AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ; ಪ್ರಧಾನಿ ನರೇಂದ್ರ ಮೋದಿ ನೇತೃತ್ವ

ಸಭೆಯಲ್ಲಿ 124 ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಹಲವು ಕೇಂದ್ರ ಸಚಿವರು ಈ ಸಭೆಯಲ್ಲಿ ಭೌತಿಕವಾಗಿ ಪಾಲ್ಗೊಳ್ಳಲಿದ್ದಾರೆ.

ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ; ಪ್ರಧಾನಿ ನರೇಂದ್ರ ಮೋದಿ ನೇತೃತ್ವ
ನರೇಂದ್ರ ಮೋದಿ
TV9 Web
| Edited By: |

Updated on: Nov 07, 2021 | 10:06 AM

Share

ದೆಹಲಿ: ಇಂದು ಭಾರತೀಯ ಜನತಾ ಪಕ್ಷ ದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಲಿದೆ.  ಇಂದು ಬೆಳಗ್ಗೆಯಿಂದಲೇ ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವ ವಹಿಸುವರು. ಮಧ್ಯಾಹ್ನ 3ಗಂಟೆಯವರೆಗೂ ಈ ಸಭೆ ಮುಂದುವರಿಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್​ ಸಿಂಗ್​ ತಿಳಿಸಿದ್ದಾರೆ. ಕಾರ್ಯಕಾರಿಣಿ ಸಭೆಯಲ್ಲಿ ಕೆಲವೇ ನಾಯಕರು ಭೌತಿಕವಾಗಿ ಹಾಜರಿರಲಿದ್ದಾರೆ. ಉಳಿದಂತೆ ವರ್ಚ್ಯುವಲ್​ ಆಗಿ ನಡೆಯಲಿದೆ ಎಂದೂ ಮಾಹಿತಿ ನೀಡಿದ್ದಾರೆ.  ಈ ಸಭೆಯಲ್ಲಿ ರಾಷ್ಟ್ರಾದ್ಯಂತ ಎಲ್ಲ ಕಾರ್ಯಕಾರಿಣಿಗಳಿಗೆ ಪ್ರಧಾನಿ ಮೋದಿ ಕೆಲವು ಮಾರ್ಗಸೂಚಿಗಳನ್ನು ನೀಡಲಿದ್ದಾರೆ ಎಂದೂ ಅರುಣ್​ ಸಿಂಗ್​ ಹೇಳಿದ್ದಾರೆ. 

ಈ ಸಭೆಯಲ್ಲಿ 124 ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಹಲವು ಕೇಂದ್ರ ಸಚಿವರು ಈ ಸಭೆಯಲ್ಲಿ ಭೌತಿಕವಾಗಿ ಪಾಲ್ಗೊಳ್ಳಲಿದ್ದಾರೆ. ಉಳಿದಂತೆ ಬೇರೆ ರಾಜ್ಯಗಳ  ಸದಸ್ಯರು, ಮುಖ್ಯಮಂತ್ರಿಗಳು ವರ್ಚ್ಯುವಲ್​ ಆಗಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.   ಮುಂದಿನ ವರ್ಷ ನಡೆಯಲಿರುವ ಪಂಚ ರಾಜ್ಯಗಳ ಚುನಾವಣೆ ಸಂಬಂಧ ಚರ್ಚೆ ನಡೆಸಲು ಬಿಜೆಪಿ ಈ ಸಭೆ ಕರೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ‘ಪುನೀತ ನಮನ’ ಕಾರ್ಯಕ್ರಮಕ್ಕೆ ಚಂದಾ ವಸೂಲಿ ಆರೋಪ; ಸ್ಪಷ್ಟನೆ ನೀಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್

Follow Us
ಮತದಾನದ ವೇಳೆ ಮುರ್ಷಿದಾಬಾದ್​ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ
ಮತದಾನದ ವೇಳೆ ಮುರ್ಷಿದಾಬಾದ್​ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ
ರಾಯಚೂರು: ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ KKRTC ಬಸ್, ತಪ್ಪಿದ ಭಾರಿ ದುರಂತ
ರಾಯಚೂರು: ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ KKRTC ಬಸ್, ತಪ್ಪಿದ ಭಾರಿ ದುರಂತ
ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂಸ್ಟೇ ಪರವಾನಗಿ ರದ್ದು
ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂಸ್ಟೇ ಪರವಾನಗಿ ರದ್ದು
ಸಾಮಾನ್ಯ ವ್ಯಕ್ತಿಯಂತೆ ಬಂದು ಮತ ಚಲಾಯಿಸಿದ ಸೂಪರ್ ಸ್ಟಾರ್ ರಜನಿಕಾಂತ್ 
ಸಾಮಾನ್ಯ ವ್ಯಕ್ತಿಯಂತೆ ಬಂದು ಮತ ಚಲಾಯಿಸಿದ ಸೂಪರ್ ಸ್ಟಾರ್ ರಜನಿಕಾಂತ್ 
ರಾಜಗಾಂಭಿರ್ಯದಿಂದ ರಸ್ತೆಗೆ ಬಂದ ಹುಲಿ: ಅಪರೂಪದ ವಿಡಿಯೋ ಇಲ್ಲಿದೆ
ರಾಜಗಾಂಭಿರ್ಯದಿಂದ ರಸ್ತೆಗೆ ಬಂದ ಹುಲಿ: ಅಪರೂಪದ ವಿಡಿಯೋ ಇಲ್ಲಿದೆ
‘ರಕ್ಷಿತಾ ರೀತಿ ನಾನು ಪ್ರೇಮ್ ಜೊತೆ ಸಂಸಾರ ಮಾಡ್ತಿದೀನಿ’; ಅರ್ಜುನ್ ಜನ್ಯ
‘ರಕ್ಷಿತಾ ರೀತಿ ನಾನು ಪ್ರೇಮ್ ಜೊತೆ ಸಂಸಾರ ಮಾಡ್ತಿದೀನಿ’; ಅರ್ಜುನ್ ಜನ್ಯ
17 ಗಂಟೆಗಳ ಹೋರಾಟದ ಬಳಿಕವೂ ಚಿಕಿತ್ಸೆ ಫಲಿಸದೆ ಹೆಣ್ಣಾನೆ ಸಾವು!
17 ಗಂಟೆಗಳ ಹೋರಾಟದ ಬಳಿಕವೂ ಚಿಕಿತ್ಸೆ ಫಲಿಸದೆ ಹೆಣ್ಣಾನೆ ಸಾವು!
ಶಾಸಕರ ಕಚೇರಿಗೇ ವಿದ್ಯುತ್ ಸಂಪರ್ಕ ಕಟ್! ಬಿಲ್ ಬಾಕಿ ಉಳಿಸಿಕೊಂಡಿದ್ದೇ ಕಾರಣ
ಶಾಸಕರ ಕಚೇರಿಗೇ ವಿದ್ಯುತ್ ಸಂಪರ್ಕ ಕಟ್! ಬಿಲ್ ಬಾಕಿ ಉಳಿಸಿಕೊಂಡಿದ್ದೇ ಕಾರಣ
ಮನೆ ಹಾಲ್ ಹ್ಯಾಂಗಿಂಗ್​ನಲ್ಲಿ ರಾಜನಂತೆ ಕುಳಿತಿದ್ದ ನಾಗರಾಜ!
ಮನೆ ಹಾಲ್ ಹ್ಯಾಂಗಿಂಗ್​ನಲ್ಲಿ ರಾಜನಂತೆ ಕುಳಿತಿದ್ದ ನಾಗರಾಜ!
ದೇವರಿಗೆ ಕಣ್ಣಿಲ್ಲ ಎಂದು ದೂರುವ ಮುನ್ನ ಈ ಸ್ಟೋರಿ ನೋಡಿ !
ದೇವರಿಗೆ ಕಣ್ಣಿಲ್ಲ ಎಂದು ದೂರುವ ಮುನ್ನ ಈ ಸ್ಟೋರಿ ನೋಡಿ !