AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adani Loss: ಒಂದು ವಾರದಲ್ಲಿ ಗೌತಮ್ ಅದಾನಿ ಕಳೆದುಕೊಂಡ ಆಸ್ತಿ ಎಷ್ಟು ಲಕ್ಷಕೋಟಿ ಗೊತ್ತೇ?

Hindenburg Research Report Effect: ವಿಶ್ವದ ಟಾಪ್-3 ಶ್ರೀಮಂತರ ಪಟ್ಟಿಯಲ್ಲಿದ್ದ ಗೌತಮ್ ಅದಾನಿ, ಇದೀಗ 20ರ ಪಟ್ಟಿಯಿಂದಲೂ ಹೊರಬಿದ್ದಿದ್ದಾರೆ. ಭಾರತದಲ್ಲಿ ಮುಕೇಶ್ ಅಂಬಾನಿಗಿಂತಲೂ ಕೆಳಗಿಳಿದು ಎರಡನೇ ಸ್ಥಾನಕ್ಕಿಳಿದಿದ್ದಾರೆ.

Adani Loss: ಒಂದು ವಾರದಲ್ಲಿ ಗೌತಮ್ ಅದಾನಿ ಕಳೆದುಕೊಂಡ ಆಸ್ತಿ ಎಷ್ಟು ಲಕ್ಷಕೋಟಿ ಗೊತ್ತೇ?
ಅದಾನಿ ಗ್ರೂಪ್ ಮತ್ತು ಗೌತಮ್ ಅದಾನಿ (ಸಂಗ್ರಹ ಚಿತ್ರ)
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 03, 2023 | 3:52 PM

Share

ಮುಂಬೈ: ಹಿಂಡನ್ಮಬರ್ಗ್ ರೀಸರ್ಚ್ ಕಂಪನಿ (Hindenburg Research Report) ಸ್ಫೋಟಕ ವರದಿ ಬಿಡುಗಡೆ ಮಾಡಿದ ಬಳಿಕ ಗೌತಮ್ ಅದಾನಿ ಮಾಲಿಕತ್ವದ ಕಂಪನಿಗಳು (Gautam Adani Group) ಒಂದು ವಾರದಲ್ಲಿ ನೂರು ಬಿಲಿಯನ್ ಡಾಲರ್ (ಸುಮಾರು 8 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಸಂಪತ್ತನ್ನು ಕಳೆದುಕೊಂಡಿದ್ದಾರೆ. ಇವು ವ್ಯವಹಾರದಲ್ಲಿ ಆದ ನಷ್ಟ ಅಲ್ಲ. ಅದಾನಿ ಗ್ರೂಪ್ ಕಂಪನಿಗಳು ಷೇರುಪೇಟೆಯಲ್ಲಿ ಮೌಲ್ಯ ಕಳೆದುಕೊಂಡಿವೆ. ಪರಿಣಾಮವಾಗಿ ಅದಾನಿ ಷೇರು ಸಂಪತ್ತಿನ ಮೊತ್ತ ಬಹಳಷ್ಟು ಕರಗಿಹೋಗಿದೆ.

ವಿಶ್ವದ ಟಾಪ್-3 ಶ್ರೀಮಂತರ ಪಟ್ಟಿಯಲ್ಲಿದ್ದ ಗೌತಮ್ ಅದಾನಿ, ಇದೀಗ 20ರ ಪಟ್ಟಿಯಿಂದಲೂ ಹೊರಬಿದ್ದಿದ್ದಾರೆ. ಭಾರತದಲ್ಲಿ ಮುಕೇಶ್ ಅಂಬಾನಿಗಿಂತಲೂ ಕೆಳಗಿಳಿದು ಎರಡನೇ ಸ್ಥಾನಕ್ಕಿಳಿದಿದ್ದಾರೆ.

ಹಿಂಡನ್ಬರ್ಗ್ ರಿಸರ್ಚ್ ರಿಪೋರ್ಟ್ ಬಂದ ದಿನದಿಂದಲೂ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಕುಸಿಯುತ್ತಲೇ ಹೋಗುತ್ತಿವೆ. ಒಂದು ವೇಳೆ ಅದಾನಿ ಗ್ರೂಪ್ ವಿರುದ್ಧ ತನಿಖೆಯೇನಾದರೂ ಆರಂಭಗೊಂಡರೆ ಷೇರು ಕುಸಿತ ಇನ್ನಷ್ಟು ತೀವ್ರತರವಾಗಿ ಆಗುವ ಸಂಭವ ಇದೆ.

ಇದನ್ನೂ ಓದಿ: Toyota Car: ಭಾರತದ ಈ ಟೆಕ್ ಕಂಪನಿ ಉದ್ಯೋಗಿಗಳಿಗಿಲ್ಲ ವಜಾ ಭೀತಿ; ಸಿಕ್ಕಿತು ಟೊಯೊಟಾ ಕಾರು ಉಡುಗೊರೆ!

ಮೊನ್ನೆಯಷ್ಟೇ ಅದಾನಿ ಎಂಟರ್ಪ್ರೈಸಸ್ ಸಂಸ್ಥೆ ತನ್ನ ಎಫ್​ಸಿಐ ಯೋಜನೆಯನ್ನು ರದ್ದು ಮಾಡಿ, ಹೂಡಿಕೆದಾರರಿಗೆ 20 ಸಾವಿರ ಕೋಟಿ ರೂ ಹಣವನ್ನು ಮರಳಿಸಲು ನಿರ್ಧರಿಸಿತು. ಅದಾದ ಬಳಿಕವೂ ಅದಾನಿ ಕಂಪನಿಗಳ ಷೇರುಗಳ ಇಳಿಕೆ ತಪ್ಪಲಿಲ್ಲ. ಇಂದು ಶುಕ್ರವಾರವೂ ವಿವಿಧ ಅದಾನಿ ಕಂಪನಿಗಳ ಷೇರುಗಳು ಕಡಿಮೆ ಬೆಲೆಗೆ ಬಿಕರಿಯಾಗಿವೆ.

ಇನ್ನು, ಅದಾನಿ ಗ್ರೂಪ್ ಕಂಪನಿಗಳು ನೀಡಿದ ಬಾಂಡ್​ಗಳನ್ನು ಅಡವಾಗಿಟ್ಟುಕೊಂಡು ಖಾಸಗಿ ಗ್ರಾಹಕರಿಗೆ ಸಾಲ ಕೊಡುವುದನ್ನು ಕ್ರೆಡಿಟ್ ಸ್ಯೂಸ್ ಮತ್ತು ಸಿಟಿ ಗ್ರೂಪ್ ಮೊದಲಾದ ದೊಡ್ಡ ಬ್ಯಾಂಕಿಂಗ್ ಸಂಸ್ಥೆಗಳು ನಿಲ್ಲಿಸಿವೆ. ಇದರಿಂದ ಗೌತಮ್ ಅದಾನಿಗೆ ಭವಿಷ್ಯದಲ್ಲಿ ಬಂಡವಾಳ ಕಲೆಹಾಕುವುದು ಕಷ್ಟವಾಗಬಹುದು ಎಂಬ ಅಭಿಪ್ರಾಯಗಳಿವೆ.

ಇದನ್ನೂ ಓದಿ: Wheat Sale: ಇ-ಹರಾಜಿನಲ್ಲಿ ಎರಡೇ ದಿನದಲ್ಲಿ 9 ಲಕ್ಷ ಟನ್ ಗೋಧಿ ಮಾರಾಟ

ಏನಿದು ಹಿಂಡನ್ಬುರ್ಗ್ ವರದಿ?

ಹಿಂಡನ್​ಬರ್ಗ್ ರೀಸರ್ಚ್ ಎಂಬುದು ಅಮೆರಿಕ ಮೂಲದ ಶಾರ್ಟ್ ಸೆಲರ್ ಸಂಸ್ಥೆಯಾಗಿದೆ. ಶಾರ್ಟ್ ಸೆಲರ್ ಎಂದರೆ ಕೆಳಗೆ ಕುಸಿದ ಷೇರುಗಳ ಮೇಲೆ ಈ ಕಂಪನಿಗಳು ಹೂಡಿಕೆ ಮಾಡುತ್ತವೆ. ಜನವರಿ 24ರಂದು ಹಿಂಡನ್ಬರ್ಗ್ ರೀಸರ್ಚ್ ಕಂಪನಿಯು ಅದಾನಿ ಗ್ರೂಪ್ ಬಗ್ಗೆ ಗುರುತರವಾದ ಆರೋಪಗಳೊಂದಿಗೆ ವರದಿ ಬಿಡುಗಡೆ ಮಾಡಿತು. ಅದಾನಿ ಕಂಪನಿಗಳು ವಂಚನೆ ಎಸಗಿವೆ. ಷೇರು ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಿವೆ. ಅಕೌಂಟಿಂಗ್ ವಂಚನೆಗಳು ನಡೆದಿವೆ ಎಂಬಿತ್ಯಾದಿ ಆರೋಪಗಳನ್ನು ಅದು ಮಾಡಿದೆ.

ಇನ್ನು, ಹಿಂಡನ್ಬರ್ಗ್ ರಿಸರ್ಚ್​ನ ವರದಿಯು ತನ್ನ ಕಂಪನಿಯ ಮೇಲೆ ಮಾತ್ರವಲ್ಲ, ಭಾರತದ ಬೆಳವಣಿಗೆಯನ್ನು ಸಹಿಸಲು ಆಗದೇ ಮಾಡಿರುವ ಸಂಚು ಎಂಬರ್ಥದಲ್ಲಿ ಅದಾನಿ ಗ್ರೂಪ್ ಪ್ರತ್ಯುತ್ತರ ನೀಡಿದೆ.

ಹಾಗೆಯೇ, ನರೇಂದ್ರ ಮೋದಿಗೆ ಆಪ್ತರಾಗಿದ್ದರಿಂದ ಗೌತಮ್ ಅದಾನಿಯ ವ್ಯಾವಹಾರಿಕ ಸಾಮ್ರಾಜ್ಯ ದೊಡ್ಡದಾಗಿ ಬೆಳೆಯಲು ಸಾಧ್ಯವಾಯಿತು ಎಂಬ ಆರೋಪಗಳೂ ಇವೆ. ಆದರೆ, ಅದಾನಿ ಇದನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ತಾವು ವೃತ್ತಿಯಲ್ಲಿ ಬೆಳೆಯಲು ಯಾವ ವೈಯಕ್ತಿಕ ನಾಯಕನ ಕಾರಣದಿಂದಲ್ಲ ಎಂದು ಅವರು ಹೇಳಿದ್ದಾರೆ.

Published On - 3:52 pm, Fri, 3 February 23

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?