Gautam Adani: ಗೌತಮ್ ಅದಾನಿ ಈಗ ಮಾಡಬೇಕಾದ ಐದು ಕೆಲಸಗಳಿವು

ಇಕ್ಕಟ್ಟಿಗೆ ಸಿಲುಕಿರುವ ಉದ್ಯಮಿ ಗೌತಮ್ ಅದಾನಿ ಇದೀಗ ಹಿಂಡನ್​ಬರ್ಗ್ ರಿಸರ್ಚ್ ವಿರುದ್ಧ ಅಮೆರಿಕದಲ್ಲಿ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದಾರೆ. 150 ಶತಕೋಟಿ ನಷ್ಟವನ್ನು ಭರಿಸಲು ಸಾಧ್ಯವಾಗದಿದ್ದರೆ ಈ ಕಾನೂನು ಹೋರಾಟದಿಂದ ಅವರಿಗೆ ಹೆಚ್ಚಿನ ಪ್ರಯೋಜನವಾಗದು.

Gautam Adani: ಗೌತಮ್ ಅದಾನಿ ಈಗ ಮಾಡಬೇಕಾದ ಐದು ಕೆಲಸಗಳಿವು
ಗೌತಮ್ ಅದಾನಿ (ಸಂಗ್ರಹ ಚಿತ್ರ)
Follow us
Ganapathi Sharma
|

Updated on:Feb 15, 2023 | 4:48 PM

ಇಕ್ಕಟ್ಟಿಗೆ ಸಿಲುಕಿರುವ ಉದ್ಯಮಿ ಗೌತಮ್ ಅದಾನಿ (Gautam Adani) ಇದೀಗ ಹಿಂಡನ್​ಬರ್ಗ್ ರಿಸರ್ಚ್ (Hindenburg Research) ವಿರುದ್ಧ ಅಮೆರಿಕದಲ್ಲಿ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದಾರೆ. 150 ಶತಕೋಟಿ ನಷ್ಟವನ್ನು ಭರಿಸಲು ಸಾಧ್ಯವಾಗದಿದ್ದರೆ ಈ ಕಾನೂನು ಹೋರಾಟದಿಂದ ಅವರಿಗೆ ಹೆಚ್ಚಿನ ಪ್ರಯೋಜನವಾಗದು. ಬದಲಿಕೆ ಹೂಡಿಕೆದಾರರ ವಿಶ್ವಾಸವನ್ನು ಮರಳಿ ಗಳಿಸುವುದಕ್ಕಾಗಿ ಅವರು ಮಾಡಬಹುದಾದ ಐದು ವಿಚಾರಗಳು ಇಲ್ಲಿವೆ.

ಅಮೆರಿಕದ ಶಾರ್ಟ್​​ಸೆಲ್ಲರ್ ಹಿಂಡನ್​ಬರ್ಗ್ ರಿಸರ್ಚ್ ವಿರುದ್ಧ ಆ ದೇಶದಲ್ಲಿ ಕಾನೂನು ಹೋರಾಟ ನಡೆಸಲು ಗೌತಮ್ ಅದಾನಿ ನಿರ್ಧರಿಸಿರುವ ಬಗ್ಗೆ ವರದಿಯಾಗಿದೆ. ಯಾರಾದರೂ ನಿಮ್ಮ ಸಾಮ್ರಾಜ್ಯವು ಜಾಗತಿಕವಾಗಿ ಕೆಲವೇ ವಾರಗಳಲ್ಲಿ 118 ಶತಕೋಟಿ ಡಾಲರ್​​​ಗಳಷ್ಟು ಕಳೆದುಕೊಳ್ಳುವಂತೆ ಮಾಡಿದರೆ ನೀವು ಹುಚ್ಚರಾಗುವುದು ಖಂಡಿತ. ವಾಲ್​ಸ್ಟ್ರೀಟ್​ನ ಪ್ರಮುಖ ಕಾನೂನು ಹೋರಾಟ ಕಂಪನಿ ವಾಚೆಲ್, ಲಿಪ್ಟಾನ್, ರೋಸನ್ ಆ್ಯಂಡ್ ಕಾಟ್ಜ್ ಅನ್ನು ಅದಾನಿ ಕಾನೂನು ಹೋರಾಟಕ್ಕೆ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಎಲಾನ್ ಮಸ್ಕ್ 44 ಶತಕೋಟಿ ಡಾಲರ್​ಗೆ ಟ್ವಿಟರ್ ಖರೀದಿಗೆ ಮುಂದಾಗಿದ್ದಾಗ ಕಂಪನಿಯು ಕಾನೂನು ಹೋರಾಟಕ್ಕೆ ಬಳಸಿಕೊಂಡಿದ್ದ ಅದೇ ಕಂಪನಿ ವಾಚೆಲ್. ಇದರ ವಕೀಲರು ಕಡಿಮೆ ಸಂಭಾವನೆಗೆ ಸಿಗುವವರಲ್ಲ. ಗಂಟೆಗಳ ಲೆಕ್ಕದಲ್ಲಿ ದರ ವಿಧಿಸಲಾಗುತ್ತಿದ್ದು, ಎಷ್ಟೆಂಬ ಮಾಹಿತಿ ಬಹಿರಂಗವಾಗಿ ಲಭ್ಯವಿಲ್ಲ. ಇದು ಅಮೆರಿಕದ ಅತ್ಯಂತ ಲಾಭದಾಯಕ ವಹಿವಾಟು ನಡೆಸುತ್ತಿರುವ ಕಾನೂನು ಸಂಸ್ಥೆ. ಈ ಕಂಪನಿ ಹಾಗೂ ಇದರ ಪಾಲುದಾರರು ವಾರ್ಷಿಕವಾಗಿ ಸರಾಸರಿ 8 ದಶಲಕ್ಷ ಡಾಲರ್ ಲಾಭ ಗಳಿಸುತ್ತಿವೆ. ಅವರು ಇನ್ನಷ್ಟು ಶ್ರೀಮಂತರಾಗಲಿದ್ದಾರೆ ಎಂಬುದಂತೂ ನಿಜ.

ದುರದೃಷ್ಟವಶಾತ್, ಹಾನಿಯಾಗಿರುವ 150 ಶತಕೋಟಿ ಡಾಲರ್​​ ಅನ್ನು (ಷೇರು ಮಾರುಕಟ್ಟೆ ನಷ್ಟ ಮತ್ತು ಇತರ) ವಸೂಲಿ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಈ ಕಾನೂನು ಹೋರಾಟದಲ್ಲಿ ಅದಾನಿಗಿಂತಲೂ ವಕೀಲರಿಗೇ ಹೆಚ್ಚಿನ ಪ್ರಯೋಜನವಾಗಲಿದೆ. ಇದನ್ನು ಹೊರತುಪಡಿಸಿ, ಎರಡು ವರ್ಷಗಳಲ್ಲಿ ತಾನು ಸಂಗ್ರಹಿಸಿದ್ದಕ್ಕಿಂತಲೂ ಹೆಚ್ಚಿನ ದಾಖಲೆಗಳನ್ನು ಅದಾನಿ ಸಲ್ಲಿಸಬೇಕು (ಕಾನೂನು ಪ್ರಕ್ರಿಯೆಯ ಭಾಗವಾಗಿ) ಎಂದು ಹಿಂಡನ್​​ಬರ್ಗ್ ಬೇಡಿಕೆ ಇಡುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: Adani Loss: ಒಂದು ವಾರದಲ್ಲಿ ಗೌತಮ್ ಅದಾನಿ ಕಳೆದುಕೊಂಡ ಆಸ್ತಿ ಎಷ್ಟು ಲಕ್ಷಕೋಟಿ ಗೊತ್ತೇ?

ಇದನ್ನು ಬಿಟ್ಟು ಅದಾನಿ ಕೈಗೊಳ್ಳಬಹುದಾದ ಬೇರೆ ಉತ್ತಮ ಮಾರ್ಗ ಇದೆಯೇ? ಇದೆ ಎಂದು ನಾನು ಭಾವಿಸುತ್ತೇನೆ.

ಅದಾನಿ 2.0

ಆತ್ಮವಿಶ್ವಾಸದ ವಿಚಾರದಲ್ಲಿ ನೋಡಿದರೆ ಅದಾನಿ ಸಮೂಹವು ಎಲ್ಲ ಕಡೆಗಳಿಂದಲೂ ಸವಾಲು ಎದುರಿಸುವಂತೆ ಕಾಣುತ್ತಿದೆ. ನಂಬಿಕೆಯನ್ನು ಮರಳಿ ಗಳಿಸಲು ಅದಾನಿ ಮಾಡಬಹುದಾದ ಐದು ವಿಚಾರಗಳಿವೆ. ಅವುಗಳು ಹೀಗಿವೆ:

1) ಕ್ರೂಢೀಕರಣ: ಕಳೆದ ಒಂದು ದಶಕದಲ್ಲಿ ಅದಾನಿ ಸಮೂಹದ ಬೆಳವಣಿಗೆ ಮನಸಿಗೆ ಮುದ ನೀಡುವಂಥದ್ದಾಗಿದೆ. ವಿಮಾನ ನಿಲ್ದಾಣ, ಬಂದರು, ಸಿಮೆಂಟ್, ಇಂಧನ, ವಿದ್ಯುತ್, ಖಾದ್ಯ ತೈಲ ಹಾಗೂ ಮಾಧ್ಯಮ ಕ್ಷೇತ್ರದಲ್ಲಿಯೂ ಸಮೂಹವು ಗಣನೀಯ ಬೆಳವಣಿಗೆ ಸಾಧಿಸಿದೆ. ಅದಾನಿ ಸಮೂಹವು ಕೆಲವು ವ್ಯವಹಾರಗಳನ್ನು ತ್ಯಜಿಸಿ ಕೆಲವು ಉದ್ಯಮಗಳ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಲು (ಹೀಗೆ ಮಾಡುವ ಮೂಲಕ ನೈಜ ಕಾರ್ಪೊರೇಟ್ ಪ್ರತಿಸ್ಪರ್ಧಿಗಳು ಅಥವಾ ಪ್ರತಿಸ್ಪರ್ಧಿಗಳೆಂದು ಭಾವಿಸಲಾದವರ ಜತೆ ಶಾಂತಿ ಕಾಪಾಡಲು) ಇದು ಉತ್ತಮ ಸಮಯವಾಗಿದೆ.

2) ಸಾಲ ಕಡಿಮೆ ಮಾಡಿಕೊಳ್ಳುವುದು: ಅದಾನಿ ಸಮೂಹವು ಒಟ್ಟು 40 ಶತಕೋಟಿ ಡಾಲರ್ ಸಾಲ ಹೊಂದಿದೆ ಎನ್ನಲಾಗಿದೆ. ಇದು ಭಾರತದ ಒಟ್ಟು ಜಿಡಿಪಿಯ ಶೇ 1ರಷ್ಟಾಗಿದೆ. ಘನ ಸ್ವತ್ತುಗಳ ನಿರ್ಮಾಣ, ಖರೀದಿಗೆ ಹಣವನ್ನು ಬಳಸಿದ್ದರೂ ಇವುಗಳೆಲ್ಲ ಹಣಕಾಸಿನ ಹರಿವಿಗೆ ಸಂಬಂಧಿಸಿದವುಗಳಲ್ಲ. ಇವುಗಳು ಸ್ಥಿರವಾದ ಹಣಕಾಸು ಹರಿವನ್ನಷ್ಟೇ ಮಾಡಬಲ್ಲವು. ಕೆಲವು ಸ್ವತ್ತುಗಳನ್ನು ಮಾರಾಟ ಮಾಡುವುದರಿಂದ (ಕೆಲವು ಉದ್ಯಮಗಳನ್ನು ಹೊರತುಪಡಿಸಿ) ಸಮೂಹದ ಸಾಲ ಕಡಿಮೆ ಮಾಡಿಕೊಳ್ಳಲು ನೆರವಾಗಬಹುದು. ಹೆಚ್ಚು ಬಡ್ಡಿ ಪಾವತಿಸಬೇಕಾದ ಅಪಾಯದಿಂದ ಕಂಪನಿಯನ್ನು ಪಾರು ಮಾಡಬಹುದು.

3) ವೃತ್ತಿಪರಗೊಳಿಸುವಿಕೆ: ಅದಾನಿ ಸಮೂಹದ ಪ್ರಮುಖ ಹುದ್ದೆಗಳೆಲ್ಲ ಅದಾನಿ ಹಾಗೂ ಅವರ ಕುಟುಂಬದ ಸದಸ್ಯರ ಬಳಿಯೇ ಇದೆ ಎಂಬುದನ್ನೂ ಹಿಂಡನ್​​ಬರ್ಗ್ ರಿಸರ್ಚ್ ವರದಿ ಉಲ್ಲೇಖಿಸಿದೆ. ಬೆಳವಣಿಗೆ ಹೊಂದುತ್ತಿರುವ ಸಮೂಹವೊಂದರಲ್ಲಿ ವೃತ್ತಿಪರರು, ರಿಸ್ಕ್ ತೆಗೆದುಕೊಳ್ಳುವ ಸಮರ್ಥರು ಕಡಿಮೆ ಇದ್ದಾಗ ಒಂದು ಹಂತದಲ್ಲಿ ಕುಟುಂಬದ ಮಂದಿ ನಿರ್ದಿಷ್ಟ ಜವಾಬ್ದಾರಿ ವಹಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುವುದು ನಿಜ. ವಾಸ್ತವವಾಗಿ, ಅದಾನಿಯವರ ಅವಿಶ್ರಾಂತ ದುಡಿಮೆ ಇಲ್ಲದಿದ್ದರೆ ಅದಾನಿ ಸಮೂಹವು ಈ ಮಟ್ಟಕ್ಕೆ ಬೆಳವಣಿಗೆ ಹೊಂದುತ್ತಿರಲಿಲ್ಲ. ಆದರೆ, ವಿದೇಶಿ ಮತ್ತು ದೇಶೀ ಹೂಡಿಕೆದಾರರಿಂದ ಕೂಡಿದ ದೇಶದ ಅತಿದೊಡ್ಡ ಕಂಪನಿಗಳ ಸಮೂಹವಾಗಿ ಹೊರಹೊಮ್ಮಿದ ನಂತರ ಪ್ರಮುಖ ಹುದ್ದೆಗಳಿಗೆ ವೃತ್ತಿಪರರ ನೇಮಕ ಮಾಡುವುದು ಒಳ್ಳೆಯದು. ಕುಟುಂಬದವರನ್ನು ನಿರ್ದೇಶಕರ ಮಂಡಳಿಗಷ್ಟೇ ಸೀಮಿತಗೊಳಿಸುವುದು ಉತ್ತಮ.

4) ಆಡಳಿತ ಸುಧಾರಣೆ: ಬ್ರಿಟನ್​​ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸಹೋದರ ಜೋ ಜಾನ್ಸನ್ ಎಲಾರಾ ಕ್ಯಾಪಿಟಲ್ ಪಿಎಲ್​ಸಿ (ಹಿಂಡನ್​ಬರ್ಗ್ ವರದಿಯಲ್ಲಿ ಅದಾನಿ ಸಮೂಹದ ಜತೆ ಉಲ್ಲೇಖಿಸಿದ್ದ ಸಂಸ್ಥೆ) ನಿರ್ದೇಶಕನ ಸ್ಥಾನದಿಂದ ಕೆಳಗಿಳಿದಿದ್ದಾರೆ. ವಾಸ್ತವವಾಗಿ, ಜಾಗತಿಕ ಅಂಕಿಅಂಶಗಳು ಕಾರ್ಪೊರೇಟ್ ಮಂಡಳಿಗಳಿಗೆ ವಿಶ್ವಾಸಾರ್ಹತೆಯನ್ನು ನೀಡುವುದರ ಜೊತೆಗೆ ಅಧಿಕಾರದ ಕಾರ್ಯಕ್ಷೇತ್ರಕ್ಕೆ ಪ್ರವೇಶವನ್ನು ನೀಡಬೇಕು. ಹೀಗಾಗಿ ಅದಾನಿ ಸಮೂಹವು ಮಂಡಳಿಯಲ್ಲಿ ಉನ್ನತ ಜಡ್ಜ್​ಗಳ, ಅಧಿಕಾರಿಗಳ, ನಾಗರಿಕ ಸಮಾಜದ ನಾಯಕರನ್ನು ನೇಮಕ ಮಾಡಬೇಕಿದೆ.

5) ಹೊಸ ಆಡಿಟರ್​ಗಳ ನೇಮಕ: ಎಷ್ಟೇ ಉತ್ತಮ ಹೆಸರು ಮಾಡಿದ್ದರೂ 24 ವರ್ಷದ ಆಡಿಟರ್​​ ಕಂಪನಿಯಿಂದ ಶತಕೋಟಿ ಡಾಲರ್ ಹೂಡಿಕೆ ಮಾಡುವವರ ವಿಶ್ವಾಸ ವೃದ್ಧಿಸುವುದು ಸಾಧ್ಯವಿಲ್ಲ. ಅದಾನಿ ಸಮೂಹದ ದೌರ್ಬಲ್ಯದ ಬಗ್ಗೆ ಹಿಂಡನ್​ಬರ್ಗ್ ರಿಸರ್ಚ್ ಬೊಟ್ಟು ಮಾಡಿರುವ ಪ್ರಮುಖ ವಿಚಾರಗಳಲ್ಲಿ ಇದೂ ಒಂದಾಗಿದೆ. ಹೀಗಾಗಿ ಸಮಯ ವ್ಯರ್ಥ ಮಾಡದೆ ಅದಾನಿ ಅವರು ಹೂಡಿಕೆದಾರರ ವಿಶ್ವಾಸ ವೃದ್ಧಿಸುವುದಕ್ಕಾಗಿ ಶಾ & ಧನ್​ಧಾರಿಯಾ ಬದಲಾಯಿಸಬೇಕಾಗಿದೆ.

ಕೊನೆಯಲ್ಲಿ ಗೌತಮ್ ಅದಾನಿ ಎದುರು ಎರಡು ಆಯ್ಕೆಗಳಿವೆ;

1) ಶಾರ್ಟ್​​ ಸೆಲ್ಲರ್ ಹಿಂಡನ್​ಬರ್ಗ್​ ವಿರುದ್ಧದದ ಕಾನೂನು ಹೋರಾಟಕ್ಕೆ ಸಾಮರ್ಥ್ಯವನ್ನು ಮತ್ತು ಹಣವನ್ನು ವ್ಯಯಿಸುವುದು ಅಥವಾ 2) ಅದೇ ಸಾಮರ್ಥ್ಯ ಹಾಗೂ ಶಕ್ತಿಯನ್ನು ಅದಾನಿ ಸಮೂಹ 2.0 ಅನ್ನು ಬೆಳೆಸಲು ಬಳಸುವುದು. ನಾನು ಪೀಟರ್ ಡ್ರಕ್ಕರ್ ಅಲ್ಲ, ಆದರೂ ಸಲಹೆ ನೀಡುವುದಾದಲ್ಲಿ ಎರಡನೆ ಆಯ್ಕೆಯೇ ಉತ್ತಮ ಎಂದು ಹೇಳಬಲ್ಲೆ. ಇದು ಸುಲಭವಲ್ಲ. ಆದರೂ ಉತ್ತಮ ಆಯ್ಕೆಯಾಗಿದೆ.

ಆರ್​. ಶ್ರೀಧರನ್ (ವ್ಯವಸ್ಥಾಪಕ ಸಂಪಾದಕರು, ಟಿವಿ9 ಕರ್ನಾಟಕ)

Published On - 2:13 pm, Wed, 15 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ