ರಾಹುಲ್ ಗಾಂಧಿಯವರ ಕಾರ್ಯವೈಖರಿಯಿಂದಾಗಿ ವಿಪಕ್ಷ ನಾಯಕ ಸ್ಥಾನ ಬದಲಿಸಲು ಇಂಡಿಯಾ ಬ್ಲಾಕ್ ಚಿಂತಿಸುತ್ತಿದೆ: ಬಿಜೆಪಿ

|

Updated on: Oct 11, 2024 | 5:55 PM

ಲೋಕಸಭೆಯಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ವಿರೋಧ ಪಕ್ಷವಾಗಿರುವುದರಿಂದ ಗಾಂಧಿ ಅವರನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಸರದಿಯಂತೆ ಮಾಡುವ ಸಾಧ್ಯತೆಯ ಕುರಿತು ವಿರೋಧ ಪಕ್ಷಗಳ ನಡುವೆ ನಡೆದ ಚರ್ಚೆಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರವಾಗಿ ಬಿಜೆಪಿ ಸಂಸದರು ಹೇಳಿದ್ದಾರೆ. 

ರಾಹುಲ್ ಗಾಂಧಿಯವರ ಕಾರ್ಯವೈಖರಿಯಿಂದಾಗಿ ವಿಪಕ್ಷ ನಾಯಕ ಸ್ಥಾನ ಬದಲಿಸಲು ಇಂಡಿಯಾ ಬ್ಲಾಕ್ ಚಿಂತಿಸುತ್ತಿದೆ: ಬಿಜೆಪಿ
ರಾಹುಲ್ ಗಾಂಧಿ
Follow us on

ದೆಹಲಿ ಅಕ್ಟೋಬರ್ 11: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಪಾತ್ರವನ್ನು ಬದಲಿಸುನ ಆಲೋಚನೆಯನ್ನು ವಿರೋಧ ಪಕ್ಷವಾದ ಇಂಡಿಯಾ ಬ್ಲಾಕ್‌ನ ಘಟಕಗಳು ಅನ್ವೇಷಿಸುತ್ತಿವೆ ಎಂದು ಬಿಜೆಪಿ ಶುಕ್ರವಾರ ಹೇಳಿಕೊಂಡಿದೆ. ರಾಹುಲ್ ಗಾಂಧಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಣವು ನಂಬಿದರೆ, ಅವರು ಈ ಬದಲಾವಣೆಯನ್ನು ಮಾಡಬೇಕು ಎಂದು ಪಕ್ಷ ಹೇಳಿದೆ. ನವದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಬನ್ಸುರಿ ಸ್ವರಾಜ್, ವಿರೋಧ ಪಕ್ಷಗಳೊಳಗಿನ ಅನೇಕ ಸಮರ್ಥ ನಾಯಕರು ವಿರೋಧ ಪಕ್ಷದ ನಾಯಕನ ಪಾತ್ರವನ್ನು (LoP) ನಿರ್ವಹಿಸಬಹುದು ಎಂದು ಹೇಳಿದ್ದಾರೆ.

ಆದಾಗ್ಯೂ, ಇದು ಇಂಡಿಯಾ ಬ್ಲಾಕ್‌ನ “ಆಂತರಿಕ ವಿಷಯ” ಆಗಿರುವುದರಿಂದ ನಿರ್ಧಾರ ತೆಗೆದುಕೊಳ್ಳಲು ಅವರದು ಎಂದು ಅವರು ಸ್ಪಷ್ಟಪಡಿಸಿದರು. ಬಿಜೆಪಿಯ ಹೇಳಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರೂ, ಪಿಟಿಐ ವರದಿ ಮಾಡಿದಂತೆ, ಕನಿಷ್ಠ 10 ಪ್ರತಿಶತದಷ್ಟು ಸ್ಥಾನಗಳನ್ನು ಹೊಂದಿರುವ ಅತಿದೊಡ್ಡ ವಿರೋಧ ಪಕ್ಷದ ಸಂಸದರನ್ನು ಮಾತ್ರ ಎಲ್‌ಒಪಿಯಾಗಿ ನೇಮಿಸಬಹುದು ಎಂದು ತಜ್ಞರು ಹೇಳಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ವಿರೋಧ ಪಕ್ಷವಾಗಿರುವುದರಿಂದ ಗಾಂಧಿ ಅವರನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಸರದಿಯಂತೆ ಮಾಡುವ ಸಾಧ್ಯತೆಯ ಕುರಿತು ವಿರೋಧ ಪಕ್ಷಗಳ ನಡುವೆ ನಡೆದ ಚರ್ಚೆಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರವಾಗಿ ಬಿಜೆಪಿ ಸಂಸದರು ಹೇಳಿದ್ದಾರೆ.

“ಹೌದು, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಸರದಿಯಂತೆ ಮಾಡುವ ಮಾತು ಕೂಡ ಕೇಳಿ ಬಂದಿದೆ. ಆದರೆ ಇದು ಪ್ರತಿಪಕ್ಷಗಳ ಆಂತರಿಕ ವಿಚಾರ ಎಂದು ನಯವಾಗಿ ಹೇಳುತ್ತೇನೆ ಎಂದು ಸ್ವರಾಜ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರತಿಪಕ್ಷದಲ್ಲಿ ಸಮರ್ಥ ನಾಯಕರಿದ್ದಾರೆ ಎಂದ ಸ್ವರಾಜ್, ಪ್ರತಿಪಕ್ಷ ನಾಯಕನ ಪಾತ್ರಕ್ಕೆ ಸಂಬಂಧಿಸಿದಂತೆ ಇಂಡಿಯಾ ಮೈತ್ರಿಕೂಟವು ತಮ್ಮ ಆಯ್ಕೆಗಳನ್ನು ಪರಿಗಣಿಸಬೇಕು ಎಂದು ಸಲಹೆ ನೀಡಿದರು.

“ಹೌದು, ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ನಿಭಾಯಿಸಲು ಸಾಕಷ್ಟು ಸಮರ್ಥವಾಗಿರುವ ಅನೇಕ ನಾಯಕರು ಖಂಡಿತವಾಗಿಯೂ ವಿರೋಧ ಪಕ್ಷಗಳಲ್ಲಿದ್ದಾರೆ. ರಾಹುಲ್ ಗಾಂಧಿ ಅವರು ತಮ್ಮ ಜವಾಬ್ದಾರಿಯನ್ನು ಸಂಪೂರ್ಣ ಸಮರ್ಪಣಾಭಾವದಿಂದ ನಿಭಾಯಿಸಲು ಸಾಧ್ಯವಿಲ್ಲ ಎಂದು ಇಂಡಿಯಾ ಬಣ ಭಾವಿಸಿದರೆ, ಅವರು ಅಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಆದರೆ, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ ಅವರು, ಸದನದಲ್ಲಿ ಅತಿದೊಡ್ಡ ವಿರೋಧ ಪಕ್ಷದ ಸಂಸದರನ್ನು ಮಾತ್ರ ಎಲ್‌ಪಿಯಾಗಿ ನೇಮಿಸಬಹುದು ಎಂದು ಹೇಳಿದರು. ಏಕೈಕ ದೊಡ್ಡ ವಿರೋಧ ಪಕ್ಷವು ವಿರೋಧ ಪಕ್ಷದ ನಾಯಕನಾಗಿ ನೇಮಿಸಲು ಬಯಸುವ ವ್ಯಕ್ತಿಯನ್ನು ಪ್ರತ್ಯೇಕವಾಗಿ ಆಯ್ಕೆ ಮಾಡುತ್ತದೆ ಎಂದು ಅವರು ಹೇಳಿದರು. ಇದರಲ್ಲಿ ಸರ್ಕಾರ ಅಥವಾ ಸ್ಪೀಕರ್‌ಗೆ ಯಾವುದೇ ಪಾತ್ರವಿಲ್ಲ ಎಂದು ಅವರು ಪಿಟಿಐಗೆ ತಿಳಿಸಿದರು.

ಇದನ್ನೂ ಓದಿ: ಪೋಸ್ಟ್ ಮಾರ್ಟಂ ರಿಪೋರ್ಟ್​ನಲ್ಲಿ ಅಚ್ಚರಿಯ ಫಲಿತಾಂಶ; ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಗೆಹ್ಲೋಟ್ ಪರಾಮರ್ಶೆ

ಅತಿ ದೊಡ್ಡ ವಿರೋಧ ಪಕ್ಷ ಯಾರೊಬ್ಬರ ಹೆಸರನ್ನು ಮುಂದಿಟ್ಟರೆ ಮಾತ್ರ ಅವರನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಎಂದು ಸ್ಪೀಕರ್ ಗುರುತಿಸುತ್ತಾರೆ ಎಂದು ಆಚಾರ್ಯ ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ