ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆಗೆ ಕಾರಣ ಜಾತಿ ತಾರತಮ್ಯ, ಸ್ನೇಹಿತರೇ ಅವಮಾನಿಸುತ್ತಿದ್ದರು: ಕುಟುಂಬ ಆರೋಪ

ಆತ್ಮಹತ್ಯೆಗೆ ಎರಡು ಗಂಟೆಗಳ ಮೊದಲು, ನಮಗೆ ಐಐಟಿಯಿಂದ ಕರೆ ಬಂದಿದೆ. 'ಹೇಗಿದ್ದೀರಿ' ಎಂದು ಅವ ಕೇಳಿದ್ದ. ಅವ ಸಾಮಾನ್ಯ ರೀತಿಯಲ್ಲೇ ಮಾತನಾಡಿದ. ನನ್ನ ಅಣ್ಣನ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಕರೆ ಮಾಡಿದ್ದು ಇಂದು ಹೊರಗೆ ಹೋಗುತ್ತೇನೆ ಎಂದಿದ್ದ

ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆಗೆ ಕಾರಣ ಜಾತಿ ತಾರತಮ್ಯ, ಸ್ನೇಹಿತರೇ ಅವಮಾನಿಸುತ್ತಿದ್ದರು: ಕುಟುಂಬ ಆರೋಪ
ಐಐಟಿ ಬಾಂಬೆ
Follow us
ರಶ್ಮಿ ಕಲ್ಲಕಟ್ಟ
|

Updated on: Feb 15, 2023 | 2:26 PM

ಮುಂಬೈ: ಐಐಟಿ ಬಾಂಬೆಯಲ್ಲಿ(IIT Bombay) 18 ವರ್ಷದ ದಲಿತ ವಿದ್ಯಾರ್ಥಿ (Dalit student) ಆತ್ಮಹತ್ಯೆ ಮಾಡಿಕೊಂಡಿದ್ದು ಜಾತಿ ನಿಂದನೆಯೇ (Caste Discrimination) ಇದಕ್ಕೆ ಕಾರಣ ಎಂದು ಆತನ ಕುಟುಂಬ ಹೇಳಿದೆ. ತನ್ನ ಜಾತಿಯಿಂದಾಗಿ ಸ್ನೇಹಿತರು ಕೂಡಾ ಅವಮಾನಿಸುತ್ತಿದ್ದರು ಎಂದು ಸಹೋದರಿ ಮತ್ತು ಅತ್ತೆಯೊಂದಿಗೆ ಈತ ಹೇಳಿದ್ದ ಎಂದು ವಿದ್ಯಾರ್ಥಿಯ ಕುಟುಂಬವು ಎನ್‌ಡಿಟಿವಿಗೆ ತಿಳಿಸಿದೆ. ಐಐಟಿ ಬಾಂಬೆಯ ಅಧಿಕಾರಿಗಳು ಕ್ಯಾಂಪಸ್‌ನಲ್ಲಿ ಯಾವುದೇ ತಾರತಮ್ಯವಿಲ್ಲ ಎಂದು ಹೇಳಿದ್ದು, ದರ್ಶನ್ ಸೋಲಂಕಿ ಎಂಬ ವಿದ್ಯಾರ್ಥಿಯ ಕುಟುಂಬವು ತಮ್ಮ ಮಗ ಕಿರುಕುಳ ಅನುಭವಿಸಿದ್ದಾನೆ ಎಂದು ಹೇಳಿದೆ. “ಕಳೆದ ತಿಂಗಳು ಅವ ಊರಿಗೆ ಬಂದಿದ್ದಾಗ ಅಲ್ಲಿ ಜಾತಿ ತಾರತಮ್ಯ ನಡೆಯುತ್ತಿದೆ ಎಂದು ಅಪ್ಪ ಅಮ್ಮನಲ್ಲಿ ಹೇಳಿದ್ದ. ಈತ ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಅವರ ಸ್ನೇಹಿತರಿಗೆ ತಿಳಿದಿತ್ತು, ಆದ್ದರಿಂದ ಅವರ ವರ್ತನೆ ಬದಲಾಯಿತು. ಅವರು ಅವನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದರು. ಅವನೊಂದಿಗೆ ಸುತ್ತಾಡುವುದನ್ನು ನಿಲ್ಲಿಸಿದರು ಎಂದು ಅವರ ಸಹೋದರಿ ಜಾನ್ವಿ ಸೋಲಂಕಿ ಹೇಳಿದ್ದಾರೆ.

ಅವನು ಸಂಕಷ್ಟದಲ್ಲಿದ್ದ. ಅವನಿಗೆ ಅಲ್ಲಿ, ಚಿತ್ರಹಿಂಸೆ ನೀಡುತ್ತಿದ್ದರು. ಅದಕ್ಕಾಗಿಯೇ ಅವ ಈ ರೀತಿ ಮಾಡಿದ ಎಂದು ದರ್ಶನ್ ತಾಯಿ ತರ್ಲಿಕಾಬೆನ್ ಸೋಲಂಕಿ ಹೇಳಿದ್ದಾರೆ.

“ಒಂದು ತಿಂಗಳ ಹಿಂದೆ ಅವ ಇಲ್ಲಿಗೆ ಬಂದಾಗ, ಅನೇಕ ವಿದ್ಯಾರ್ಥಿಗಳಿಗೆ ನಾನು ಉಚಿತವಾಗಿ ಓದುತ್ತಿರುವುದು ಇಷ್ಟವಿಲ್ಲ. ಜನರಿಗೆ ಅಸೂಯೆ ಇದೆ. “ನಾವು ಸಾಕಷ್ಟು ಖರ್ಚು ಮಾಡುತ್ತಿರುವಾಗ ನೀವು ಏಕೆ ಉಚಿತವಾಗಿ ಓದುತ್ತಿದ್ದೀರಿ” ಎಂದು ಅವರು ಕೇಳುತ್ತಾರೆ. ಅನೇಕ ವಿದ್ಯಾರ್ಥಿಗಳು ನನ್ನ ಬಗ್ಗೆ ಅಸೂಯೆ ಹೊಂದಿದ್ದಾರೆ ಎಂಂದಿದ್ದ. ಆತ ಕೆಲವು ಸ್ನೇಹಿತರೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದ ಎಂದು ದರ್ಶನ್ ಅವರ ಅತ್ತೆ ಹೇಳಿದ್ದಾರೆ.

ದರ್ಶನ್ ಸಾವಿಗೆ ಕೆಲವೇ ಗಂಟೆಗಳ ಮೊದಲು ಅವರು ತಮ್ಮ ಮಗನ ಜೊತೆ ಮಾತನಾಡಿದ್ದರು ಎಂದು ದರ್ಶನ್ ಅವರ ತಂದೆ ರಮೇಶ್ ಭಾಯ್ ಸೋಲಂಕಿ ಹೇಳಿದ್ದಾರೆ. ಆತ್ಮಹತ್ಯೆಗೆ ಎರಡು ಗಂಟೆಗಳ ಮೊದಲು, ನಮಗೆ ಐಐಟಿಯಿಂದ ಕರೆ ಬಂದಿದೆ. ‘ಹೇಗಿದ್ದೀರಿ’ ಎಂದು ಅವ ಕೇಳಿದ್ದ. ಅವ ಸಾಮಾನ್ಯ ರೀತಿಯಲ್ಲೇ ಮಾತನಾಡಿದ. ನನ್ನ ಅಣ್ಣನ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಕರೆ ಮಾಡಿದ್ದು ಇಂದು ಹೊರಗೆ ಹೋಗುತ್ತೇನೆ ಎಂದಿದ್ದ. ನಿನ್ನ ಖಾತೆಗೆ ಸ್ವಲ್ಪ ಹಣ ಕಳುಹಿಸಿದ್ದೇನೆ ಎಂದು ಹೇಳಿದಾಗ ನನ್ನ ಬಳಿ ಹಣವಿದೆ, ನನಗೆ ಹಣದ ಅಗತ್ಯವಿಲ್ಲ ಎಂದಿದ್ದರು., ಅವನು ಹೆಚ್ಚು ಖರ್ಚು ಮಾಡುತ್ತಿರಲಿಲ್ಲ, ಆದರೆ ನಾನು ಹಣ ಕಳುಹಿಸುತ್ತಿದ್ದೆ. ಈ ರೀತಿಯಾಗಬಹುದು ಎಂದು ನನಗೆ ತಿಳಿದಿರಲಿಲ್ಲ ಎಂದಿದ್ದಾರೆ ರಮೇಶ್ ಭಾಯ್ ಸೋಲಂಕಿ.

ಇದನ್ನೂ ಓದಿ:Gautam Adani: ಗೌತಮ್ ಅದಾನಿ ಈಗ ಮಾಡಬೇಕಾದ ಐದು ಕೆಲಸಗಳಿವು

ದರ್ಶನ್ ಸೋಲಂಕಿ ಅವರು  ಜಾತಿ ತಾರತಮ್ಯವನ್ನು ಎದುರಿಸಿದ್ದಾರೆ ಎಂಬ ಆರೋಪವನ್ನು ಐಐಟಿ ಬಾಂಬೆ ತಳ್ಳಿಹಾಕಿದೆ ಮತ್ತು ಅವರ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.

“IIT ಬಾಂಬೆ 1 ನೇ ವರ್ಷದ ಬಿಟೆಕ್ ವಿದ್ಯಾರ್ಥಿಯ ದುರಂತ ಸಾವಿನ ಬಗ್ಗೆ ಕೆಲವು ಸುದ್ದಿ ಲೇಖನಗಳಲ್ಲಿ ಜಾತಿ ತಾರತಮ್ಯದ ಆರೋಪಿವಿದ್ದು , ಇದು ಸಾಂಸ್ಥಿಕ ಕೊಲೆ ಎಂದು ಬಿಂಬಿಸಲಾಗಿದೆ. ಈ ಆರೋಪವನ್ನು ಸಂಸ್ಥೆ ನಿರಾಕರಿಸುತ್ತದೆ ಎಂದು ಐಐಟಿ ಬಾಂಬೆ ಹೇಳಿಕೆ ನೀಡಿದೆ. ಭಾನುವಾರ ಹಾಸ್ಟೆಲ್ ಕಟ್ಟಡದ ಏಳನೇ ಮಹಡಿಯಿಂದ ಜಿಗಿದ ದರ್ಶನ್ ಸಾವನ್ನಪ್ಪಿದ ನಂತರ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಅವರಿಗೆ ಇನ್ನೂ ಸೂಸೈಡ್ ನೋಟ್ ಸಿಕ್ಕಿಲ್ಲ, ಆದರೆ ಕ್ಯಾಂಪಸ್‌ನಲ್ಲಿ ದಲಿತ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯವೇ ಆತ್ಮಹತ್ಯೆಗೆ ಕಾರಣ ಎಂದು ವಿದ್ಯಾರ್ಥಿ ಗುಂಪು ಆರೋಪಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ