೊರತೆಗೆಯಲು ವಿದ್ಯಾರ್ಥಿಯ ಕುಟುಂಬದವರು ಸಮ್ಮತಿ ಮುಖ್ಯವಾಗಿರುತ್ತದೆ ಎಂದು ಕೋರ್ಟ್ ಹೇಳಿದೆ. ಅಮಿಕಸ್ ಕ್ಯೂರಿ ಸಂದೀಪ್ ಭಟ್ಟಾಚಾರ್ಯ ಅವರು ಈ ವಿಷಯದ ವರದಿಯಲ್ಲಿ ಪ್ರಮುಖ ಉಲ್ಲೇಖಗಳನ್ನು ತಿಳಿಸಿದೆ. ಈ ವರದಿ ಪ್ರಕಾರ ಸಾವನ್ನಪ್ಪಿರುವ ವಿದ್ಯಾರ್ಥಿಯ ತಲೆಯ ಹಿಂಭಾಗದಲ್ಲಿ ವೈದ್ಯಕೀಯವಾಗಿ ಹೆಮಟೋಮಾ ಎಂದು ಕರೆಯಲ್ಪಡುವ ಎರಡು ಗೋಚರ ಗಾಯದ ಗುರುತುಗಳಿವೆ ಎಂದು ಸಂದೀಪ್ ಕುಮಾರ್ ಭಟ್ಟಾಚಾರ್ಯ, ಎಲ್.ಡಿ. ಅಮಿಕಸ್ ಕ್ಯೂರೇ ಅವರು ದೃಢಪಡಿಸಿದ್ದಾರೆ. ಆದರೆ ಈ ಬಗ್ಗೆ ಮೂಲ ಪೋಸ್ಟ್ ಮಾರ್ಟಮ್ ವರದಿಯಲ್ಲಿ ಇಲ್ಲ ಎಂದು ಹೈಕೋರ್ಟ್ ಹೇಳಿದೆ.

ಅಪರಾಧ ನಡೆದ ಸ್ಥಳದಿಂದ ಪೊಲೀಸರು ಎಂಪ್ಲುರಾ (ಸೋಡಿಯಂ ನೈಟ್ರೇಟ್) ಎಂಬ ರಾಸಾಯನಿಕವನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಮಾಂಸವನ್ನು ಸಂರಕ್ಷಿಸಲು ಸೋಡಿಯಂ ನೈಟ್ರೇಟ್ ಹಳದಿ ಮಿಶ್ರಿತ ಪುಡಿಯನ್ನು ಬಳಸಲಾಗುತ್ತದೆ ಎಂದು ಭಟ್ಟಾಚಾರ್ಯ ಅವರು ಸಲ್ಲಿಸಿರುವ ವರದಿಯಲ್ಲಿ ಇದೆ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ:ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆಗೆ ಕಾರಣ ಜಾತಿ ತಾರತಮ್ಯ, ಸ್ನೇಹಿತರೇ ಅವಮಾನಿಸುತ್ತಿದ್ದರು: ಕುಟುಂಬ ಆರೋಪ

ವಿದ್ಯಾರ್ಥಿ ಸಾವನ್ನಪ್ಪಿದ 3 ದಿನ ನಂತರ ದೇಹದಿಂದ ಯಾವುದೇ ವಾಸನೆ ಇರಲಿಲ್ಲ. ಹಾಸ್ಟೆಲ್‌ನ ಸಹ ವಿದ್ಯಾರ್ಥಿಗಳು ದೇಹ ಕೊಳೆತಾ ನಂತರವು ಆತನ ದೇಹವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಕೋರ್ಟ್​ಗೆ​ ಸಲ್ಲಿಸಿರುವ ವರದಿಯಲ್ಲಿ ಹೇಳಲಾಗಿದೆ. ಈ ರಾಸಾಯನಿಕ ಎಂಪ್ಲುರಾ (ಸೋಡಿಯಂ ನೈಟ್ರೇಟ್) ಸಾವನ್ನಪ್ಪಿರುವ ವ್ಯಕ್ತಿಯ ಮರಣದ ನಂತರ ದೇಹವನ್ನು ಸಂರಕ್ಷಿಸಲು ಇದನ್ನು ಬಳಸಲಾಗಿದೆಯೇ ಎಂಬ ಗಂಭೀರ ತಿಳಿಸಲಾಗಿದೆ ಎಂದು ನ್ಯಾಯಮೂರ್ತಿ ಮಂಥ ಹೇಳಿದರು.

ತನ್ನ ಆದೇಶವನ್ನು ರಾಜ್ಯ ಪೊಲೀಸರು ತಪ್ಪಾಗಿ ತಿಳಿದುಕೊಳ್ಳಬಾರದು ಎಂದು ನ್ಯಾಯಾಲಯ ಹೇಳಿದೆ. ಈ ಆದೇಶವು ರಾಜ್ಯ ಪೊಲೀಸರ ಮೇಲೆ ಯಾವುದೇ ಅಸ್ಪಷ್ಟತೆಯನ್ನು ಉಂಟು ಮಾಡಬಾರದು ಎಂದು ಅವರು ಪ್ರಾಥಮಿಕ ಆದೇಶದಲ್ಲಿ ತಿಳಿಸಿದ್ದಾರೆ. ಇದೀಗ ಮರಣೋತ್ತರ ಪರೀಕ್ಷೆಯ ವರದಿಯ ಮೇಲಿನ ತನಿಖೆ ಮುಂದುವರಿದಿದ್ದು. ಒಂದು ತಿಂಗಳ ಅವಧಿಯ ಒಳಗೆ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಬೇಕು ಆದೇಶ ನೀಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ